Back To Top

 ರೈಲ್ವೆ ಇಲಾಖೆಯಿಂದ ಕಾಮಗಾರಿ: ಈ ರಸ್ತೆಗಳು ತಾತ್ಕಾಲಿಕ ಬಂದ್: Indian Railways
June 14, 2025

ರೈಲ್ವೆ ಇಲಾಖೆಯಿಂದ ಕಾಮಗಾರಿ: ಈ ರಸ್ತೆಗಳು ತಾತ್ಕಾಲಿಕ ಬಂದ್: Indian Railways

ರೈಲ್ವೆ ಇಲಾಖೆ ವತಿಯಿಂದ ಕೆಆ‌ರ್ ಪುರ(KR Puram)ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿಯಿಂದ ಕಸ್ತೂರಿನಗರ ಕಡೆ ಹೋಗುವ ರೈಲ್ವೆ ಪ್ಯಾರಲ್ ರಸ್ತೆಯಲ್ಲಿ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು: ರೈಲ್ವೆ ಇಲಾಖೆ ವತಿಯಿಂದ ಕೆಆ‌ರ್ ಪುರ(KR Puram)ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿಯಿಂದ ಕಸ್ತೂರಿನಗರ ಕಡೆ ಹೋಗುವ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದಿನಿಂದ (ಜೂನ್ 14ರಿಂದ) ಮೂರು ತಿಂಗಳು (90 ದಿನಗಳ) ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು (Traffic Diversion) ಮಾಡಲಾಗಿದೆ ಎಂದು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ.

ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ ಬೆನ್ನಿಗಾನಹಳ್ಳಿ (ಸದಾನಂದನಗರ ಬ್ರಿಡ್ಜ್) ಕಡೆಯಿಂದ ಹಳೆ ಮದ್ರಾಸ್ ರಸ್ತೆಗೆ ಸೇರುವ ಕೋಕೊ ಕೋಲಾ ಗೋಡಾನ್ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸಂಚಾರ ಸಲಹೆ ಟ್ವೀಟ್

high angle view railroad tracks min

ಪರ್ಯಾಯ ಮಾರ್ಗಗಳು ಹೀಗಿವೆ. ಹಳೆ ಮದ್ರಾಸ್ ರಸ್ತೆ ಬೆನ್ನಿಗಾನಹಳ್ಳಿ ರೈಲ್ವೆ ಬ್ರಿಡ್ಜ್ ಕಡೆಯಿಂದ ಕಸ್ತೂರಿನಗರ ಕಡೆಗೆ ಹೋಗುವ ವಾಹನ ಸವಾರರು ಡಿಓಟಿ (DOT) ಬೈಪಾಸ್ ಹೆಬ್ಬಾಳ ಸಂಚರಿಸಬಹುದಾಗಿರುತ್ತದೆ. ಮೂಲಕ ಕಸ್ತೂರಿನಗರ ಕಡೆಗೆ ಸಂಚರಿಸುವುದು. ಕಸ್ತೂರಿನಗರ ಕಡೆಯಿಂದ ಹಳೆ ಮದ್ರಾಸ್ ರಸ್ತೆ ಕಡೆಗೆ ಹೋಗುವ ವಾಹನ ಸವಾರರು ಸಂಚರಿಸಬಹುದು. ಸದಾನಂದನಗರ ಕಡೆಯಿಂದ ಎನ್.ಜಿ.ಇ.ಎಫ್ ಸಿಗ್ನಲ್ ಮೂಲಕ ಹಳೆ ಮದ್ರಾಸ್ ರಸ್ತೆ ಕಡೆಗೆ ಸಂಚರಿಸಬಹುದು. ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ಕೋರಿದ್ದಾರೆ.

ಇಂದು ಸಂಚಾರ ಸಂಪರ್ಕ ದಿವಸ ಇನ್ನು ಇಂದು (ಶನಿವಾರ) ಬೆಳಿಗ್ಗೆ 11 ಗಂಟೆಗೆ ಕೆಆರ್ ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಠಾಣಾ ಸರಹದ್ದಿನ ನಾಗರೀಕರು ಸಂಚಾರ ಸಂಬಂಧಿತ ಅಹವಾಲು ಅಭಿಪ್ರಾಯ ಸಲಹೆ ಮತ್ತು ಪರಿಹಾರದ ಕುರಿತು ಮುಕ್ತವಾದ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಲಾಗಿದೆ.

ಇದನ್ನು ಓದಿ:

https://infomindz.in/sullu-pallu-heli-nnannu-vilan-madidira-dk-shi-tharate
Prev Post

ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳು ಬೈಕ್ ಟ್ಯಾಕ್ಸಿ ಸೇವೆ ಸಂಪೂರ್ಣ ಬ್ಯಾನ್:…

Next Post

ರಾಜ್ಯದ ಕರಾವಳಿ ಭಾಗದಲ್ಲಿ ಮುಂದುವರಿದ ಮುಂಗಾರು ಮಳೆ: Rainfall in Karavali

post-bars

Leave a Comment

Related post