Back To Top

 ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌! : ಗಣಪನೇ ನನ್ನನ್ನು ಕಾಪಾಡಿದ ಎಂದ ಮಹಿಳೆ
June 13, 2025

ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌! : ಗಣಪನೇ ನನ್ನನ್ನು ಕಾಪಾಡಿದ ಎಂದ ಮಹಿಳೆ

ಮಹಿಳೆಯೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಏರ್‌ ಇಂಡಿಯಾ  (Air India) ವಿಮಾನ ಅಪಘಾತದಿಂದ ಪಾರಾಗಿದ್ದಾರೆ.

ಗುಜರಾತ್: ಮಹಿಳೆಯೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಏರ್‌ ಇಂಡಿಯಾ  (Air India) ವಿಮಾನ ಅಪಘಾತದಿಂದ ಪಾರಾಗಿದ್ದಾರೆ. ಅಹಮದಾಬಾದ್‌ನ (Ahmedabad) ಭೂಮಿ ಚೌಹಾಣ್ ಲಂಡನ್‌ಗೆ ಹೊರಟಿದ್ದರು. ಆದರೆ, ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಅಹಮದಾಬಾದ್ ವಿಮಾನ ನಿಲ್ದಾಣವನ್ನು 10 ನಿಮಿಷ ತಡವಾಗಿ ತಲುಪಿದ್ದರು. ಇದರಿಂದ ಅವರಿಗೆ ವಿಮಾನ ಏರಲು ಅನುಮತಿ ನಿರಾಕರಿಸಲಾಗಿತ್ತು. ಇದಾದ ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತದ (Air India Flight Crash) ಸುದ್ದಿ ಬಂದಿದ್ದು, ಮಹಿಳೆ, ಮಾಧ್ಯಮಗಳ ಮುಂದೆ ಗದ್ಗದಿತರಾಗಿದ್ದಾರೆ. ಈ ವಿಚಾರ ಕೇಳಿ ನನಗೆ ಭಯವಾಗಿ ಕೈಕಾಲುಗಳು ನಡುಗಲು ಪ್ರಾರಂಭಿಸಿದವು. ನಾನು ತುಂಬಾ ಹೊತ್ತು ಅದೇ ಆಘಾತದಲ್ಲಿದ್ದೆ. ಕೇವಲ 10 ನಿಮಿಷ ತಡವಾಗಿ ಬಂದಿದ್ದರಿಂದ ವಿಮಾನ ತಪ್ಪಿಸಿಕೊಂಡು ಬದುಕುಳಿದೆ. ನನ್ನ ನೆಚ್ಚಿನ ದೇವರಾದ ಗಣಪತಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಗಣಪತಿ ಬಪ್ಪಾ ನನ್ನನ್ನು ಉಳಿಸಿದ ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿ:

https://infomindz.in/karntakada-kelavade-mungaru-abbara-shuru-naleinda-male-hecchala/
Prev Post

ವಿಮಾನ ದುರಂತದಲ್ಲಿ ಬದುಕಿದ ಏಕೈಕ ಪ್ರಯಾಣಿಕ ರಮೇಶ್

Next Post

Ahmedabad Plane Crash | ಮಂಗಳೂರು ಮೂಲದ ಕ್ಲೈವ್‌ ಕುಂದರ್‌ ಸಹ ಪೈಲಟ್‌!

post-bars

Leave a Comment

Related post