Back To Top

 ವಿದ್ಯುತ್ ತಂತಿ ತಗುಲಿ 11 ವರ್ಷದ ಬಾಲಕಿ ಸಾವು

ವಿದ್ಯುತ್ ತಂತಿ ತಗುಲಿ 11 ವರ್ಷದ ಬಾಲಕಿ ಸಾವು

ಬೆಂಗಳೂರಿನಲ್ಲಿ ನಿನ್ನೆ ಘೋರವಾದ ದುರಂತ ಒಂದು ಸಂಭವಿಸಿದ್ದು, ವಿದ್ಯುತ್ ತಂತಿ ತಗುಲಿ 11 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಆನೇಕಲ್ ತಾಲೂಕಿನ ನಾರಾಯಣಘಟ್ಟದಲ್ಲಿ ನಡೆದಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ಘೋರವಾದ ದುರಂತ ಒಂದು ಸಂಭವಿಸಿದ್ದು, ವಿದ್ಯುತ್ ತಂತಿ ತಗುಲಿ 11 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಆನೇಕಲ್ ತಾಲೂಕಿನ ನಾರಾಯಣಘಟ್ಟದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಆನೇಕಲ್ ನ ನಾರಾಯಣಘಟ್ಟ ಮೂಲದ ತನಿಷ್ಕ ಎಂದು ಗುರುತಿಸಲಾಗಿದೆ.ಸಂಪಂಗಿ ಮತ್ತು ಮಂಜುಳಾ ದಂಪತಿ ಪುತ್ರಿ ತನಿಷ್ಕ, ಇಲ್ಲಿನ ವಿಸ್ಮಯ ಶಾಲೆಯಲ್ಲಿ ಓದುತ್ತಿದ್ದಳು. ಇಂದು ಶಾಲೆ ರಜೆ ಇದ್ದ ಕಾರಣ ಬಾಲಕಿ ಮನೆಯಲ್ಲಿದ್ದಳು.ಮನೆ ಮುಂದೆ ಆಟ ಆಡುವಾಗ ವಿದ್ಯುತ್ ತಂತಿ ತಗಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಸೂರ್ಯ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Prev Post

ನೇಣು ಬಿಗಿದ ಸ್ಥಿತಿಯಲ್ಲಿ ಅಮ್ಮ ಮಗಳ ಶವ ಪತ್ತೆ

Next Post

ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಶೇಕಡಾ 3ಕ್ಕಿಂತ ಹೆಚ್ಚು ಏರಿಕೆ

post-bars

Leave a Comment

Related post