ಆಟೋ ಚಾಲಕನಿಗೆ ಅವಮಾನ ಮಾಡಿದ ಹಿಂದಿ ಮಹಿಳೆ
ಕಳೆದ ವಾರವಷ್ಟೇ ಬಿಹಾರ ಮೂಲದ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಬಾರಿಸಿದ ಘಟನೆಯೂ ಮಾಸುವ ಮುನ್ನವೇ ಮತ್ತೋರ್ವ ಮಹಿಳೆ ಆಟೋ ಚಾಲಕನಿಗೆ ಅವಮಾನ ಮಾಡಿದ್ದಲ್ಲದೆ ನಮ್ಮಿಂದಲೇ ಬೆಂಗಳೂರು ಬೆಳೆಯುತ್ತಿರುವುದು ಎಂದು ದರ್ಪ ತೋರಿಸಿದ್ದಾಳೆ.
ಬೆಂಗಳೂರು: ಕಳೆದ ವಾರವಷ್ಟೇ ಬಿಹಾರ ಮೂಲದ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಬಾರಿಸಿದ ಘಟನೆಯೂ ಮಾಸುವ ಮುನ್ನವೇ ಮತ್ತೋರ್ವ ಮಹಿಳೆ ಆಟೋ ಚಾಲಕನಿಗೆ ಅವಮಾನ ಮಾಡಿದ್ದಲ್ಲದೆ ನಮ್ಮಿಂದಲೇ ಬೆಂಗಳೂರು ಬೆಳೆಯುತ್ತಿರುವುದು ಎಂದು ದರ್ಪ ತೋರಿಸಿದ್ದಾಳೆ.ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಿಹಾರದ ಮಹಿಳೆ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣ, ಇನ್ನೊಂದೆಡೆ ದಂಪತಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿತ್ತು. ಇದೀಗ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಯುವತಿ ಆಟೋ ಚಾಲಕನ ಜೊತೆಯೇ ಕಿರಿಕ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ಅದ ವಿಡಿಯೋದಲ್ಲಿ ಹಿಂದಿ ಮಾತನಾಡುವ ಮಹಿಳೆಯೊಬ್ಬಳು ಕ್ಯಾಬ್ ಬುಕ್ ಮಾಡಿದ್ದಳು. ಯುವತಿಯ ಹೇಳಿಕೆಯ ಪ್ರಕಾರ, ಆರಂಭದಲ್ಲಿ 290 ರೂಪಾಯಿ ಇತ್ತು, ಈಗ 390 ರೂ. ಬಾಡಿಗೆ ಕೇಳ್ತಾ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾಳೆ.
ಇದಕ್ಕೆ ಆಟೋ ಚಾಲಕ. ಇಲ್ಲ ಆಯಪ್ ನಲ್ಲಿ ಅಷ್ಟು ತೋರಿಸುತ್ತಿದೆ ಎಂದು ಹೇಳಿದ್ದಾನೆ. ಇದರಿಂದ ಸಿಟ್ಟಾದ ಯುವತಿ ಆಟೋ ಚಾಲಕನಿಗೆ ಹಿಂದಿಯಲ್ಲಿ ಬೈಯ್ಯಲು ಆರಂಭಿಸಿದ್ದಾಳೆ, ಈ ವೇಳೆ ಪರಿಸ್ಥಿತಿ ಮಿತಿಮೀರಿ ಜಗಳವು ಅತಿರೇಕಕ್ಕೆ ತಲುಪಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಆಟೋ ಚಾಲಕ ಎಷ್ಟೇ ಪ್ರಯತ್ನಿಸಿದರೂ ಕೂಡ ಮಹಿಳೆ ಕ್ಯಾರೇ ಎಂದಿಲ್ಲ. ಇದರಿಂದ ಸಿಟ್ಟಾದ ಚಾಲಕ ಕನ್ನಡಲ್ಲಿ ಮಾತನಾಡಿ ಮೇಡಂ ಎಂದಿದ್ದಾನೆ. ಅಷ್ಟಕ್ಕೇ ಕುಪಿತಲಾದ ಯುವತಿ ನಾವು ಬೆಂಗಳೂರಿನ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದೇವೆ, ನಿನಗೇನಾದರೂ ಗೊತ್ತಿದೆಯಾ, ನಾನು ಯಾಕೆ ಕನ್ನಡ ಮಾತಾಡಬೇಕು ಎಂದು ಪ್ರಶ್ನಿಸಿದ್ದಾಳೆ.
ಇದನ್ನು ಓದಿ: