Back To Top

 ಪತ್ನಿ ಕೊಂದು ರುಂಡದ ಜೊತೆ ಪೊಲೀಸ್ ಠಾಣೆಗೆ ಬಂದ ಭೂಪ
June 7, 2025

ಪತ್ನಿ ಕೊಂದು ರುಂಡದ ಜೊತೆ ಪೊಲೀಸ್ ಠಾಣೆಗೆ ಬಂದ ಭೂಪ

ಬೆಂಗಳೂರು : ಪತಿಯೋರ್ವ ಪತ್ನಿ ಕೊಂದು ರುಂಡದ ಜೊತೆ ಪೊಲೀಸ್ ಠಾಣೆಗೆ ಬಂದ ಘಟನೆ ನಡೆದಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರು ನಗರ ಜಿಲ್ಲೆ ಅನೇಕಲ್ ತಾಲೂಕಿನ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೆಬ್ಬಗೋಡಿ ನಿವಾಸಿ ಮಾನಸ (26) ಕೊಲೆಯಾದ ಮಹಿಳೆ.ಶಂಕರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಅಕ್ರಮ ಸಂಬಂಧದ ಹಿನ್ನೆಲೆ ಪತಿ ಶಂಕರ್ ಈ ಕೃತ್ಯ ಎಸಗಿದ್ದಾನೆ. ರಾತ್ರಿ ಕೆಲಸ ಮುಗಿಸಿ ಶಂಕರ್ ಮನೆಗೆ ಬಂದಾಗ ಪತ್ನಿ ಮಾನಸ ಪ್ರಿಯಕರನ ಜೊತೆ ಇರುವುದನ್ನು ನೋಡಿದ್ದಾನೆ . ಇದರಿಂದ ಆಕ್ರೋಶಗೊಂಡ ಪತಿ ಶಂಕರ್ ನಂತರ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ.
ನಂತರ ನೀನು ಬೇಡ ಹೋಗು ಎಂದು ಪತ್ನಿಯನ್ನು ಪ್ರಿಯಕರನ ಜೊತೆ ಕಳುಹಿಸಿದ್ದನು ಎನ್ನಲಾಗಿದೆ. ಆದರೆ ಪತ್ನಿ ಮಾನಸ ಪದೇ ಪದೇ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತ ಪತಿ ಶಂಕರ್ ಈ ಕೃತ್ಯ ಎಸಗಿದ್ದಾನೆ. ಪತ್ನಿಯನ್ನು ಕೊಂದು ರುಂಡದ ಜೊತೆ ಬೈಕ್ ನಲ್ಲಿ ಸೂರ್ಯನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಮಾಸನ ಮತ್ತು ಶಂಕರ್ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮಾನಸ ಬಾಳಲ್ಲಿ ಪ್ರಿಯಕರನೋರ್ವ ಎಂಟ್ರಿ ಕೊಟ್ಟಿದ್ದು, ಮಾನಸ ಬಾಳು ದುರಂತ ಅಂತ್ಯ ಕಂಡಿದೆ.

Prev Post

ಕಾಣೆಯಾದ ವ್ಯಕ್ತಿ ಹುಡುಕುವ ಸಂದರ್ಭ 2 ಶವ ಪತ್ತೆ: ಸಕಲೇಶಪುರದಲ್ಲಿ ಮಳೆ ಸಾವು

Next Post

ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಐವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

post-bars

Leave a Comment

Related post