ಅಸ್ಸಾಂ ಈಶಾನ್ಯ ಭಾಗದಲ್ಲಿನ ಭೀಕರ ಪ್ರವಾಹ: ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿಕೆ
ಅಸ್ಸಾಂ: ರಾಜ್ಯದ ಈಶಾನ್ಯ ಭಾಗದಲ್ಲಿನ ಭೀಕರ ಪ್ರವಾಹ ಜನರ ಜೀವನವನ್ನು ಸಂಪೂರ್ಣ ಅತಂತ್ರಗೊಳಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕೆ ಹಲವರು ಮೃತಪಟ್ಟಿದ್ದು, ಇದೀಗ ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿದೆ. ಬರೋಬ್ಬರಿ 5.5 ಲಕ್ಷಕ್ಕೂ ಅಧಿಕ ಜನರು ಪ್ರವಾಹದ ಸುಳಿಗೆ ಸಿಲುಕಿದ್ದಾರೆ ಎಂದು ವರದಿ ತಿಳಿಸಿದೆ. ಪ್ರಸ್ತುತ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಅಸ್ಸಾಂನಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿವೆ. ಅರುಣಾಚಲ ಪ್ರದೇಶದಲ್ಲಿ 10, ಮೇಘಾಲಯದಲ್ಲಿ ಆರು, ಮಿಜೋರಾಂನಲ್ಲಿ ಐದು, ಸಿಕ್ಕಿಂನಲ್ಲಿ ಮೂರು ಮತ್ತು ತ್ರಿಪುರದಲ್ಲಿ ಒಂದು ಸಾವು ದಾಖಲಾಗಿದೆ. ಅಸ್ಸಾಂ ಜನಜೀವನ ಅತಂತ್ರ: ಅಸ್ಸಾಂನ ಒಟ್ಟು 22 ಜಿಲ್ಲೆಗಳಲ್ಲಿ 5.35 ಲಕ್ಷಕ್ಕೂ ಹೆಚ್ಚು ಜನರ ಬದುಕು ಅತಂತ್ರವಾಗಿದೆ. ವರದಿಗಳ ಪ್ರಕಾರ, ಹದಿನೈದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಇದನ್ನು ಓದಿ: