Back To Top

 ಅಕ್ರಮ ಸಂಬಂಧ: ಪತ್ನಿಯನ್ನು ಅಟ್ಟಾಡಿಸಿ ಕೊಲೆ ಮಾಡಿದ ಪತಿ
June 4, 2025

ಅಕ್ರಮ ಸಂಬಂಧ: ಪತ್ನಿಯನ್ನು ಅಟ್ಟಾಡಿಸಿ ಕೊಲೆ ಮಾಡಿದ ಪತಿ

ಚಾಮರಾಜನಗರ ಟೌನ್ ಪೋಲಿಸ್ ಠಾಣೆಯ ಬಳಿಯೇ ಪತ್ನಿಯನ್ನು ಅಟ್ಟಾಡಿಸಿ ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ.ಅನ್ಯ ಜಾತಿಯ ಯುವಕನೊಂದಿಗೆ ವಿದ್ಯಾ ಓಡಿಹೋಗಿದ್ದರು.

ಚಾಮರಾಜನಗರ: ಚಾಮರಾಜನಗರ ಟೌನ್ ಪೋಲಿಸ್ ಠಾಣೆಯ ಬಳಿಯೇ ಪತ್ನಿಯನ್ನು ಅಟ್ಟಾಡಿಸಿ ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ.ಅನ್ಯ ಜಾತಿಯ ಯುವಕನೊಂದಿಗೆ ವಿದ್ಯಾ ಓಡಿಹೋಗಿದ್ದರು. ಮೂರು ತಿಂಗಳ ಹಿಂದೆ ದೊಡ್ಡಬೂವಳ್ಳಿಯ ಶ್ರೀನಾಥನ ಜೊತೆಗೆ ವಿದ್ಯಾ ಹೋಗಿದ್ದರು. ಮದುವೆಗೂ ಮೊದಲೇ ಶ್ರೀನಾಥ ಮತ್ತು ವಿದ್ಯಾ ಪರಸ್ಪರ ಪ್ರೀತಿಸುತ್ತಿದ್ದರು. ಪೋಷಕರಿಗೆ ಹೆದರಿ ಪ್ರೀತಿಯ ವಿಚಾರ ಮುಚ್ಚಿಟ್ಟು ಗಿರೀಶ್ ಜೊತೆ ವಿದ್ಯಾ ಮದುವೆಯಾಗಿದ್ದಳು.

ಎಂಟು ವರ್ಷಗಳ ಹಿಂದೆ ಕರಿನಂಜಪುರದ ವಿದ್ಯಾ ಜೊತೆಗೆ ಗಿರೀಶ್ ಮದುವೆಯಾಗಿದ್ದು, ದಂಪತಿಗೆ ಒಂದು ಗಂಡು ಮಗು, ಒಂದು ಹೆಣ್ಣು ಮಗು ಇದೆ. ಮದುವೆಯಾದ ನಂತರ ವಿದ್ಯಾ ಪ್ರಿಯಕರನ ಜೊತೆ ಸಂಪರ್ಕದಲ್ಲಿದ್ದಳು. ಮೂರು ತಿಂಗಳ ಹಿಂದೆ ಪ್ರಿಯಕರ ಶ್ರೀನಾಥ್ ಜೊತೆಗೆ ಓಡಿ ಹೋಗಿದ್ದಳು. ತಮಿಳುನಾಡಿನ ಕೊಯಮತ್ತೂರಿನಲ್ಲಿ ಪತ್ತೆ ಹಚ್ಚಿ ಪೊಲೀಸರು ಕರೆತಂದಿದ್ದರು. ಪೊಲೀಸರ ವಿಚಾರಣೆಯ ವೇಳೆ ಪತಿ ಜೊತೆ ಹೋಗಲು ವಿದ್ಯಾ ನಿರಾಕರಿಸಿದ್ದರಿಂದ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಪೊಲೀಸರು ಇರಿಸಿದ್ದರು. ನಿನ್ನೆ ರಾತ್ರಿ ಮಹಿಳಾ ಸಾಂತ್ವಾನ ಕೇಂದ್ರದ ಬಳಿಗೆ ಹೋಗಿ ಗಿರೀಶ್ ಗಲಾಟೆ ಮಾಡಿದ್ದ. ತಾನು ಕೊಡಿಸಿದ್ದ ಮೊಬೈಲ್ ವಾಪಸ್ ಕೊಡಬೇಕೆಂದು ಜಗಳವಾಡಿದ್ದ. ಈ ವೇಳೆ 112ಗೆ ಕರೆ ಮಾಡಿ ಪೊಲೀಸರಿಗೆ ವಿದ್ಯಾ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ಗಿರೀಶನನ್ನು ಸ್ಥಳದಿಂದ ಕಳುಹಿಸಿದ್ದರು. ನಾಳೆ ಠಾಣೆಗೆ ಬರುವಂತೆ ಗಿರೀಶ್, ವಿದ್ಯಾ ಅವರಿಗೆ ಪೊಲೀಸರು ಸೂಚಿಸಿದ್ದರು. ಇಬ್ಬರನ್ನೂ ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದು, ವಿದ್ಯಾ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪೊಲೀಸ್ ಠಾಣೆಯಿಂದ ಹೊರ ಬರುತ್ತಿದ್ದಂತೆ ಪತ್ನಿ ವಿದ್ಯಾ ಮೇಲೆ ಗಿರೀಶ್ ದಾಳಿ ಮಾಡಿದ್ದಾನೆ. ಕುಡುಗೋಲಿನಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ:

https://infomindz.in/royal-challengers-banglore-geluvige-prarthane/
Prev Post

ಇತಿಹಾಸದಲ್ಲೇ ಮೊದಲ ಬಾರಿಗೆ RCB ಗೆ ತಂಡ ಮೊದಲ ಚಾಂಪಿಯನ್ ಪಟ್ಟ: ವಿಜಯ…

Next Post

ಪಾಕ್ ನ 6 ಪಿಎಎಫ್ ಫೈಟರ್ ಜೆಟ್, 10 ಕ್ಕೂ ಹೆಚ್ಚು ಯುಸಿಎವಿಗಳನ್ನು…

post-bars

Leave a Comment

Related post