ಪಂಜಾಬ್ ಕಿಂಗ್ಸ್ ಸಹ-ಮಾಲಕಿ ಪ್ರೀತಿ ಜಿಂಟಾ ಸಂಭ್ರಮಾಚರಣೆ: ಕಣ್ಸನ್ನೆಗೆ ನೆಟ್ಟಿಗರು ಫಿದಾ
ಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂತಿಮ ಹಂತಕ್ಕೆ ಬಂದಿದೆ. ಈ ಐಪಿಎಲ್ ಪಂಜಾಬ್ ಕಿಂಗ್ಸ್ ( PBKS ) ಪಾಲಿಗೆ ಮರೆಯಲಾಗದ ಟೂರ್ನಿಯಾಗಿದೆ. ಏಕೆಂದರೆ, 11 ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್ ತಂಡ ಫೈನಲ್ ಪ್ರವೇಶ ಮಾಡಿದೆ.̤
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂತಿಮ ಹಂತಕ್ಕೆ ಬಂದಿದೆ. ಈ ಐಪಿಎಲ್ ಪಂಜಾಬ್ ಕಿಂಗ್ಸ್ ( PBKS ) ಪಾಲಿಗೆ ಮರೆಯಲಾಗದ ಟೂರ್ನಿಯಾಗಿದೆ. ಏಕೆಂದರೆ, 11 ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್ ತಂಡ ಫೈನಲ್ ಪ್ರವೇಶ ಮಾಡಿದೆ.ಮೊನ್ನೆ (ಜೂನ್ 01) ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದ ಪಂಜಾಬ್, ಫೈನಲ್ ಪ್ರವೇಶಿಸಿದೆ. ಈ ಗೆಲುವಿನ ಹಿಂದಿನ ಪ್ರಮುಖ ಕಾರಣ ನಾಯಕ ಶ್ರೇಯಸ್ ಅಯ್ಯರ್ ಅವರ ಅದ್ಭುತ ಪ್ರದರ್ಶನ. ಕೇವಲ 41 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ 87 ರನ್ ಗಳಿಸಿ ಅಜೇಯರಾಗಿ ಉಳಿದ ಅಯ್ಯರ್, ತಂಡಕ್ಕೆ ಗೆಲುವು ತಂದುಕೊಟ್ಟಿದ್ದಲ್ಲದೆ, ಅಭಿಮಾನಿಗಳ ಹೃದಯವನ್ನೂ ಗೆದ್ದರು. ತಂಡದ ಇನ್ನಿಂಗ್ಸ್‌ನ ಆರಂಭದಿಂದಲೂ ಹೋರಾಡಿದ ಶ್ರೇಯಸ್ ಅಯ್ಯರ್, ನೆಹಾಲ್ ವಧೇರಾ ( 29 ಎಸೆತಗಳಲ್ಲಿ 48 ರನ್) ಅವರೊಂದಿಗೆ ಸೇರಿ 84 ರನ್‌ಗಳ ನಿರ್ಣಾಯಕ ಜೊತೆಯಾಟ ನೀಡಿದರು. ಜೋಶ್ ಇಂಗ್ಲಿಸ್ (38) ವೇಗವಾಗಿ ರನ್ ಗಳಿಸಿದರು. ಅಯ್ಯರ್ ಅವರು 19ನೇ ಓವರ್‌ನಲ್ಲಿ ನಾಲ್ಕು ಬೃಹತ್ ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯವನ್ನು ಒಂದು ಓವರ್ ಮೊದಲೇ ಕೊನೆಗೊಳಿಸಿದರು.
ಮೈದಾನದಲ್ಲಿ ಮಾತ್ರವಲ್ಲದೆ, ಬೌಂಡರಿಯ ಹೊರಗೆಯೂ ಪಂಜಾಬ್ ಕಿಂಗ್ಸ್ ಸಹ-ಮಾಲಕಿ ಪ್ರೀತಿ ಜಿಂಟಾ ಸಂಭ್ರಮಾಚರಣೆ ವಿಶೇಷವಾಗಿರುತ್ತದೆ. ಗೆಲುವಿನ ನಂತರ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ರೀತಿ ಅಭಿಮಾನಿಗಳನ್ನು ಮೋಡಿ ಮಾಡಿದೆ. ಮೈದಾನದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಕೋಚ್ ರಿಕಿ ಪಾಂಟಿಂಗ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದ್ದನ್ನು ನೀವು ನೋಡಿರುತ್ತೀರಿ.
ಅದೇ ರೀತಿ ಕಳೆದ ಒಂದು ದಿನದಿಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ತಂಡದ ಆಟಗಾರನ ಮುಂದೆ ಹಾದು ಹೋಗುವಾಗ ಪ್ರೀತಿ ಜಿಂಟಾ ತಮ್ಮ ಕಣ್ಣನ್ನು ಮಿಟುಕಿಸುತ್ತಾ, ನಗು ಚೆಲ್ಲುತ್ತಾ ಹೋಗುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ. ವಿಡಿಯೋ ನೋಡಿದವರು ಪ್ರೀತಿ ಜಿಂಟಾ ಅವರು ಯಾರಿಗೆ ಕಣ್ಣು ಮಿಟುಕಿಸಿದರು ಎಂಬ ಪ್ರಶ್ನೆ ಕೇಳುತ್ತಿದ್ದು, ಅದಕ್ಕೆ ಕೆಲವರು ಉತ್ತರವನ್ನು ಸಹ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದರೆ, 19ನೇ ಸಂಖ್ಯೆಯ ಜೆರ್ಸಿ ಧರಿಸಿದ ಆಟಗಾರನತ್ತ ಪ್ರೀತಿ ಜಿಂಟಾ ಕಣ್ಣು ಮಿಟುಕಿಸಿರುವುದು ನಿಮಗೆ ಅರ್ಥವಾಗುತ್ತದೆ. ಪಂಜಾಬ್ ತಂಡದಲ್ಲಿ ಸದ್ಯಕ್ಕೆ 19ನೇ ನಂಬರ್ ಜರ್ಸಿ ಧರಿಸುತ್ತಿರುವುದು ನೆಹಾಲ್ ವಧೇರಾ. ಹೀಗಾಗಿ ಅವರತ್ತ ಪ್ರೀತಿ ಜಿಂಟಾ ಕಣ್ಸನ್ನೆ ಮಾಡಿದ್ದಾರೆ. ಅಂದಹಾಗೆ, ವಧೇರಾ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿದರು. ಪ್ರೀತಿ ಜಿಂಟಾ ಕಣ್ಸನ್ನೆಗೆ ನೆಟ್ಟಿಗರು ಕೂಡ ಫಿದಾ ಆಗಿದ್ದು, ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ.
ಇದನ್ನು ಓದಿ: