Back To Top

 ನಟ ಮಡುನೂರು ಮನು ಕೇಸ್‌ಗೆ ಹೊಸ ಟ್ವಿಸ್ಟ್: ದೂರು ಕೊಟ್ಟ ಒಂದೇ ದಿನಕ್ಕೆ ಸಂತ್ರಸ್ತೆ ಯು ಟರ್ನ್
May 23, 2025

ನಟ ಮಡುನೂರು ಮನು ಕೇಸ್‌ಗೆ ಹೊಸ ಟ್ವಿಸ್ಟ್: ದೂರು ಕೊಟ್ಟ ಒಂದೇ ದಿನಕ್ಕೆ ಸಂತ್ರಸ್ತೆ ಯು ಟರ್ನ್

ಕಾಮಿಡಿ ಕಿಲಾಡಿ ಕಲಾವಿದ, ನಟ ಮಡುನೂರು ಮನು ಅವರ ಬಂಧನ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ದೂರು ನೀಡಿ 24 ಗಂಟೆ ಕಳೆಯುವುದರೊಳಗೆ ಸಂತ್ರಸ್ತೆ ಯು ಟರ್ನ್ ಹೊಡೆದಿದ್ದಾರೆ.

ಬೆಂಗಳೂರು: ಕಾಮಿಡಿ ಕಿಲಾಡಿ ಕಲಾವಿದ, ನಟ ಮಡುನೂರು ಮನು ಅವರ ಬಂಧನ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ದೂರು ನೀಡಿ 24 ಗಂಟೆ ಕಳೆಯುವುದರೊಳಗೆ ಸಂತ್ರಸ್ತೆ ಯು ಟರ್ನ್ ಹೊಡೆದಿದ್ದಾರೆ. ನಾನು ಸತ್ತರೂ ಯಾರು ಕಾರಣರಲ್ಲ ಇದು ನನ್ನ ಸ್ವಂತ ನಿರ್ಧಾರ ಎಂದಿದ್ದಾರೆ. ಮಡುನೂರು ಮನು ಅರೆಸ್ಟ್ ಆದ ಬಳಿಕ ಸಂತ್ರಸ್ತೆ ಆಡಿರುವ ಮಾತು ವೈರಲ್ ಆಗಿತ್ತು.  ಕಳೆದ ಏಪ್ರಿಲ್‌ನಲ್ಲಿ ಬಲವಂತವಾಗಿ ಮನು ಮಾಡಿಸಿರೋ ವಿಡಿಯೋ ಅದು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ.

ನನ್ನ ಮನು ಮಧ್ಯೆ ಒಂದಷ್ಟು‌ ಜಗಳ ಗೊಂದಲಗಳಿತ್ತು. ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಪ್ರೊಡ್ಯೂಸರ್‌ಗೆ ಮೆಸೇಜ್ ಮಾಡಿದ್ದು ತಪ್ಪು. ಮನು ಸಿನಿಮಾಗೆ ತೊಂದರೆ ಕೊಡುವ ಉದ್ದೇಶ ನನ್ನದಲ್ಲ. ಏನಿದ್ದರು ನಮ್ಮ ಮಧ್ಯೆ ಇರಬೇಕಿತ್ತು. ಸಿನಿಮಾಗೆ ತೊಂದರೆ ಕೊಡುವ ಉದ್ದೇಶ ಇರಲಿಲ್ಲ. ಲಾಯರ್‌ನ ಮೀಟ್ ಮಾಡಿಸಿ ನನ್ನ ತಪ್ಪಿನ ಬಗ್ಗೆ ಅರಿವು ಮಾಡಿಸಿದ್ರು. ಇದು ನನ್ನ ಸ್ವಂತ ನಿರ್ಧಾರ ಎಂದು ಸ್ಪಷ್ಟನೆ ನೀಡಿದ್ದಾರೆ. ಮಡುನೂರು ಮನು ವಿರುದ್ಧ ಯಾರು ಒತ್ತಾಯಪೂರ್ವಕವಾಗಿ ದೂರು ನೀಡಿಸಿಲ್ಲ. ಕುಲದಲ್ಲಿ ಕೀಳ್ಯಾವುದೋ ಸಿನಿಮಾಗೆ ಒಳ್ಳೆದಾಗಲಿ. ಅಕಸ್ಮಾತ್ ನಾನು ಸತ್ತರೂ ಕೂಡ ಯಾರು ಕಾರಣರಲ್ಲ. ಇದು ನನ್ನ ಸ್ವಂತ ನಿರ್ಧಾರ ಎಂದು ಸಂತ್ರಸ್ತೆ ಹೇಳಿದ್ದಾರೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಸಂತ್ರಸ್ತೆ ವಿಚಾರಣೆ ಮುಂದುವರಿದಿದ್ದು, ಸಂತ್ರಸ್ತೆ ನೀಡುವ ಹೇಳಿಕೆ ಮೇಲೆ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

ಇದನ್ನು ಓದಿ:

https://infomindz.in/medical-shop-sibbandi-nirlakhsya-hallu-novina-badalu-bere-oushada-sevisi-mahile-savu/
Prev Post

ವಿದೇಶಿ ಬಾತುಕೋಳಿ ಸಾಕಿದ ಆರೋಪ: ದರ್ಶನ್ ಗೆ ಸಮನ್ಸ್ ಜಾರಿ

Next Post

ಯುವತಿಗೆ ಫೋನ್‌ ಕಾಲ್‌: ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಬೇಡ ಎಂದು…

post-bars

Leave a Comment

Related post