Back To Top

 ರಾಜ್ಯಕ್ಕೆ ಮೇ 27ಕ್ಕೆ ಮುಂಗಾರು ಪ್ರವೇಶವಾಗಲಿದೆ:  ಬರೊಬ್ಬರಿ 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.
May 21, 2025

ರಾಜ್ಯಕ್ಕೆ ಮೇ 27ಕ್ಕೆ ಮುಂಗಾರು ಪ್ರವೇಶವಾಗಲಿದೆ:  ಬರೊಬ್ಬರಿ 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಕರಾವಳಿಯ ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರಕನ್ನಡ ಹಾಗೂ ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಮೇ 20ರಿಂದ ಮೇ 23ರ ವರೆಗೆ ರೆಡ್‌ ಅಲರ್ಟ್‌ (Red Alert) ಘೋಷಿಸಲಾಗಿದೆ.

ಬೆಂಗಳೂರು: ಕರಾವಳಿಯ ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರಕನ್ನಡ ಹಾಗೂ ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಮೇ 20ರಿಂದ ಮೇ 23ರ ವರೆಗೆ ರೆಡ್‌ ಅಲರ್ಟ್‌ (Red Alert) ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಅಂದಾಜು 200 ಮಿಲಿ ಮೀಟರ್‌ಗಿಂತಲೂ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಮೇ 23ರ ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲಾಡಳಿತಗಳು ಕೇಳಿಕೊಂಡಿವೆ. ಸಮುದ್ರದಲ್ಲಿರುವ ಮೀನುಗಾರರು ಬಂದರುಗಳಿಗೆ ಹಿಂತಿರುಗುವಂತೆಯೂ ಅವರು ಕೇಳಿಕೊಂಡಿದ್ದಾರೆ.ವರುಣನ ಅಬ್ಬರಕ್ಕೆ ಬೆಂಗಳೂರು ತತ್ತರ, ಹಲವೆಡೆ ಮನೆ, ಕಚೇರಿಗಳು ಜಲಾವೃತ,‌ ರಸ್ತೆಯಲ್ಲಿ ನೀರು ತುಂಬಿ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್ಚಿಕ್ಕಮಗಳೂರು ಜಿಲ್ಲಾಡಳಿತವು ಜನರು ನದಿಗಳಿಗೆ ಇಳಿಯದಂತೆ ಮತ್ತು ತಗ್ಗು ಪ್ರದೇಶಗಳನ್ನು ತಪ್ಪಿಸುವಂತೆ ಮನವಿ ಮಾಡಿದೆ. ಭಾರೀ ಮಳೆಯಿಂದಾಗಿ ಭೂಕುಸಿತವಾಗುವ ಸಾಧ್ಯತೆಗಳಿವೆ. ಮೇ 21 ರಂದು ಜಿಲ್ಲೆಯ ಹಲವಾರು ಭಾಗಗಳಲ್ಲಿ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ ಮತ್ತು ಮೇ 22ಕ್ಕೆ ಹಳದಿ ಅಲರ್ಟ್ ನೀಡಲಾಗಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಆರೆಂಜ್‌ ಮತ್ತು ಯೆಲ್ಲೋ ಅಲರ್ಟ್‌?

ಬಾಗಲಕೋಟೆ, ಧಾರವಾಡ, ಹಾಸನ, ಕೊಡಗು ಮತ್ತು ವಿಜಯನಗರ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ (Orange alert) ಜಾರಿಯಲ್ಲಿದೆ. ಇಲ್ಲಿ 110ರಿಂದ 200 ಮಿಮೀ ವರೆಗಿನ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಗದಗ, ಕೊಪ್ಪಳ, ವಿಜಯಪುರ, ಬೀದರ್‌, ರಾಯಚೂರು, ಯಾದಗಿರಿ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ದಿಢೀರ್‌ ಪ್ರವಾಹ ಸಾಧ್ಯತೆ

ರಾಜ್ಯದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ರಾತ್ರಿಯಲ್ಲಿ ಅತಿ ಹೆಚ್ಚು ಮಳೆ, ಆಲಿಕಲ್ಲು ಮಳೆ ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎನ್ನಲಾಗಿದೆ. ಎಲ್ಲಾ ಏಳು ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಸಾಧ್ಯತೆ, ಭೂಕುಸಿತದ ಆತಂಕ ಮತ್ತು ಕೃಷಿ ಭೂಮಿಗೆ ಹಾನಿಯಾಗುವ ಭೀತಿಯಿದೆ.

ಇದನ್ನು ಓದಿ:

https://infomindz.in/%e0%b2%b8%e0%b3%8b%e0%b2%ab%e0%b2%bf%e0%b2%af%e0%b2%be-%e0%b2%96%e0%b3%81%e0%b2%b0%e0%b3%87%e0%b2%b7%e0%b2%bf-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6-%e0%b2%b8/
Prev Post

ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್‌ ಉಗ್ರನಿಗೆ ಗುಂಡೇಟು!

Next Post

ಹೆಚ್ಚಾದ ಕೊರೋನಾ ಹೊಸ ತಳಿ ಸೋಂಕು: ಕರ್ನಾಟಕದಲ್ಲಿ 8 ಪ್ರಕರಣ ಸೇರಿ ದೇಶಾದ್ಯಂತ…

post-bars

Leave a Comment

Related post