ಕುತಂತ್ರಿ ರಾಷ್ಟ್ರ ಪಾಕಿಸ್ತಾನದಿಂದ ಸಿಂಧೂ ನದಿ ನೀರು ಬಿಡುವಂತೆ ಭಾರತಕ್ಕೆ ಬೇಡಿಕೆ
ಅಮಾನತಿನಲ್ಲಿಟ್ಟ ಸಿಂಧೂ ನದಿ ನೀರು ಒಪ್ಪಂದವನ್ನು ಮರುಪರಿಶೀಲಿಸುವಂತೆ ಕುತಂತ್ರಿ ರಾಷ್ಟ್ರ ಪಾಕಿಸ್ತಾನ ಇದೀಗ ಭಾರತದ ಮುಂದೆ ಅಂಗಲಾಚುತ್ತಿದೆ.
ಇಸ್ಲಾಮಾಬಾದ್: ಅಮಾನತಿನಲ್ಲಿಟ್ಟ ಸಿಂಧೂ ನದಿ ನೀರು ಒಪ್ಪಂದವನ್ನು ಮರುಪರಿಶೀಲಿಸುವಂತೆ ಕುತಂತ್ರಿ ರಾಷ್ಟ್ರ ಪಾಕಿಸ್ತಾನ ಇದೀಗ ಭಾರತದ ಮುಂದೆ ಅಂಗಲಾಚುತ್ತಿದೆ. ಈ ಕುರಿತು ಭಾರತಕ್ಕೆ ಪಾಪಿ ಪಾಕಿಸ್ತಾನ ಪತ್ರ ಬರೆದಿದೆ ಎಂಬುದಾಗಿ ವರದಿಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಕೈಗೊಂಡ ಕ್ರಮದ ವಾರಗಳ ನಂತರ ಈ ಮನವಿ ಬಂದಿದೆ. ಮೂಲಗಳ ಪ್ರಕಾರ, ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯವು ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಒಪ್ಪಂದವನ್ನು ನಿಲ್ಲಿಸುವ ಭಾರತದ ಈ ಕ್ರಮವು ಪಾಕಿಸ್ತಾನದಲ್ಲಿ ಬಿಕ್ಕಟ್ಟನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದೆ.
ಏಪ್ರಿಲ್ 22 ರಂದು ಪಾಕ್ ಪ್ರಾಯೋಜಿತ ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದು, 26 ಮಂದಿ ಮೃತಪಟ್ಟಿದ್ದರು. ಆ ಬಳಿಕ ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960 ರಲ್ಲಿ ನಡೆದಿದ್ದ ಸಿಂಧೂ ನದಿ ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟಿದೆ. ಪಾಕಿಸ್ತಾನದ ವಿರುದ್ಧ ಭಾರತ ಈ ಕ್ರಮ ಕೈಗೊಂಡಿದ್ದು ಇದೇ ಮೊದಲು ಇತ್ತ ಒಪ್ಪಂದವನ್ನು ಅಮಾನತಿನಲ್ಲಿಟ್ಟ ಕಾರಣ ಭಾರತ ಸಿಂಧೂ ನದಿಯ ಉಪನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಜಲಾಶಯದಿಂದ ಯಾವಾಗ ಬೇಕಾದರೂ ನೀರು ಬಿಡಬಹುದು ಮತ್ತು ಯಾವಾಗ ಬೇಕಾದರೂ ನೀರನ್ನು ತಡೆದು ಹಿಡಿಯಬಹುದು. ಒಪ್ಪಂದ ಜಾರಿಯಲ್ಲಿದ್ದಾಗ ಜಲಾಶಯದಿಂದ ನೀರನ್ನು ಹೊರಗೆ ಹರಿಸುವಾಗ ಭಾರತ ಪಾಕಿಸ್ತಾನಕ್ಕೆ ತಿಳಿಸಬೇಕಿತ್ತು. ಆದರೆ ಈಗ ಭಾರತ ತನಗೆ ಇಷ್ಟ ಬಂದ ಸಮಯದಲ್ಲಿ ನೀರನ್ನು ಜಲಾಶಯದಿಂದ ಹರಿಸುತ್ತಿದೆ.
ಇದನ್ನು ಓದಿ: