ಪಾಕಿಸ್ತಾನದ ವಶದಲ್ಲಿದ್ದ ಬಿಎಸ್ಎಫ್ ಯೋಧ ಪುರ್ನಾಮ್ ಶಾ ಮರಳಿ ತಾಯ್ನಾಡಿಗೆ
ಪಾಕಿಸ್ತಾನದ ವಶದಲ್ಲಿದ್ದ ಬಿಎಸ್ಎಫ್ ಯೋಧ ಪುರ್ನಾಮ್ ಶಾ ನನ್ನು 20 ದಿನಗಳ ಬಳಿಕ ಬಿಟ್ಟು ಕಳುಹಿಸಿದೆ.
ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್ ಎಫ್ ಯೋಧರೊಬ್ಬರನ್ನು ಪಾಕಿಸ್ತಾನ ರೇಂಜರ್ ಗಳು ವಶಕ್ಕೆ ಪಡೆದುಕೊಂಡಿದ್ದರು. ಪಂಜಾಬ್ ನ ಫಿರೋಜ್ ಪುರದಲ್ಲಿ ಕರ್ತವ್ಯದಲ್ಲಿದ್ದ ಬಿಎಸ್ ಎಫ್ ಯೋಧರೊಬ್ಬರು ಅಂತರಾಷ್ಟ್ರೀಯ ಗಡಿ ದಾಟಿದ್ದು, ಇದೇ ವೇಳೆ ಪಾಕಿಸ್ತಾನ ರೇಂಜರ್ ಗಳು ಅವರನ್ನು ವಶಕ್ಕೆ ಪಡೆದಿದ್ದರು.ಸುಮಾರು 20 ದಿನದ ಬಳಿಕ ಪುರ್ನಾಮ್ ಶಾನನ್ನು ಬಿಟ್ಟು ಕಳುಹಿಸಿದ್ದಾರೆ. ಅಟಾರಿ ಗಡಿ ಮೂಲಕ ಯೋಧ ಬಾರತಕ್ಕೆ ವಾಪಸ್ ಆಗಿದ್ದಾರೆ. ಪೂರ್ಣ ಸಾಹು ಬಿಡುಗಡೆಗಾಗಿ ಭಾರತ ನಿರಂತರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿತ್ತು. ನಿನ್ನೆಯಷ್ಟೆ ಪೂರ್ಣಂ ಕುಮಾರ್ ಪತ್ನಿ ಸರ್ಕಾರದ ಬಳಿ ಪತಿಯ ಬಿಡುಗಡೆಗೆ ಮನವಿ ಮಾಡಿಕೊಂಡಿದ್ದರು. ಪೂರ್ಣಂ ಬಂಧನದ ಬೆನ್ನಲ್ಲೇ ಭಾರತವೂ ಸಹ ಪಾಕಿಸ್ತಾನದ ಯೋಧನೊಬ್ಬನನ್ನು ಜೀವಂತವಾಗಿ ಸೆರೆಹಿಡಿದಿತ್ತು. ಕೂಡಲೇ ಎಚ್ಚೆತ್ತುಕೊಂಡ ಪಾಕಿಸ್ತಾನವು ಈಗ ತನ್ನ ಯೋಧನ ಬಿಡುಗಡೆಗಾಗಿ ಭಾರತದ ಯೋಧನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.ಪಾಕಿಸ್ತಾನ – ಭಾರತ ನಡುವಿನ ಜೀನಿವಾ ಒಪ್ಪಂದಂತೆ ಪರಸ್ಪರ ದೇಶಗಳು ಯೋಧರು ಸೆರೆಸಿಕ್ಕರೆ ಚಿತ್ರಹಿಂಸೆ ನೀಡದೇ ವಾಪಸ್ ಮರಳಿಸಬೇಕಿದೆ.
ಇದನ್ನು ಓದಿ: