Back To Top

 ಕೆನಡಾ ವಿದೇಶಾಂಗ ಸಚಿವರಾಗಿ ಭಗವದ್ಗೀತೆ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಅನಿತಾ ಆನಂದ್

ಕೆನಡಾ ವಿದೇಶಾಂಗ ಸಚಿವರಾಗಿ ಭಗವದ್ಗೀತೆ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಅನಿತಾ ಆನಂದ್

ಭಾರತೀಯ ಮೂಲದ ಅನಿತಾ ಆನಂದ್(Anita Anand), ಕೆನಡಾದ ಮಾರ್ಕ್ ಕಾರ್ನಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಅವರ ಕೈಯಲ್ಲಿದ್ದ ಭಗವದ್ಗೀತೆಯ ಗ್ರಂಥ ಎಲ್ಲರ ಗಮನ ಸೆಳೆದಿದೆ. ಅನಿತಾ ಭಗವದ್ಗೀತೆ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನವದೆಹಲಿ: ಭಾರತೀಯ ಮೂಲದ ಅನಿತಾ ಆನಂದ್(Anita Anand), ಕೆನಡಾದ ಮಾರ್ಕ್ ಕಾರ್ನಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಅವರ ಕೈಯಲ್ಲಿದ್ದ ಭಗವದ್ಗೀತೆಯ ಗ್ರಂಥ ಎಲ್ಲರ ಗಮನ ಸೆಳೆದಿದೆ. ಅನಿತಾ ಭಗವದ್ಗೀತೆ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅನಿತಾ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಕೈಯಲ್ಲಿ ಭಗವದ್ಗೀತೆಯನ್ನು ಹಿಡಿದು ಎಲ್ಲರ ಗಮನ ಸೆಳೆದಿದ್ದರು. ಆ ಮೂಲಕ ಅವರು ಭಾರತೀಯ ಸಂಸ್ಕೃತಿ, ಸನಾತನ ಧರ್ಮವನ್ನು ಪರಿಪಾಲಿಸಿದ್ದಾರೆ.

ಇದೀಗ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿವೆ. ಕೆನಡಾದ ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವುದು ನನಗೆ ಗೌರವ ತಂದಿದೆ. ಸುರಕ್ಷಿತ, ಉತ್ತಮ ಜಗತ್ತನ್ನು ನಿರ್ಮಿಸಲು ಮತ್ತು ಕೆನಡಿಯನ್ನರಿಗೆ ತಲುಪಿಸಲು ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ನಮ್ಮ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನು ಓದಿ:

https://infomindz.in/allinda-gundu-bandre-illinda-gundu/
Prev Post

ಬಲೂಚಿಸ್ತಾನ ಪ್ರಾಂತ್ಯದ 51 ಸ್ಥಳಗಳಲ್ಲಿ ‘ಆಪರೇಷನ್ ಹರೂಫ್‌’ ಹೆಸರಿನಲ್ಲಿ 71 ದಾಳಿ

Next Post

18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ಇದೇ ಮೇ 17ರಿಂದ ಪುನಾರಂಭ

post-bars

Leave a Comment

Related post