Back To Top

 ಬಲೂಚಿಸ್ತಾನ ಪ್ರಾಂತ್ಯದ 51 ಸ್ಥಳಗಳಲ್ಲಿ ‘ಆಪರೇಷನ್ ಹರೂಫ್‌’ ಹೆಸರಿನಲ್ಲಿ 71 ದಾಳಿ

ಬಲೂಚಿಸ್ತಾನ ಪ್ರಾಂತ್ಯದ 51 ಸ್ಥಳಗಳಲ್ಲಿ ‘ಆಪರೇಷನ್ ಹರೂಫ್‌’ ಹೆಸರಿನಲ್ಲಿ 71 ದಾಳಿ

ಇಸ್ಲಾಮಾಬಾದ್‌ ಜಾಗತಿಕ ಭಯೋತ್ಪಾದಕ ನೆಲೆ ಎಂದು ಘೋಷಿಸಿ: ಬಲೂಚ್ ವಿಮೋಚನಾ ಸೇನೆ

ಇಸ್ಲಾಮಾಬಾದ್: ಕಳೆದ ಕೆಲ ವಾರಗಳಲ್ಲಿ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ 51 ಸ್ಥಳಗಳಲ್ಲಿ ‘ಆಪರೇಷನ್ ಹರೂಫ್‌’ ಹೆಸರಿನಲ್ಲಿ 71 ದಾಳಿಯನ್ನು ನಡೆಸಲಾಗಿದೆ’ ಎಂದು ಬಲೂಚ್ ವಿಮೋಚನಾ ಸೇನೆ (ಬಿಎಲ್‌ಎ) ಹೇಳಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಲೂಚ್, ‘ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯ ‘ಸಂತಾನೋತ್ಪತ್ತಿಯ ನೆಲ’ವಾಗಿದೆ. ಹೀಗಾಗಿ ಇಸ್ಲಾಮಾಬಾದ್‌ ಅನ್ನು ಜಾಗತಿಕ ಭಯೋತ್ಪಾದಕ ನೆಲೆ ಎಂದು ಘೋಷಿಸಬೇಕು’ ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಕೋರಿದೆ. ಕೆಚ್‌, ಪಂಜ್ಗುರ್‌, ಮಸ್ಟಂಗ್‌, ಖ್ವೆಟ್ಟಾ, ಜಮೂರನ್, ತೊಲಂಗಿ, ಕುಲುಕಿ ಮತ್ತು ನುಷ್ಕಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಮತ್ತು ಗುಪ್ತಚರ ತಾಣಗಳ ಮೇಲೆ ಬಿಎಲ್‌ಎ ದಾಳಿ ನಡೆಸಿದೆ. ಸ್ಥಳೀಯ ಪೊಲೀಸ್ ಠಾಣೆ, ಖನಿಜ ಸಂಪತ್ತು ಸಾಗಣೆ ವಾಹನ ಹಾಗೂ ಹೆದ್ದಾರಿಯಲ್ಲಿನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗಿದೆ. ಇದರಲ್ಲಿ ಐಇಡಿ ಸ್ಫೋಟಕ ಹಾಗೂ ಸ್ನೈಪರ್‌ ಬಳಸಿ ಪಾಕಿಸ್ತಾನದ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಜತೆಗೆ ಅವರ ಭದ್ರತಾ ಕೇಂದ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದಿದೆ. ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿದೆ. ಭಾರತವನ್ನೂ ಒಳಗೊಂಡು ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹೀಗೆ ಮಾಡದಿದ್ದಲ್ಲಿ, ಈ ಪ್ರಾಂತ್ಯದಲ್ಲಿ ಇನ್ನಷ್ಟು ರಕ್ತಪಾತವಾಗುವ ಸಾಧ್ಯತೆಗಳಿವೆ’ ಎಂದು ಎಚ್ಚರಿಸಿದೆ.

ಇದನ್ನು ಓದಿ:

https://infomindz.in/surakshithavagi-maralida-shastrasthra-padegalu-ella-bharatheeya-vayupade-pailat/
Prev Post

ಪಾಕಿಸ್ತಾನದ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಪುರ್ನಾಮ್ ಶಾ ಮರಳಿ ತಾಯ್ನಾಡಿಗೆ

Next Post

ಕೆನಡಾ ವಿದೇಶಾಂಗ ಸಚಿವರಾಗಿ ಭಗವದ್ಗೀತೆ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ…

post-bars

Leave a Comment

Related post