Back To Top

 ವಿರಾಟ್ ಕೊಹ್ಲಿ – ಟೆಸ್ಟ್ ಕ್ರಿಕೆಟ್‌ಗೆ ವಿದಾಯ #269
May 12, 2025

ವಿರಾಟ್ ಕೊಹ್ಲಿ – ಟೆಸ್ಟ್ ಕ್ರಿಕೆಟ್‌ಗೆ ವಿದಾಯ #269

2025 ರಲ್ಲಿ, ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಅಧ್ಯಾಯ ಮುಗಿದಂತಾಗಿದೆ. ರೋಹಿತ್ ಶರ್ಮ ಟೆಸ್ಟ್ಟೆ ಕ್ರಿಕೆಟ್ಗೆ ವಿದಾಯ ಕೋರಿದ ಕೆಲವೇ ದಿನಗಳಲ್ಲಿ ಕಿಂಗ್ ಕೊಹ್ಲಿಯೂ ವಿದಾಯ ಘೋಷಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ವಿರಾಟ್ ಕೊಹ್ಲಿ ವಿದಾಯ ಘೋಷಿಸುವ ಸುಳಿವು ರೋಹಿತ್ ಶರ್ಮ ವಿದಾಯದ ನಂತರ ಮೂಡಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ 14 ವರ್ಷಗಳ ಶ್ರೇಷ್ಠ ಪಯಣದಲ್ಲಿ ವಿರಾಟ್ ಕೊಹ್ಲಿಯವರ ಆಟದಲ್ಲಿ ಕಂಡ ಶಿಸ್ತು, ತೀವ್ರತೆ, ಮತ್ತು ಸ್ಪರ್ಧಾತ್ಮಕತೆ ಆಟದ ಕ್ರಿಕೆಟ್ ಪ್ರೇಮಿಗಳು ಹಾಗು ಹಲವಾರು ಕ್ರಿಕೆಟ್ ಆಟಗಾರರಿಗೆ ಸ್ಫೂರ್ತಿಯಾಗಿದೆ. ವಿರಾಟ್ ಕೊಹ್ಲಿ – ಟೆಸ್ಟ್ ಕ್ರಿಕೆಟ್‌ಗೆ ಶ್ರದ್ಧಾಂಜಲಿ.

ವಿರಾಟ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ ಅಂಕಿಅಂಶಗಳು (2001–2025):

ಪಂದ್ಯಗಳು: 123

ರನ್‌ಗಳು: 9,230

ಶತಕಗಳು: 30

ಅರ್ಧಶತಕಗಳು: 31

ಅತಿ ಹೆಚ್ಚು ಸ್ಕೋರ್: 254* vs ಸೌತ್ ಆಫ್ರಿಕಾ

ಸರಾಸರಿ: 46.85

ಟೆಸ್ಟ್ ರ‍್ಯಾಂಕಿಂಗ್‍ನಲ್ಲಿ ಶ್ರೇಷ್ಠ ಸ್ಥಾನ: ICC ಟೆಸ್ಟ್ ಬ್ಯಾಟ್ಸ್‌ಮನ್ #1 (2018)

ಟೆಸ್ಟ್ ಶತಕಗಳ ಮೂಲಕ ದಾಖಲೆ: ಮೊದಲ 20 ಶತಕಗಳನ್ನು ಕೇವಲ 100 ಪಂದ್ಯಗಳ ಒಳಗಾಗಿ ಪೂರೈಸಿದ ಅಗ್ರಗಣ್ಯ ಆಟಗಾರರಲ್ಲಿ ಇವರು ಕೂಡ ಒಬ್ಬರು.

ಅವರ ಟೆಸ್ಟ್ ಕ್ರಿಕೆಟ್ ಪಯಣದ ಉನ್ನತ ಕ್ಷಣಗಳು:
ಭಾರತದ ಅತೀ ಯಶಸ್ವಿ ಟೆಸ್ಟ್ ನಾಯಕನಾಗಿದ್ದು:
ಟೆಸ್ಟ್ ನಾಯಕತ್ವ: 2014–2022

ನಾಯಕನಾಗಿ ಗೆಲುವುಗಳು: 40 (out of 68 Tests) — ಇದು ಭಾರತೀಯ ಆಟಗಾರರಲ್ಲಿ ಅತಿ ಹೆಚ್ಚು

ವಿರಾಟ್ ಕೊಹ್ಲಿ – ಟೆಸ್ಟ್ ಕ್ರಿಕೆಟ್‌ಗೆ ಶ್ರದ್ಧಾಂಜಲಿ

ವಿದೇಶಗಳಲ್ಲಿ ಬಹುಮಾನ್ಯ ಗೆಲುವುಗಳು:

ಆಸ್ಟ್ರೇಲಿಯಾದಲ್ಲಿ 2018-19 ಟೆಸ್ಟ್ ಸರಣಿ ಗೆಲುವು — ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯ.

ಐಕಾನಿಕ್ ಟೆಸ್ಟ್ ಇನಿಂಗ್ಸ್‌ಗಳು:
141 vs ಆಸ್ಟ್ರೇಲಿಯಾ (Adelaide, 2014) – ಸೋಲಾದರೂ, ಇದು ವಿರಾಟ್‌ ಕೊಹ್ಲಿಯ ವಿರಾಟ್ ಹೋರಾಟದ ಉದಾಹರಣೆ

149 vs ಇಂಗ್ಲೆಂಡ್ (Birmingham, 2018) – swinging pitch, ವಿರಾಟ್ ಒಬ್ಬನೇ ಎದುರಿಸಿದ್ದ ಹೋರಾಟ

254* vs ದಕ್ಷಿಣ ಆಫ್ರಿಕಾ (Pune, 2019) – ಶ್ರೇಷ್ಠ ಟೆಸ್ಟ್ ಇನಿಂಗ್ಸ್

ಅವರ ಕೌಶಲ್ಯದ ಜೊತೆಗೆ ಶ್ರೇಷ್ಠವಾದ ವೈಶಿಷ್ಟ್ಯ ಮನೋಬಲ ಮತ್ತು ನಾಯಕತ್ವ:

ವಿರಾಟ್ ಟೆಸ್ಟ್ ಕ್ರಿಕೆಟ್‌ಗೆ ಕೇವಲ ಬ್ಯಾಟ್ಸಮನ್ ಆಗಿ ರನ್ ಗಳನ್ನೂ ಮಾತ್ರ ಹೊಡೆಯಲಿಲ್ಲ. ಫಿಟ್ನೆಸ್, ಆಕ್ರಮಕ ಮನಸ್ಥಿತಿ, ಆಟಗಾರರಲ್ಲಿ ಬೆಳೆಸಿದ ಆತ್ಮವಿಶ್ವಾಸ ಇವೆಲ್ಲವೂ ಕೂಡ ಹೊಸ ಆಟಗಾರರಲ್ಲಿ ಹುರುಪನ್ನು ಪಸರಿಸಿತ್ತು, ಇದು ಎಲ್ಲವು ಮುಂದಿನ ದಿನಗಳಲ್ಲಿ ಬರುವ ಆಟಗಾರರಿಗೆ ಮಾದರಿಯಾಗಿದೆ – ಈ ಎಲ್ಲವೂ ಅವರನ್ನು ಬೆರೆಯಲಾಗದ ನಾಯಕನನ್ನಾಗಿ ಮಾಡಿದೆ.

ಪ್ರಸ್ತುತ ಐಪಿಎಲ್ ನಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೧೮ ವರ್ಷಗಳಿಂದ ಆಡುತ್ತಾ ಬಂದ ವಿರಾಟ್ ಕೊಹ್ಲಿಯ ಸಾಧನೆ ಸಾಮಾನ್ಯವಾದದ್ದಲ್ಲ.

ವಿರಾಟ್ ಕೊಹ್ಲಿ – ಟೆಸ್ಟ್ ಕ್ರಿಕೆಟ್‌ಗೆ ವಿದಾಯ

14 ವರ್ಷಗಳ ಹಿಂದೆ ಮೊದಲ ಬಾರಿಗೆ ಬಿಳಿ ಬಟ್ಟೆಯಲ್ಲಿ ಭಾರತಕ್ಕಾಗಿ ಮೈದಾನಕ್ಕಿಳಿದ ಕ್ಷಣ ಇನ್ನೂ ನನ್ನ ಮನಸ್ಸಿನಲ್ಲಿ ತಾಜಾ ಆಗಿದೆ. ಆಗ ನಾನು ಈ ಪಯಣ ಎಂತಹದ್ದಾಗಿರುತ್ತೆ ಎಂದು ಕಲ್ಪನೆಯೂ ಮಾಡಿರಲಿಲ್ಲ. ಟೆಸ್ಟ್ ಕ್ರಿಕೆಟ್ ನನ್ನನ್ನು ಕಠಿಣವಾಗಿ ಪರೀಕ್ಷಿಸಿದೆ, ಶಿಸ್ತಿನ ತರಬೇತಿ ನೀಡಿದೆ, ಮತ್ತು ಜೀವನಪಾಠಗಳನ್ನು ಕಲಿಸಿದೆ — ಅವು ನನ್ನಲ್ಲಿ ಸದಾ ಹಸಿರಾಗಿರುತ್ತದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಆಡೋದು ಒಂದು ವಿಶಿಷ್ಟ ಅನುಭವ. ಇದು ಗದ್ದಲವಿಲ್ಲದ ಹೋರಾಟ, ಧೀರ್ಘಕಾಲದ ದಿವಸಗಳು, ಆಟದ ಪುಟ್ಟ ಪುಟ್ಟ ಕ್ಷಣಗಳು — ಎಲ್ಲವೂ ಹೃದಯದಲ್ಲಿ ಉಳಿಯುವಂತಹವು. ನಾನು ಈ ಆಟಕ್ಕೆ ನನ್ನ ಸಂಪೂರ್ಣ ಶಕ್ತಿಯನ್ನೂ, ಭಾವನೆಗಳನ್ನೂ ಅರ್ಪಿಸಿದ್ದೇನೆ.

ಈಗ ಈ ಫಾರ್ಮಾಟ್‌ಗೆ ವಿದಾಯ ಹೇಳುತ್ತಿರುವೆನು. ತೀರ್ಮಾನ ತೆಗೆದುಕೊಳ್ಳುವುದು ಸುಲಭವಲ್ಲ, ಆದರೆ ಇದು ಸರಿಯಾದ ಸಮಯ ಅನ್ನಿಸುತ್ತಿದೆ. ಕ್ರಿಕೆಟ್ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ — ಮತ್ತು ಟೆಸ್ಟ್ ಕ್ರಿಕೆಟ್ ನನ್ನ ಆತ್ಮದ ಸ್ಪರ್ಶವಾಗಿದೆ.

ನಾನು ಹೊಂದಿರುವ ಪ್ರತಿ ಧನ್ಯತೆಯು — ಆಟದ ಕುರಿತು, ನನ್ನ ಜೊತೆ ಮೈದಾನ ಹಂಚಿಕೊಂಡ ಕ್ರಿಕೆಟ್ ಕುಟುಂಬದ ಕುರಿತು, ಮತ್ತು ನನ್ನ ಹಾದಿಯಲ್ಲಿ ನನಗೆ ಬೆಂಬಲ ನೀಡಿದ ಪ್ರತಿಯೊಬ್ಬ ಅಭಿಮಾನಿಯ ಕುರಿತು.

ನನ್ನ ಟೆಸ್ಟ್ ಕ್ರಿಕೆಟ್ ಪಯಣವನ್ನು ನಾನು ಸದಾ ಹೆಮ್ಮೆ ಮತ್ತು ನಗುಮುಖದಿಂದ ನೆನಪಿಸಿಕೊಳ್ಳುತ್ತೇನೆ.

https://www.instagram.com/p/DJiwQm0RbiM

Prev Post

ಕನ್ನಡದ ಕಿರುತೆರೆ ಹಾಸ್ಯ ನಟ ರಾಕೇಶ್ ಪೂಜಾರಿ ವಿಧಿವಶ

Next Post

ಪಾಕಿಸ್ತಾನದ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಪುರ್ನಾಮ್ ಶಾ ಮರಳಿ ತಾಯ್ನಾಡಿಗೆ

post-bars

Leave a Comment