Back To Top

 ಸೂಸೈಡ್ ಬಾಂಬರ್ ಆಗಿ ಬಾರ್ಡರ್ ಗೆ ಹೋಗ್ತೀನಿ ಎಂದವ್ರು ಬೆಂಗಳೂರಿನ ತಿರಂಗಾ ಯಾತ್ರೆಗೆ ಬರಲಿಲ್ಲ: ಸಚಿವ ಜಮೀರ್ ಅಹಮ್ಮದ್‌ ಖಾನ್ ವಿರುದ್ಧ ಟೀಕೆ

ಸೂಸೈಡ್ ಬಾಂಬರ್ ಆಗಿ ಬಾರ್ಡರ್ ಗೆ ಹೋಗ್ತೀನಿ ಎಂದವ್ರು ಬೆಂಗಳೂರಿನ ತಿರಂಗಾ ಯಾತ್ರೆಗೆ ಬರಲಿಲ್ಲ: ಸಚಿವ ಜಮೀರ್ ಅಹಮ್ಮದ್‌ ಖಾನ್ ವಿರುದ್ಧ ಟೀಕೆ

ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ʻಆಪರೇಷನ್‌ ಸಿಂದೂರ’ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೈನ್ಯಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿನ ಕೆ.ಆರ್. ವೃತ್ತದಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಮಿನ್ಸ್ ಸ್ಟೇರ್‌ವರೆಗೆ ಕಾಂಗ್ರೆಸ್ ಸರ್ಕಾರ ಶುಕ್ರವಾರ ‘ತಿರಂಗಾ ಯಾತ್ರೆ’ಯನ್ನು ಕಾಂಗ್ರೆಸ್‌ ಆಯೋಜಿಸಿತ್ತು.

ಬೆಂಗಳೂರು: ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ʻಆಪರೇಷನ್‌ ಸಿಂದೂರ’ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೈನ್ಯಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿನ ಕೆ.ಆರ್. ವೃತ್ತದಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಮಿನ್ಸ್ ಸ್ಟೇರ್‌ವರೆಗೆ ಕಾಂಗ್ರೆಸ್ ಸರ್ಕಾರ ಶುಕ್ರವಾರ ‘ತಿರಂಗಾ ಯಾತ್ರೆ’ಯನ್ನು ಕಾಂಗ್ರೆಸ್‌ ಆಯೋಜಿಸಿತ್ತು. ಆದರೆ ಸೂಸೈಡ್ ಬಾಂಬರ್ ಆಗಿ ಬಾರ್ಡರ್ ಗೆ ಹೋಗ್ತೀನಿ ಎಂದವ್ರು ಬೆಂಗಳೂರಿನ ತಿರಂಗಾ ಯಾತ್ರೆಗೆ ಬರಲಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ.

ಸಚಿವ ಜಮೀರ್ ಅಹಮ್ಮದ್‌ ಖಾನ್ ಭಾರತೀಯ ಸೇನೆಗೆ ಬಲ ತುಂಬುವ ಕಾರ್ಯಕ್ಕೆ ಕೈ ಜೋಡಿಸದ ಹಿನ್ನೆಲೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಸೂಸೈಡ್ ಬ್ಯಾಗ್ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗುತ್ತೇನೆ ಎಂದು ಜಮೀರ್‌ ಹೇಳಿಕೆ ನೀಡಿದ್ದರು. ಆದರೆ ಬೆಂಗಳೂರಲ್ಲಿ ನಡೆದ ತಿರಂಗಾ ಯಾತ್ರೆಯಲ್ಲಿ ಸಚಿವ ಜಮೀರ್ ಭಾಗಿಯಾಗಲಿಲ್ಲ. ಜಮೀರ್ ಅಹಮದ್ ಅಲ್ಲದೇ ಸಚಿವ ರಹೀಂ ಖಾನ್ ಗೂಡ ಗೈರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಸೇರಿ ಬಹುತೇಕ ಕಾಂಗ್ರೆಸ್‌ ನ ಎಲ್ಲರೂ ಭಾಗವಹಿಸಿದ್ದಾರೆ. ಜಮೀರ್ ಅಹಮದ್ ಗೈರಿಗೆ ಈಗ ಕಾಂಗ್ರೆಸ್‌ನಲ್ಲೇ ಅಸಮಾಧಾನ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಜಮೀರ್ ಹೇಳಿಕೆ ಏನಾಗಿತ್ತು?

ನಾನು ಆತ್ಮಾಹುತಿ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ದಕ್ಕೆ ಹೋಗುತ್ತೇನೆ. ದೇಶಕ್ಕಾಗಿ ನಾನು ಹುತಾತ್ಮನಾಗಲು ಸಿದ್ಧ ಎಂದು ಸಚಿವ ಜಮೀರ್‌ ಅಹ್ಮದ್ ಖಾನ್ ಎರಡು ಬಾರಿ ಹೇಳಿಕೆ ನೀಡಿದ್ದರು. ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲ ಇದೆ ಜೊತೆಗೆ ನಮ್ಮ ಪಕ್ಷದಿಂದ ಬೆಂಬಲವಿದೆ ಎಂದು ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದಿದ್ದರು. ಇದಕ್ಕೆ ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿ ಜಮೀರ್ ಯುದ್ಧಕ್ಕೆ ಹೋಗೋದು ಬೇಡ, ಇಲ್ಲಿರೋ ಕುನ್ನಿಗಳನ್ನ ಕೊಲ್ಲಲಿ ಎಂದಿದ್ದರು. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಜಮೀರ್, ನಾನು ಈಗಲೂ ನನ್ನ ಹೇಳಿಕೆಗೆ ಬದ್ಧನಿದ್ದೇನೆ. ನಾನು ಸೂಸೈಡ್ ಬಾಂಬ್ ಕಟ್ಟಿಕೊಂಡು ಹೋಗುತ್ತೇನೆ. ಸಿ.ಟಿ. ರವಿಗೆ ಏನು ಕೆಲಸ ಇಲ್ಲ. ಅದಕ್ಕಾಗಿ ಮಾತನಾಡ್ತಾರೆ. ನಮಗೆ ನಮ್ಮ ದೇಶ ಮುಖ್ಯ. ಅದಕ್ಕಾಗಿ ನಾನು ಯುದ್ಧಕ್ಕೆ ಹೋಗುತ್ತೇನೆ ಅಂದಿದ್ದೆ ಎಂದು ತಿರುಗೇಟು ನೀಡಿದ್ದರು. ಇನ್ನು ಅಂದು ಜಮೀರ್ ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಪ್ರತಿಕ್ರಿಯೆ ನೀಡಿ, ನಮ್ಮ ದೇಶದ ಸೇನೆ ಬಲವಾಗಿ, ಸೈನ್ಯದ ಶಕ್ತಿ, ಸೈನಿಕರು, ಇಂಟೆಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ. ತೋಚಿದಂತೆ ಹೇಳಿಕೆ ಕೊಡದೆ ಬಾಯಿಮುಚ್ಚಿಕೊಂಡಿದ್ದರೆ ಸಾಕು. ಜಮೀರ್ ಯಾವುದೇ ಹೇಳಿಕೆ ಕೊಡದೇ ಶಾಂತವಾಗಿರೋದೇ ದೇಶಕ್ಕೆ ಮಾಡುವ ದೊಡ್ಡ ಸೇವೆ ಎಂದರು.

ಇದನ್ನು ಓದಿ:

https://infomindz.in/mesail-dalige-pak-shehab-sharif-gadagada/
Prev Post

ಪಾಕಿಸ್ತಾನದ ಒಂದು ಎಫ್- 16, ಎರಡು ಜೆಎಫ್ -17 ಫೈಟರ್ ಜೆಟ್ ಧ್ವಂಸ

Next Post

ಸುರಕ್ಷಿತವಾಗಿ ಮರಳಿದ ಸಶಸ್ತ್ರ ಪಡೆಗಳು ಎಲ್ಲಾ ಭಾರತೀಯ ವಾಯುಪಡೆ (ಐಎಎಫ್)ಪೈಲಟ್‌ಗಳು

post-bars

Leave a Comment

Related post