Back To Top

 ಸತತ 3ನೇ ದಿನವೂ ಭಾರತದ ಮೇಲೆ ಪಾಕಿಸ್ತಾನದ ಡ್ರೋನ್ ದಾಳಿ

ಸತತ 3ನೇ ದಿನವೂ ಭಾರತದ ಮೇಲೆ ಪಾಕಿಸ್ತಾನದ ಡ್ರೋನ್ ದಾಳಿ

ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಶನ್ ಸಿಂದೂರ್ ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಇದರಿಂದ ದಿಕ್ಕಾಪಾಲಾಗಿರುವ ಪಾಕಿಸ್ತಾನ ಇದೀಗ ಭಾರತದ ವಿರುದ್ದ ಸತತ ಡ್ರೋನ್ ದಾಳಿ ನಡೆಸುತ್ತಿದೆ.

ನವದೆಹಲಿ: ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಶನ್ ಸಿಂದೂರ್ ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಇದರಿಂದ ದಿಕ್ಕಾಪಾಲಾಗಿರುವ ಪಾಕಿಸ್ತಾನ ಇದೀಗ ಭಾರತದ ವಿರುದ್ದ ಸತತ ಡ್ರೋನ್ ದಾಳಿ ನಡೆಸುತ್ತಿದೆ. ಮೇ.7 ರಂದು ಭಾರತ ನಡೆಸಿದ ಆಪರೇಶನ್ ಸಿಂದೂರ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ದಾಳಿ ನಡೆಸುತ್ತಿದೆ.ಇದು ಸತತ 3ನೇ ದಿನವೂ ಮುಂದುವರಿದಿದೆ. ಇಂದು ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿ ಜಮ್ಮು ಕಾಶ್ಮೀರದ ಬಾರಾಮುಲ್ಲದಿಂದ ಗುಜರಾತಿನ ಭುಜ್ ವರೆಗೆ ವ್ಯಾಪಿಸಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.

ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಪಾಕ್ ಡ್ರೋನ್‌ಗಳು ಕಾಣಿಸಿಕೊಂಡಿವೆ. ಪಂಜಾಬಿನ ಫಿರೋಜ್‌ಪುರದಲ್ಲಿ ಮಾತ್ರ ಪಾಕ್ ಡ್ರೋನ್ ದಾಳಿ ಯಶಸ್ವಿಯಾಗಿದೆ. ಒಂದು ಮನೆಯ ಮೇಲೆ ಬಿದ್ದ ಡ್ರೋನ್ ದೊಡ್ಡ ಬೆಂಕಿ ಅವಘಡಕ್ಕೆ ಕಾರಣವಾಯಿತು. ಓರ್ವ ಮಹಿಳೆಗೆ ತೀವ್ರ ಸುಟ್ಟ ಗಾಯಗಳಾಗಿವೆ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ದಾಳಿ ಮುಂದುವರಿದಂತೆ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇಂದು ಜಮ್ಮುವಿಗೆ ಮಾತ್ರ 100 ಡ್ರೋನ್‌ಗಳು ಬಂದಿವೆ ಎಂದು ತಿಳಿದುಬಂದಿದೆ. ಕಾಶ್ಮೀರ ಕಣಿವೆಯ ಬಾರಾಮುಲ್ಲದಿಂದ ಗುಜರಾತಿನ ಭುಜ್ ವರೆಗೆ 26 ಸ್ಥಳಗಳಲ್ಲಿ ಪಾಕ್ ಡ್ರೋನ್‌ಗಳು ಕಾಣಿಸಿಕೊಂಡಿವೆ. ಬಾರಾಮುಲ್ಲ, ಶ್ರೀನಗರ, ಅವಂತಿಪುರ, ನಗ್ರೋಟ, ಜಮ್ಮು, ಫಿರೋಜ್‌ಪುರ, ಪಠಾಣ್‌ಕೋಟ್, ಫಾಜಿಲ್ಕಾ, ಲಾಲ್‌ಗಢ್, ಜಾಟ್, ಜೈಸಲ್ಮೇರ್, ಬಾರ್ಮರ್, ಭುಜ್, ಕಾರ್ಬೆಟ್, ಲಾಖಿ ನಾಲ್ ಮುಂತಾದ ಸ್ಥಳಗಳಲ್ಲಿ ದಾಳಿ ನಡೆದಿದೆ.

ಇದನ್ನು ಓದಿ:

https://infomindz.in/nowkapadeyinda-modala-vimana-vikranth/
Prev Post

ಉಡುಪಿಯಲ್ಲಿ ದೇಶವಿರೋಧಿ ಸ್ಲೋಗನ್ ಬರೆದ ಕಾಲೇಜು ವಿದ್ಯಾರ್ಥಿನಿ

Next Post

ಅಡಗಿ ಕುಳಿತಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ‌: ಪಾಕ್ ನಿಂದಲೇ ಎಸ್ಕೇಪ್

post-bars

Leave a Comment

Related post