ಭಾರತದ ಕ್ಷಿಪಣಿಗಳನ್ನು ಎದುರಿಸಲಾಗದ ಪಾಕಿಸ್ತಾನದಿಂದ ಸುಳ್ಳು ಸುದ್ದಿ ರವಾನೆ
ಭಾರತದ ಕ್ಷಿಪಣಿಗಳನ್ನು ಎದುರಿಸಲಾಗದ ಪಾಕಿಸ್ತಾನವು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತದೆ. ಇದೀಗ ಭಾರತದ ವಾಯು ರಕ್ಷಣಾ ವ್ಯವಸ್ಥೆಯಾದ ಎಸ್-400ನ್ನು ಉಡಾಯಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಇದು ಸುಳ್ಳು ಎಂದು ಭಾರತ ತಿಳಿಸಿದೆ.
ಹೊಸದಿಲ್ಲಿ: ಭಾರತದ ಕ್ಷಿಪಣಿಗಳನ್ನು ಎದುರಿಸಲಾಗದ ಪಾಕಿಸ್ತಾನವು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತದೆ. ಇದೀಗ ಭಾರತದ ವಾಯು ರಕ್ಷಣಾ ವ್ಯವಸ್ಥೆಯಾದ ಎಸ್-400ನ್ನು ಉಡಾಯಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಇದು ಸುಳ್ಳು ಎಂದು ಭಾರತ ತಿಳಿಸಿದೆ. ಜೆಎಫ್ -17 ಯುದ್ಧ ವಿಮಾನಗಳಿಂದ ಹಾರಿಸಲಾದ ಹೈಪರ್‌ಸಾನಿಕ್ ಕ್ಷಿಪಣಿಗಳು ಆದಂಪುರದಲ್ಲಿ ಭಾರತದ ಎಸ್ -400 ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿವೆ ಎಂಬ ಪಾಕಿಸ್ತಾನದ ಹೇಳಿಕೆ “ಸುಳ್ಳು” ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ಶನಿವಾರ (ಮೇ 10) ತಿಳಿಸಿದ್ದಾರೆ.ಪಾಕಿಸ್ತಾನ ವಾಯುಪಡೆಯ ಹೈಪರ್‌ಸಾನಿಕ್ ಕ್ಷಿಪಣಿಗಳು ಆದಂಪುರದಲ್ಲಿ ಎಸ್ -400 ವ್ಯವಸ್ಥೆಯನ್ನು ನಾಶಪಡಿಸಿವೆ ಎಂದು ಪಾಕಿಸ್ತಾನದ ಸರ್ಕಾರಿ ಪಿಟಿವಿ ಈ ಹಿಂದೆ ವರದಿ ಮಾಡಿತ್ತು. ಚೀನಾದ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ಪ್ರಕಾರ, ಪಾಕಿಸ್ತಾನದ ಜೆಎಫ್ -17 ಥಂಡರ್ ಜೆಟ್ ಭಾರತದ ಪಂಜಾಬ್‌ನಲ್ಲಿ ಭಾರತದ ಎಸ್ -400 ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ಹೇಳಿದೆ. ಭಾರತದ ದಾಳಿಯ ಏಟಿಗೆ ತತ್ತರಿಸಿದ ಪಾಕಿಸ್ತಾನದಲ್ಲಿ ಭೂಕಂಪ
ಇದನ್ನು ಓದಿ: