Back To Top

 32ಕ್ಕೂ ಹೆಚ್ಚು ಏರ್ಪೋರ್ಟ್ ಗಳಲ್ಲಿ ಕಟ್ಟೆಚ್ಚರ

32ಕ್ಕೂ ಹೆಚ್ಚು ಏರ್ಪೋರ್ಟ್ ಗಳಲ್ಲಿ ಕಟ್ಟೆಚ್ಚರ

ಭಾರತ ಹಾಗೂ ಪಾಕಿಸ್ತಾನ ನಡುವಿನ ಘರ್ಷಣೆ ಮತ್ತಷ್ಟು ತೀವ್ರಗೊಂಡಿದ್ದು, ಉದ್ವಿಗ್ನತೆ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಏರ್ಪೋರ್ಟ್ ಗೋಳನ್ನು ಬಂದ್ ಮಾಡಲಾಗಿದೆ.

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಘರ್ಷಣೆ ಮತ್ತಷ್ಟು ತೀವ್ರಗೊಂಡಿದ್ದು, ಉದ್ವಿಗ್ನತೆ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಏರ್ಪೋರ್ಟ್ ಗೋಳನ್ನು ಬಂದ್ ಮಾಡಲಾಗಿದೆ. ಪಾಕಿಸ್ತಾನ ಹಾಗೂ ಭಾರತದ ನಡುವಿನ ಘರ್ಷಣೆಯಿಂದ ದೇಶದ 32 ಏರ್ಪೋರ್ಟ್ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಈ ಮೊದಲು ಹೇಳಿತ್ತು. ಅದರಂತೆ ಇದೀಗ ದಿನಾಂಕವನ್ನು ವಿಸ್ತರಣೆ ಮಾಡಿದ್ದು ಮೇ 15ರವರೆಗೆ ಉತ್ತರ ಭಾರತದ ಬಹುತೇಕ ಏರ್ಪೋರ್ಟ್ ಗಳು ಬಂದ್ ಆಗಿರುತ್ತವೆ. ಚಂಡೀಗಢ, ಶ್ರೀನಗರ, ಲೂದಿಯಾನ, ಅಮೃತಸರ, ಪಟಿಯಾಲಾ,ಶಿಮ್ಲ, ಧರ್ಮಶಾಲಾ ಸೇರಿದಂತೆ 32ಕ್ಕೂ ಹೆಚ್ಚು ಏರ್ಪೋರ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಿಮಾನ ಪ್ರಯಾಣ ಮಾಡುವಂತಹ ಪ್ರಯಾಣಿಕರು 3 ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಬರುವಂತೆ ಈಗಾಗಲೇ ಸೂಚಿಸಲಾಗಿದೆ. ದೇಶದ್ಯಾಂತ ಇರುವ ಏರ್ಪೋರ್ಟ್ಗಳಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಮುಂಚಿತವಾಗೆ ಬರಬೇಕೆಂದು ಹೇಳಲಾಗಿದೆ. ನೆರೆಯ ರಾಷ್ಟ್ರ ಪಾಕ್ ಮಧ್ಯ ಘರ್ಷಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ.

Prev Post

ಪಾಕಿಸ್ತಾನದ ವಾಯು ಸೇನೆಯು ವಿಫಲ ಪ್ರಯತ್ನ

Next Post

ಭಾರತದ ಕ್ಷಿಪಣಿಗಳನ್ನು ಎದುರಿಸಲಾಗದ ಪಾಕಿಸ್ತಾನದಿಂದ ಸುಳ್ಳು ಸುದ್ದಿ ರವಾನೆ

post-bars

Leave a Comment

Related post