ಪಾಕಿಸ್ತಾನದ ವಾಯು ಸೇನೆಯು ವಿಫಲ ಪ್ರಯತ್ನ
ಪಾಕಿಸ್ತಾನದ ಕರಾಚಿಯ ಮೇಲೆ ಭಾರತೀಯ ನೌಕಾಪಡೆಯು ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಐಎನ್ಎಸ್ ವಿಕ್ರಾಂತ್ ಘರ್ಜನೆ ಶುರು ಮಾಡಿದೆ. ಈ ಸಬ್ ಮರೀನ್ನ ಮೂಲಕ ಕರಾಚಿ ನೌಕಾ ನೆಲೆಯ ಮೇಲೆ ದಾಳಿ ಮಾಡಲಾಗಿದೆ. ಇದು ಪಾಕಿಸ್ತಾನದ ಪ್ರಮುಖ ನೌಕಾ ನೆಲೆಯಾಗಿದ್ದು. ಪಾಕ್ನ ವ್ಯಾಪಾರ ಕೇಂದ್ರವೂ ಇದಾಗಿದೆ.
ನವದೆಹಲಿ: ಪಾಕಿಸ್ತಾನದ ಕರಾಚಿಯ ಮೇಲೆ ಭಾರತೀಯ ನೌಕಾಪಡೆಯು ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಐಎನ್ಎಸ್ ವಿಕ್ರಾಂತ್ ಘರ್ಜನೆ ಶುರು ಮಾಡಿದೆ. ಈ ಸಬ್ ಮರೀನ್ನ ಮೂಲಕ ಕರಾಚಿ ನೌಕಾ ನೆಲೆಯ ಮೇಲೆ ದಾಳಿ ಮಾಡಲಾಗಿದೆ. ಇದು ಪಾಕಿಸ್ತಾನದ ಪ್ರಮುಖ ನೌಕಾ ನೆಲೆಯಾಗಿದ್ದು. ಪಾಕ್ನ ವ್ಯಾಪಾರ ಕೇಂದ್ರವೂ ಇದಾಗಿದೆ. ಭಾರತೀಯ ಸೇನೆ ಹಾಗೂ ಭಾರತ ಸರ್ಕಾರವು ಹಲವು ದಿನಗಳಿಂದ ನಾವಾಗಿ ನಾವು ಯಾವುದೇ ದಾಳಿಯನ್ನು ಪಾಕಿಸ್ತಾನ ಹಾಗೂ ಪಾಕಿಸ್ತಾನದ ಸೇನೆಯನ್ನು ಗುರಿಯಾಗಿಸಿಕೊಂಡು ಮಾಡುವುದಿಲ್ಲ. ಒಂದೊಮ್ಮೆ ಪಾಕಿಸ್ತಾನವು ನಮ್ಮ ಮೇಲೆ ದಾಳಿ ಮಾಡಿದರೆ ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಲಿದ್ದೇವೆ. ನಮ್ಮ ದೇಶವನ್ನು ರಕ್ಷಿಸಿಕೊಳ್ಳುವುದಕ್ಕೆ ಹಾಗೂ ಪಾಕಿಸ್ತಾನಕ್ಕೆ ಹೇಗೆ ಪ್ರತ್ಯುತ್ತರ ನೀಡಬೇಕು ಎನ್ನುವುದು ತಿಳಿದಿದೆ ಎಂದು ಭಾರತ ಎಚ್ಚರಿಕೆ ನೀಡಿತ್ತು. ಇದೀಗ ಕರಾಚಿಯಲ್ಲಿ ಭಾರತೀಯ ಸೇನೆಯ ಐಎನ್ಎಸ್ ವಿಕ್ರಾಂತ್ ಯುದ್ಧ ವಾಹಕ ನೌಕೆಯು ಮೂಲಕ ದಾಳಿ ನಡೆಸಲಾಗಿದೆ.
ಪ್ರಮುಖ ವ್ಯಾಪಾರ ಕೇಂದ್ರ: ಇನ್ನು ಭಾರತೀಯ ನೌಕಾಪಡೆಯು ಪ್ರಮುಖವಾಗಿ ಪಾಕ್ನ ಕರಾಚಿಯ ನೌಕಾಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ವರದಿಯಾಗುತ್ತಿದ್ದು. ಇದು ಪಾಕಿಸ್ತಾನದ ಪ್ರಮುಖ ವ್ಯಾಪಾರ ಕೇಂದ್ರ ಇದಾಗಿದೆ. ಇಲ್ಲಿನ ಪ್ರಮುಖ ಬಂದರುಗಳ ಮೂಲಕವೇ ಪಾಕ್ – ದೇಶ ವಿದೇಶಗಳಿಗೆ ಸರಕು – ಸಾಮಾಗ್ರಿಗಳನ್ನು ಸರಬರಾಜು ಮಾಡುತ್ತದೆ. ಆಮದು ಹಾಗೂ ರಫ್ತುನಿಂತಹ ಕೆಲಸಗಳು ಇಲ್ಲಿ ನಡೆಯುತ್ತದೆ. ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಯುದ್ಧ ವಾಹಕ ನೌಕೆಯು ಪಾಕ್ನಲ್ಲಿ ಘರ್ಜಿಸಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಹೆಚ್ಚಾಗಿದೆ. ಇಂದು ರಾವ್ಲ್ಪಿಂಡಿಯಲ್ಲಿ ಭಾರತ ಮಿಸೈಲ್ ದಾಳಿಯನ್ನು ನಡೆಸಿತ್ತು. ಇದಕ್ಕುತ್ತರವಾಗಿ ಪಾಕ್ ಸೇಡು ತೀರಿಸಿಕೊಳ್ಳಲು ಗುರುವಾರ ಸಂಜೆ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಪಾಪಿ ಪಾಕಿಸ್ತಾನದ ಆಸೆ ಕನಸಿಗೆ ಭಾರತೀಯ ವೀರ ಯೋಧರು ಪ್ರತ್ಯುತ್ತರ ನೀಡಿದ್ದಾರೆ. ಅಲ್ಲದೆ ಭಾರತದ ಹಲವು ನಗರಗಳಲ್ಲಿ ದೊಡ್ಡ ದಾಳಿಗೆ ಮುಂದಾಗಿದ್ದ ಪಾಕ್ ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದ ಬೆನ್ನಲ್ಲೆ ಮತ್ತೊಂದು ದೊಡ್ಡ ಅಪ್ಡೇಟ್ ಸಿಕ್ಕಿದೆ.
ಭಾರತೀಯ ಸೇನೆಯು ಪಾಕಿಸ್ತಾನಿ ಪೈಲಟ್ನನ್ನು ರಾಜಸ್ಥಾನದ ಲಾಠಿಯಲ್ಲಿ ಬಂಧಿಸಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಈ ಪೈಲಟ್ ಪಾಕಿಸ್ತಾನ ವಾಯುಪಡೆಯ ಜೆಎಫ್ -17 ಯುದ್ಧ ವಿಮಾನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಯುದ್ಧ ವಿಮಾನವನ್ನು ಭಾರತ ಹೊಡೆದು ಉರುಳಿಸಿದೆ. ಭಾರತೀಯ ಅಧಿಕಾರಿಗಳು ಪೈಲಟ್ ಅವರ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಅವರು ಪಾಕಿಸ್ತಾನ ವಾಯುಪಡೆಯ ಹಿರಿಯ ಅಧಿಕಾರಿಯಾಗಿರಬಹುದು ಎಂದು ನಂಬಲಾಗಿದೆ.
ಇದನ್ನು ಓದಿ: