Back To Top

 ಸಿಂಧೂರʼ ಅರ್ಥ ಹುಡುಕಾಡ್ತಿದೆ ಪಾಕ್‌: ಗೂಗಲ್‌ನಲ್ಲಿ ಟ್ರೆಂಡ್‌
May 7, 2025

ಸಿಂಧೂರʼ ಅರ್ಥ ಹುಡುಕಾಡ್ತಿದೆ ಪಾಕ್‌: ಗೂಗಲ್‌ನಲ್ಲಿ ಟ್ರೆಂಡ್‌

ಆಪರೇಷನ್‌ ಸಿಂಧೂರʼ (Operation Sindoor) ಹೆಸರಲ್ಲಿ ಪಾಕ್‌ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಸಸ್ಪೆನ್ಸ್‌ ದಾಳಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾತ್ರೋ ರಾತ್ರಿ ನಡೆಸಿದ 23 ನಿಮಿಷಗಳ ದಾಳಿಯಲ್ಲಿ ಸುಮಾರು 100 ಉಗ್ರರು ಹತರಾಗಿದ್ದಾರೆ.

ನವದೆಹಲಿ: ʻಆಪರೇಷನ್‌ ಸಿಂಧೂರʼ (Operation Sindoor) ಹೆಸರಲ್ಲಿ ಪಾಕ್‌ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಸಸ್ಪೆನ್ಸ್‌ ದಾಳಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾತ್ರೋ ರಾತ್ರಿ ನಡೆಸಿದ 23 ನಿಮಿಷಗಳ ದಾಳಿಯಲ್ಲಿ ಸುಮಾರು 100 ಉಗ್ರರು ಹತರಾಗಿದ್ದಾರೆ. ಈ ದಾಳಿಯು ಪಾಕ್‌ ಜನತೆಯಲ್ಲೂ ನಡುಕ ಹುಟ್ಟಿಸಿದ್ದು, ಗೂಗಲ್‌ನಲ್ಲಿ ವಾಯುದಾಳಿ (Air Strike), ಭಾರತೀಯ ಸೇನೆ, ಭಾರತ ಮತ್ತು ಆಪರೇಷನ್ ಸಿಂಧೂರದ ಬಗ್ಗೆ ತೀವ್ರ ಹುಡುಕಾಟ ನಡೆಸಿದ್ದಾರೆ. ʻಸಿಂಧೂರʼ ಹೆಸರಿನ ಅರ್ಥವನ್ನು ತೆಲೆ ಕೆಡಿಸಿಕೊಂಡು ಹುಡುಕಾಡುತ್ತಿದ್ದಾರೆ ಎಂಬುದು ಗೂಗಲ್ ಟ್ರೆಂಡ್‌‌ ನಲ್ಲಿ ಗೊತ್ತಾಗಿದೆ.

ಸಿಂಧೂರ ಎಂದರೇನು?

ಸಿಂಧೂರ ಎಂಬ ಪದವು ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ, ರಕ್ಷಣೆ, ಸಮೃದ್ಧಿ, ಸೌಭಾಗ್ಯ, ಶಕ್ತಿ ದೇವತೆ ಪಾರ್ವತಿ, ದುರ್ಗಾ ಶಕ್ತಿಯ ಸಂಕೇತವಾಗಿದೆ. ಭಾರತೀಯ ಸೇನೆಯ ಧೈರ್ಯ, ತ್ಯಾಗ, ಶೌರ್ಯ ಮತ್ತು ದೇಶವನ್ನು ರಕ್ಷಿಸುವ ಸಂಕಲ್ಪವನ್ನು ಸೂಚ್ಯಕವಾಗಿ ತಿಳಿಸುತ್ತದೆ. ಇದನ್ನೂ ಓದಿ: Operation Sindoor | ಮೋಸ್ಟ್‌ ಡೇಂಜರಸ್‌ ಉಗ್ರರನ್ನ ತಯಾರು ಮಾಡ್ತಿದ್ದ ತಾಣಗಳು ಉಡೀಸ್‌ ಆದ್ರೆ ಭಾರತದಲ್ಲಿ ತಜ್ಞರು ಇದನ್ನು ಎರಡು ರೀತಿಯಾಗಿ ವಿವರಿಸುತ್ತಾರೆ. ಮೊದಲಿಗೆ ಪಹಲ್ಗಾಮ್‌ನಲ್ಲಿ 26 ಮಹಿಳೆಯರ ಸಿಂಧೂರ (ಕುಂಕುಮ ಭಾಗ್ಯ) ಅಳಿಸಿದ ಉಗ್ರರ ದಾಳಿಗೆ ಪ್ರತೀಕಾರ ಆಗಿದೆ. ಮತ್ತೊಂದು ಕಾಶ್ಮೀರ ಭಾರತದ ಮುಕುಟಮಣಿ, ಭಾರತದ ತಿಲಕವಿದ್ದಂತೆ ಹೀಗಾಗಿ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಎಚ್ಚರಿಕೆಯ ದಾಳಿಯೂ ಇದಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಸದ್ಯ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಭಾರತೀಯ ಸೇನೆ ನಡೆಸಿರುವ ಪ್ರತೀಕಾರದ ದಾಳಿಯಲ್ಲಿ ಸುಮಾರು 100 ಉಗ್ರರು ಸಾವನ್ನಪ್ಪಿದ್ದಾರೆ. ಜೊತೆಗೆ ಮೋಸ್ಟ್‌ ವಾಂಟೆಡ್‌ಗಳನ್ನ ತಯಾರು ಮಾಡಿದ್ದ ಜೈಶ್‌ ಎ ಮೊಹಮ್ಮದ್‌, ಲಷ್ಕರ್‌ ಎ ತೈಬಾ (ಎಲ್‌ಇಟಿ) ಮತ್ತು ಇಜ್ಬುಲ್‌ ಮುಜಾಹಿದ್ದೀನ್‌ ಉಗ್ರರ ಪ್ರಧಾನ ಕಚೇರಿಗಳನ್ನು ಧ್ವಂಸಗೊಳಿಸಿದೆ.

ಇದನ್ನು ಓದಿ:

https://infomindz.in/rajyada-abivruddi-karyagalige-1-laksha-meesalu/
Prev Post

ಭಾರತದ ಆಪರೇಷನ್ ಸಿಂಧೂರ; ಪಾಕಿಸ್ತಾನ ಷೇರುಪೇಟೆ ಅಸ್ತವ್ಯಸ್ತ: ಕರಾಚಿ ಇಂಡೆಕ್ಸ್ ಕುಸಿತ

Next Post

ಆಪರೇಷನ್ ಸಿಂಧೂರ್: ಭಾರತದ ದಾಳಿ ಹೇಗಿರಬಹುದು ಅನ್ನೋದಕ್ಕೆ ಈ 7 ಸಿನಿಮಾ ಒಂದು…

post-bars

Leave a Comment

Related post