Back To Top

 12 ದಿನಗಳ ಕಾಲ ಎನ್‌ಐಎ ವಶಕ್ಕೆ ರಾಣ: ವಿಚಾರಣೆಗೆ ಬಿಗಿ ಭದ್ರತೆ

12 ದಿನಗಳ ಕಾಲ ಎನ್‌ಐಎ ವಶಕ್ಕೆ ರಾಣ: ವಿಚಾರಣೆಗೆ ಬಿಗಿ ಭದ್ರತೆ

ಭಯೋತ್ಪಾದಕ ದಾಳಿಯ ಆರೋಪಿಯಾಗಿರುವ ತಹವ್ವೂರ್ ರಾಣಾನನ್ನು ಸೋಮವಾರ (28) ದೆಹಲಿ ಕೋರ್ಟ್ ಹೆಚ್ಚಿನ ತನಿಖೆಗಾಗಿ ಮತ್ತೆ 12 ದಿನಗಳ ಎನ್‌ಐಎ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ನವದೆಹಲಿ: ತಹವ್ವೂರ್ ರಾಣಾನ 18 ದಿನಗಳ NIA ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಕಾರಣ ಆರೋಪಿಯನ್ನು ಅಧಿಕಾರಿಗಳು ಬಿಗಿ ಭದ್ರತೆಯೊಂದಿಗೆ ಆರೋಪಿ ಮುಖಕ್ಕೆ ಮುಸುಕು ಹಾಕಿ NIA ವಿಶೇಷ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರ ಮುಂದೆ ಹಾಜರುಪಡಿಸಿದರು. ಇನ್ನೂ ಮುಂಬೈ ದಾಳಿಯ ಉಗ್ರನ ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ತನಿಖೆಗಾಗಿ ರಾಣಾನನ್ನು ಮತ್ತೆ 12 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿದೆ.

ವಕೀಲರ ಭೇಟಿಗೆ ಅವಕಾಶ

ಹಿಂದಿನ ರಿಮಾಂಡ್ ಆದೇಶದಲ್ಲಿ, ನ್ಯಾಯಾಲಯವು ಪ್ರತಿ 24 ಗಂಟೆಗಳಿಗೊಮ್ಮೆ ತಹವ್ವೂರ್ ಹುಸೇನ್ ರಾಣಾ ಅವರ ವೈದ್ಯಕೀಯ ಪರೀಕ್ಷೆಯನ್ನು ನಡೆಸುವಂತೆ NIA ಗೆ ಸೂಚಿಸಿತ್ತು ಮತ್ತು ಪ್ರತಿ ದಿನ ಬಿಟ್ಟು ದಿನ ತಮ್ಮ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಿತ್ತು. ನ್ಯಾಯಾಲಯವು ರಾಣಾ ಅವರಿಗೆ ‘ಸಾಫ್ಟ್-ಟಿಪ್ ಪೆನ್’ ಅನ್ನು ಮಾತ್ರ ಬಳಸಲು ಅನುಮತಿ ನೀಡಿತ್ತು ಮತ್ತು ಅವರ ವಕೀಲರೊಂದಿಗೆ ಅವರ ಮಾತುಕತೆಗಳು NIA ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಬೇಕು, ಅವರು ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ದೂರದಲ್ಲಿಯೇ ಇರುತ್ತಾರೆ ಎಂದು ನಿರ್ದಿಷ್ಟಪಡಿಸಿತ್ತು. ಹಿಂದಿನ ವಾದಗಳ ಸಮಯದಲ್ಲಿ, ಪಿತೂರಿಯ ಸಂಪೂರ್ಣ ವ್ಯಾಪ್ತಿಯನ್ನು ಒಟ್ಟುಗೂಡಿಸಲು ರಾಣಾ ಅವರ ಕಸ್ಟಡಿ ಅತ್ಯಗತ್ಯ ಎಂದು NIA ಒತ್ತಿಹೇಳಿತು. 26/11 ದಾಳಿಗೆ ಸಂಬಂಧಿಸಿದ ವಿವಿಧ ಸ್ಥಳಗಳಿಗೆ ಅವರನ್ನು ಕರೆದೊಯ್ಯುವುದು ಸೇರಿದಂತೆ 17 ವರ್ಷಗಳ ಹಿಂದಿನ ಘಟನೆಗಳನ್ನು ತಿಳಿಯಲು ಅವರ ಕಸ್ಟಡಿ ಅಗತ್ಯವಿದೆ ಎಂದು ಅವರು ಹೇಳಿದರು.

ರಾಣಾ ಪರ ವಕೀಲ ಪಿಯೂಷ್ ಸಚ್‌ದೇವ್ ಅವರು ಮಾತನಾಡಿದ್ದು, ಆರೋಪಿಯನ್ನು ಇನ್ನೂ 12 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಕಳುಹಿಸಲಾಗಿದೆ. ಎನ್‌ಐಎ ಹೆಚ್ಚಿನ ದಾಖಲೆಗಳೊಂದಿಗೆ ಆರೋಪಿಯ ವಿಚಾರಣೆ ನಡೆಸಲು ಕೋರಿದೆ ಎಂದರು. ಎನ್‌ಐಎ ರಾಣಾ ವಿಚಾರಣೆಗೆ ಹೆಚ್ಚಿನ ಸಮಯ ಬೇಕು ಎಂದು ಹೇಳಿದೆ. ತಹವ್ವೂರ್ ರಾಣಾ ತನಿಖೆಯಲ್ಲಿದ್ದಾರೆ. ನಾನು ಅವರನ್ನು ನಿಯಮಿತವಾಗಿ ಭೇಟಿಯಾಗುತ್ತಿದ್ದೇನೆ ಅವರು ತಿಳಿಸಿದ್ದಾರೆ.

ಇದನ್ನು ಓದಿ:

https://infomindz.in/pathnige-buddivada-helidakke-pathiya-mele-dali/
Prev Post

ಭಾರತ ಪ್ರತೀಕಾರದ ಕ್ರಮಕ್ಕೆ ಪತರಗುಟ್ಟಿದ‌ ಪಾಕಿಸ್ತಾನ

Next Post

ರಫೇಲ್ ಫೈಟರ್ ಜೆಟ್ ಖರೀದಿಗೆ ಅಂತರ್ ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಭಾರತ…

post-bars

Leave a Comment

Related post