ಗೋಲ್ಡ್ ವಂಚನೆ ಕೇಸಲ್ಲಿ ಬಂಧಿತ ಐಶ್ವರ್ಯಾ ಗೌಡ ಜತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಪೋಟೋ ವೈರಲ್
ಚಿನ್ನ ವಂಚನೆ ಪ್ರಕರಣದ ಆರೋಪಿ ಐಶ್ವರ್ಯ ಗೌಡ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿಯೊಂದಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿದಂತ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬೆಂಗಳೂರು: ಚಿನ್ನ ವಂಚನೆ ಪ್ರಕರಣದ ಆರೋಪಿ ಐಶ್ವರ್ಯ ಗೌಡ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿಯೊಂದಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿದಂತ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ED (ಜಾರಿ ನಿರ್ದೇಶನಾಲಯ) ಐಶ್ವರ್ಯಾ ಗೌಡ ಅವರನ್ನ ಬಂಧಿಸಿದ್ದು ವಿಚಾರಣೆ ನಡೆಸುತ್ತಿದೆ. ಇದರ ನಡುವೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹಾಗೂ ಐಶ್ವರ್ಯಾ ಗೌಡ ಅವರ ಕೆಲವು ಫೋಟೋಗಳು ವೈರಲ್ ಆಗಿವೆ. ಚಿನ್ನದ ಕೇಸ್ನಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ವಿನಯ್ ಕುಲಕರ್ಣಿ ಅವರು ಐಶ್ವರ್ಯಾ ಗೌಡ ನನಗೆ ಪರಿಚಯ ಅಷ್ಟೇ ಎಂದಿದ್ದರು. ಈಗ ಶಾಸಕ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾಗಿರೋ ಪೋಟೋಗಳು ವೈರಲ್ ಆಗಿದ್ದು, ಟ್ವಿಸ್ಟ್ ಸಿಕ್ಕಿದೆ. ವಿನಯ್ ಕುಲಕರ್ಣಿ ವಿಡಿಯೋ ಕಾಲ್ನಲ್ಲಿ ಐಶ್ವರ್ಯಾ ಗೌಡ ಚಾಟ್ ಮಾಡುತ್ತಿರೋದು ಫೋಟೋಗಳಲ್ಲಿ ಕಾಣಿಸಿಕೊಂಡಿದೆ. ಗೋಲ್ಡ್ ವಂಚನೆ ಕೇಸಲ್ಲಿ ಐಶ್ವರ್ಯಾ ಗೌಡ ಅವರನ್ನು ಬಂಧಿಸಿರುವ ಇ.ಡಿ ವಿನಯ್ ಕುಲಕರ್ಣಿ ನಿವಾಸದಲ್ಲೂ ಪರಿಶೀಲನೆ ನಡೆಸಿತ್ತು. ಈ ನಡುವೆ ಐಶ್ವರ್ಯಾ-ವಿನಯ್ ಕುಲಕರ್ಣಿ ಅವರ ಫೋಟೋಗಳು ಹೊಸ ಟ್ವಿಸ್ಟ್ ನೀಡಿದೆ.