ಲಷ್ಕರ್ ಎ- ತೊಯ್ಬಾದ ಕಮಾಂಡರ್ ನನ್ನು ಹತ್ಯೆ ಮಾಡಿದ ಸೇನೆ
ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಬೇಟೆಯಾಡಿದ್ದು, ಲಷ್ಕರ್ ಎ- ತೊಯ್ಬಾದ ಕಮಾಂಡರ್ ನನ್ನು ಹತ್ಯೆ ಮಾಡಿದೆ. ಜಮ್ಮು-ಕಾಶ್ಮೀರದ ಬಂಡೀಪೋರಾ ಬಳಿ ಈತನನ್ನು ಹತ್ಯೆಗೈದಿರುವ ಶಂಕೆಯಿದೆ .
ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಬೇಟೆಯಾಡಿದ್ದು, ಲಷ್ಕರ್ ಎ- ತೊಯ್ಬಾದ ಕಮಾಂಡರ್ ನನ್ನು ಹತ್ಯೆ ಮಾಡಿದೆ. ಜಮ್ಮು-ಕಾಶ್ಮೀರದ ಬಂಡೀಪೋರಾ ಬಳಿ ಈತನನ್ನು ಹತ್ಯೆಗೈದಿರುವ ಶಂಕೆಯಿದೆ .
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಭಯೋತ್ಪಾದಕರ ಮನೆಗಳನ್ನು ಭದ್ರತಾ ಪಡೆಗಳು ಮತ್ತು ಜೆ &ಕೆ ಅಧಿಕಾರಿಗಳು ಶುಕ್ರವಾರ ನಾಶಪಡಿಸಿದ್ದಾರೆ.ಬಿಜ್ಬೆಹರಾದಲ್ಲಿರುವ ಲಷ್ಕರ್ ಭಯೋತ್ಪಾದಕ ಆದಿಲ್ ಹುಸೇನ್ ಥೋಕ್ಕರ್ ಅವರ ನಿವಾಸವನ್ನು ಐಇಡಿಗಳನ್ನು ಬಳಸಿ ಸ್ಫೋಟಿಸಲಾಗಿದ್ದರೆ, ಟ್ರಾಲ್ನಲ್ಲಿರುವ ಆಸಿಫ್ ಶೇಖ್ ಅವರ ಮನೆಯನ್ನು ಬುಲ್ಡೋಜರ್ನಿಂದ ನೆಲಸಮಗೊಳಿಸಲಾಗಿದೆ.
26 ಜನರ ಸಾವಿಗೆ ಕಾರಣವಾದ ಸುಂದರವಾದ ಬೈಸರನ್ ಕಣಿವೆಯಲ್ಲಿ ದಾಳಿಯನ್ನು ಯೋಜಿಸಲು ಮತ್ತು ನಡೆಸಲು ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುವಲ್ಲಿ ಆದಿಲ್ ಥೋಕರ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹೇಳಲಾಗಿದೆ.
ಇದನ್ನು ಓದಿ: