ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್ವೆಲ್ ಕೊರೆಸಿದ ದಂಪತಿ
ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪ ಗ್ರಾಮದ ದಂಪತಿ ತಮ್ಮ ತೋಟದಲ್ಲಿ ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್ವೆಲ್ ಕೊರೆಸಿದ್ದು, ಮೂರು ಇಂಚು ನೀರು ಚಿಮ್ಮಿದೆ. ಜೇಮ್ಸ್ ಮತ್ತು ಜೆಸ್ಸಿ ದಂಪತಿ 13 ತಿಂಗಳ ಹಣ 52 ಸಾವಿರ ರೂ. ಗೃಹ ಲಕ್ಷ್ಮೀ ಹಣದಲ್ಲಿ ಬೋರ್ವೆಲ್ ಕೊರೆಸಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪ ಗ್ರಾಮದ ದಂಪತಿ ತಮ್ಮ ತೋಟದಲ್ಲಿ ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್ವೆಲ್ ಕೊರೆಸಿದ್ದು, ಮೂರು ಇಂಚು ನೀರು ಚಿಮ್ಮಿದೆ. ಜೇಮ್ಸ್ ಮತ್ತು ಜೆಸ್ಸಿ ದಂಪತಿ 13 ತಿಂಗಳ ಹಣ 52 ಸಾವಿರ ರೂ. ಗೃಹ ಲಕ್ಷ್ಮೀ ಹಣದಲ್ಲಿ ಬೋರ್ವೆಲ್ ಕೊರೆಸಿದ್ದಾರೆ. ಕಳೆದ ವರ್ಷ ಎರಡು ಬೋರ್ ತೆಗೆಸಿದ್ದರು. ಆದರೆ, ಫೇಲ್ ಆಗಿದ್ದವು. ಅಮ್ಮ ಮತ್ತು ಪತ್ನಿ ಇಬ್ಬರ 13 ತಿಂಗಳ ಹಣ ಹಣ ಒಂದುಗೂಡಿಸಿ ಜೇಮ್ಸ್ ಬೋರ್ ತೆಗೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಂಪತಿ ಅಭಿನಂದನೆ ಸಲ್ಲಿಸಿದ್ದಾರೆ. ಎಬ್ಆರ್ ಪುರ ತಾಲೂಕು ಕಚೇರಿಯಲ್ಲಿ ದಂಪತಿಗೆ ಅಧಿಕಾರಿಗಳು ಸನ್ಮಾನ ಮಾಡಿದ್ದಾರೆ.