Back To Top

 ಬಲಿ ನೀಡಲು ಮೇಕೆ ಕೊಂಡೊಯ್ಯುತ್ತಿದ್ದಾಗ ಅಪಘಾತ: ಕಾರಿನಲ್ಲಿದ್ದವರೆಲ್ಲರೂ ಸಾವು, ಬದುಕುಳಿದ ಮೇಕೆ
April 15, 2025

ಬಲಿ ನೀಡಲು ಮೇಕೆ ಕೊಂಡೊಯ್ಯುತ್ತಿದ್ದಾಗ ಅಪಘಾತ: ಕಾರಿನಲ್ಲಿದ್ದವರೆಲ್ಲರೂ ಸಾವು, ಬದುಕುಳಿದ ಮೇಕೆ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಮೇಕೆ ಬಲಿ ನೀಡಲು ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ನಂತರ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

hhhhh

ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮೇಕೆಯನ್ನು ಬಲಿ ನೀಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದು ಮೇಕೆ ಮಾತ್ರ ಬದುಕುಳಿದಿದೆ. 
ಮಧ್ಯಪ್ರದೇಶದ ಜಬಲ್ಪುರದ ಚಾರ್ಗವಾನ್ ಪ್ರದೇಶದಲ್ಲಿ ಗುರುವಾರ ಆರು ಜನರನ್ನು ಹೊತ್ತೊಯ್ಯುತ್ತಿದ್ದ ಸ್ಕಾರ್ಪಿಯೋ ವಾಹನವೊಂದು ಸೇತುವೆಯಿಂದ ಉರುಳಿದ್ದು, ಸಮೀಪದ ಸೋಮಾವತಿ ನದಿಗೆ ಬಿದ್ದಿದೆ. ಈ ದುರಂತದಲ್ಲಿ ಸ್ಕಾರ್ಫಿಯೋ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ವಿಚಿತ್ರ ಎಂದರೆ ಇವರ ಕಾರಿನಲ್ಲಿದ್ದ ಇವರು ದೇಗುಲದಲ್ಲಿ ಬಲಿ ನೀಡುವುದಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದ ಮೇಕೆ ಮಾತ್ರ ಯಾವುದೇ ಗಾಯಗಳಿಲ್ಲದೇ ಪವಾಡ ಸದೃಶವಾಗಿ ಪಾರಾಗಿದ್ದು, ಅಲ್ಲಿನ ಸ್ಥಳೀಯರನ್ನು ಅಚ್ಚರಿಗೊಳ್ಳುವಂತೆ ಮಾಡಿದೆ. 
ಈ ದುರಂತದಲ್ಲಿ ಮೃತರಾದವರು ನರಸಿಂಗ್‌ಪುರ ಜಿಲ್ಲೆಯ ದುಲ್ಹಾ ದೇವ್ ಮಹಾರಾಜ್ ದೇವಸ್ಥಾನದಲ್ಲಿ ಸಾಂಕೇತಿಕ ಮೇಕೆ ಬಲಿ ನೀಡಿ ವಾಪಸಾಗುತ್ತಿದ್ದರು. ಅಂದರೆ ಸಂಪೂರ್ಣವಾಗಿ ಮೇಕೆಯ ಬಲಿ ನೀಡುವ ಬದಲು ಅದರ ಕಿವಿಯನ್ನು ಕತ್ತರಿಸಿ ದೇವರಿಗೆ ಸಾಂಕೇತಿಕ ಬಲಿ ನೀಡಿದ್ದರು. ಇದಾದ ನಂತರ ತಮ್ಮ ಸ್ಕಾರ್ಫಿಯೋ ಗಾಡಿಯಲ್ಲಿ ಗೋಟೆಗಾಂವ್‌ನಿಂದ ವಾಪಸ್ ಜಬಲ್‌ಪುರಕ್ಕೆ ಮರಳುತ್ತಿದ್ದಾಗ ಚಾರ್ಗವಾನ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.
ಅಪಘಾತ ನಡೆದ ಕೂಡಲೇ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ರಕ್ಷಣಾ ತಂಡಗಳು ಭೀಕರ ಅಪಘಾತದಿಂದ ನಜ್ಜುಗುಜ್ಜಾದ ವಾಹನವನ್ನು ಕತ್ತರಿಸಿ ಮೃತರನ್ನು , ಗಾಯಾಳುಗಳನ್ನು ಕಾರಿನಿಂದ ಹೊರ ತೆಗೆದಿದ್ದಾರೆ.  
ಪೊಲೀಸ್ ಅಧಿಕಾರಿ ಅಭಿಷೇಕ್ ಪ್ಯಾಸಿ ಮೃತರನ್ನು ಸ್ಥಳದಲ್ಲೇ ಮೃತರಾದವರನ್ನು ಕಿಶನ್ ಪಟೇಲ್, ಸಾಗರ್ ಪಟೇಲ್, ರಾಜೇಂದ್ರ ಪಟೇಲ್ ಮತ್ತು ಮಹೇಂದ್ರ ಪಟೇಲ್ ಎಂದು ದೃಢಪಡಿಸಿದರು. ಹಾಗೆಯೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮನೋಜ್ ಪಟೇಲ್ (34) ಮತ್ತು ಜಿತೇಂದ್ರ ಪಟೇಲ್ (35) ಅವರು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ಇವರೆಲ್ಲರೂ ಭೇದಘಾಟ್ ಚೌಕಿಟಲ್‌ ನಿವಾಸಿಗಳಾಗಿದ್ದಾರೆ.
ವಾಹನದಲ್ಲಿದ್ದವರು ಮದ್ಯ ಸೇವಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ ಮತ್ತು ವಾಹನದಿಂದ ಮದ್ಯದ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಕಾರಿನ ಒಳಗೆ ಕಂಡುಬಂದ ಆಹಾರ ಪದಾರ್ಥಗಳು ಇವರು  ಧಾರ್ಮಿಕ ವಿಧಿವಿಧಾನದ ನಂತರ ಔತಣಕೂಟವನ್ನು ಏರ್ಪಡಿಸಿದ್ದಿರಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಅಧಿಕಾರಿ ಪ್ಯಾಸಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:

https://infomindz.in/bank-jhanadhardhan-hiriya-nata-vidhivasha/
Prev Post

ಜಾತಿ ಗಣತಿ- ಸಂಖ್ಯಾಬಲದಿಂದ ರಾಜಕೀಯ ಪ್ರಾಬಲ್ಯಕ್ಕೆ ಬೆದರಿಕೆ ಒಡ್ಡಿದ ಪ್ರಬಲ ವರ್ಗ

Next Post

ಯುವತಿಗೆ ಅಂಗಾಗ ಮುಟ್ಟಿ ಕಿರುಕುಳ ಪ್ರಕರಣ: 10 ದಿನಗಳ ಬಳಿಕ ಕೇರಳದಲ್ಲಿ ಸೆರೆ…

post-bars

Leave a Comment

Related post