ವಿಶ್ವವಿಖ್ಯಾತ ಕರಗಕ್ಕೆ ಕ್ಷಣಗಣನೆ: ಇಲಾಖೆಯಿಂದ ಕರಗಕ್ಕೆ ಹಣ ಬಿಡುಗಡೆ ಮಾಡಿಲ್ಲ, ಆರೋಪ
ವಿಶ್ವವಿಖ್ಯಾತ ಕರಗಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ ಕರಗಕ್ಕೆ ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆ ಹಣ ಬಿಡುಗಡೆ ಮಾಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ. ಇದರ ನಡುವೆ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ದೇವಾಲಯದ ಅರ್ಚಕ ಜ್ಞಾನೇಂದ್ರ ಮಾಧ್ಯಮದ ಮುಂದೆ ಬಂದು ಹೇಳಿಕೆ ನೀಡಿದ್ದು ಹಣ ಬಿಡುಗಡೆ ಮಾಡದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ವಿಶ್ವವಿಖ್ಯಾತ ಕರಗಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ ಕರಗಕ್ಕೆ ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆ ಹಣ ಬಿಡುಗಡೆ ಮಾಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ. ಇದರ ನಡುವೆ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ದೇವಾಲಯದ ಅರ್ಚಕ ಜ್ಞಾನೇಂದ್ರ ಮಾಧ್ಯಮದ ಮುಂದೆ ಬಂದು ಹೇಳಿಕೆ ನೀಡಿದ್ದು ಹಣ ಬಿಡುಗಡೆ ಮಾಡದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಇತಿಹಾಸದಲ್ಲಿ ಮೊದಲ ಬಾರಿಗೆ ಕರಗದ ಪೂಜಾರಿ ಮಾಧ್ಯಮದ ಮುಂದೆ ಬಂದು ಹೇಳಿಕೆ ನೀಡಿದ್ದು. “ದೇವಸ್ಥಾನದ ಚರಿತ್ರೆಯಲ್ಲಿ ಅರ್ಚಕರು ಇದೇ ಮೊದಲ ಬಾರಿಗೆ ಹಣ ಹಾಕಿ ಕರಗ ಮಾಡುತ್ತಿದ್ದೇವೆ. ಸರ್ಕಾರದಿಂದ ಒಂದು ರೂಪಾಯಿ ಬಂದಿಲ್ಲ, ಇದೇ ಮೊದಲ ಬಾರಿಗೆ ಹಣ ಬಿಡುಗಡೆ ಮಾಡಿಲ್ಲ
ನಾನು ಕೈಯಿಂದ ಹಾಕಿ ಅಲಂಕಾರ ಮಾಡ್ತಿದ್ದೇವೆ, ನಾನು 20 ಲಕ್ಷ ಹಣ ಹಾಕಿದ್ದೇನೆ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಜ್ಞಾನೇಂದ್ರ “ಬಿಬಿಎಂಪಿ ಕಚೇರಿ ಇರೋದು ಕರಗದ ಜಾಗದಲ್ಲಿ, ಸೇವೆಯ ರೂಪದಲ್ಲಿ ಬಿಬಿಎಂಪಿ ಸೇವೆ ಮಾಡಿಕೊಂಡು ಬರ್ತಿದೆ. ಇಓ( ಆಡಳಿತಾಧಿಕಾರಿ) ತಪ್ಪಿಸಿಕೊಂಡು ತಿರುಗುತ್ತಿದ್ದಾರೆ
ಕಾಣದ ಕೈಗಳು ಕರಗಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಿದೆ.
ಯಾರೂ ದೇವಸ್ಥಾನಕ್ಕೆ ಬಂದಿಲ್ಲ. ಡಿಸಿ ಬಂದು ಸ್ಥಳ ಪರಿಶೀಲನೆ ಮಾಡಬೇಕಿತ್ತು. ಆದರೆ ಡಿಸಿ ಇಲ್ಲಿಯ ತನಕ ತಾಯಿ ದರ್ಶನ ಮಾಡಿಲ್ಲ ಎಂದು ಹೇಳಿದರು.
ಬೆಂಗಳೂರು ಕರಗಕ್ಕೆ ಹಣದ ಅಭಾವ, ಅಧಿಕಾರಿಗಳ ಕಳ್ಳಾಟಕ್ಕೆ ದೇವಾಲಯದ ಆಡಳಿತ ಮಂಡಳಿ ಬೇಸರ ವ್ಯಕ್ತಪಡಿಸಿದ್ದು. ಮೊಟ್ಟ ಮೊದಲ ಬಾರಿಗೆ ಸಿಂಪಲ್ ಆಗಿ ಕರಗ ಶಕ್ತೋತ್ಸವ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಕರಗ ಸಮಿತಿ ಅಧ್ಯಕ್ಷ ಸತೀಶ್ ಹೇಳಿಕೆ ನೀಡಿದ್ದು. “ವಿಶ್ವ ವಿಖ್ಯಾತ ಕರಗ ಮಹೋತ್ಸವಕ್ಕೆ ಇತಿಹಾಸ ಇದೆ. ನಮಗೆ ಮಾಡಲು ಬಿಡಿ, ನಮ್ಮ ದುಡ್ಡಲ್ಲೇ ನಾವು ಕರಗ ಮಾಡ್ತಿವಿ, ಡಿಕೆಶಿ ಅವರ ಸಪೋರ್ಟ್, ರಾಮಲಿಂಗ ರೆಡ್ಡಿ ಅವರ ಸಪೋರ್ಟ್ ಇದೆ, ಪೂಜಾರಿಗಳು ಗರ್ಭಗುಡಿಯ ಅಲಂಕಾರ ಮಾಡಬೇಕು, ಪೂಜಾರಿಗಳಿಗೆ ತಲೆ ಕೆಟ್ಟು ಹೋಗಿದೆ, ಆದರೆ ಇವರು ನಿಮಗೆ ಮಾಡಲು ಯಾರು ಹೇಳಿದ್ದು ಅಂತಾರೆ. ಹೀಗಾಗಿ ಪೂಜಾರಿಗಳು ಸುಮ್ಮನಾಗಿದ್ದಾರೆ.
ಈಗ ಒಂದು ಕೋಟಿ ಹಣ ಹಾಕಿ, ನಾಳೆ ನಾವೇನು ಮಾಡೋದು. ಹೀಗಾಗಿ ಅಧಿಕಾರಿಗಳು ಲಿಖಿತ ರೂಪದಲ್ಲಿ ನಮಗೆ ಬರೆದುಕೊಡಬೇಕು. 5 ಮನೆತನ ಇದೆ, ಅವರೇ ಕರಗ ಮಾಡೋದು.ಕರಗ ನಿಲ್ಲಿಸುವ ಉದ್ದೇಶ ನಮ್ಮದಲ್ಲ ಎಂದು ಹೇಳಿದರು.
ಇದನ್ನು ಓದಿ: