Back To Top

 ಪರಮಾಣು ಒಪ್ಪಂದ: ಅಮೆರಿಕದಿಂದ ಇರಾನ್‌ಗೆ ಬಾಂಬ್ ಬೆದರಿಕೆ
April 1, 2025

ಪರಮಾಣು ಒಪ್ಪಂದ: ಅಮೆರಿಕದಿಂದ ಇರಾನ್‌ಗೆ ಬಾಂಬ್ ಬೆದರಿಕೆ

ಟೆಹ್ರಾನ್: ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಭಾನುವಾರ ಇರಾನ್‌ಗೆ ಬೆದರಿಕೆ ಹಾಕಿತ್ತು. ಒಂದು ವೇಳೆ ಟೆಹ್ರಾನ್ ಪರಮಾಣು ಒಪ್ಪಂದವನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ, ಇರಾನ್ ಮೇಲೆ ಬಾಂಬ್ ಸ್ಫೋಟಿಸುವುದು ಒಂದೇ ನಮ್ಮಲಿರುವ ಆಯ್ಕೆಯಾಗಿದೆ ಆದ್ದರಿಂದ ಇರಾನ್ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳಬೇಕು ಅಥವಾ ಬಾಂಬ್ ದಾಳಿಯನ್ನು ಎದುರಿಸಬೇಕು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದರು.
ಆದರೆ ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್ ಅಮೆರಿಕ ದಾಳಿಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದೆ.
ಮಾಧ್ಯಮ ವರದಿಗಳ ಪ್ರಕಾರ, ಇರಾನ್ ಪ್ರತೀಕಾರಕ್ಕೆ ಸಿದ್ಧವಾಗಿದೆ. ಅಮೆರಿಕ ದಾಳಿಗೆ ಪ್ರತಿದಾಳಿಗಾಗಿ ಕ್ಷಿಪಣಿಗಳನ್ನು ಸಿದ್ಧಪಡಿಸಲಾಗಿದೆ. ಈ ವಿಚಾರವಾಗಿ ಅಮೆರಿಕದೊಂದಿಗೆ ನೇರ ಮಾತುಕತೆಯನ್ನು ನಡೆಸುವುದಿಲ್ಲ ಎಂದು ಇರಾನ್ ಸ್ಪಷ್ಟವಾಗಿ ಹೇಳಿದೆ.
ಟ್ರಂಪ್ ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ನಾವು ಮಾತುಕತೆಯಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಭರವಸೆಯ ಉಲ್ಲಂಘನೆಯೇ ನಮಗೆ ಇಲ್ಲಿಯವರೆಗೆ ಸಮಸ್ಯೆ ತಂದಿದೆ ಎಂದು ಹೇಳಿದ್ದಾರೆ. ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರು ಅಮೆರಿಕದೊಂದಿಗೆ ಪರೋಕ್ಷವಾಗಿ ಮಾತನಾಡಲು ಸಿದ್ಧರಿದ್ದಾರೆ ಆದರೆ ನೇರವಾಗಿ ಅಲ್ಲ ಎಂದು ಹೇಳಿದ್ದಾರೆ. ಒಮಾನ್ ಮೂಲಕ ಇರಾನ್ ಅಮೆರಿಕಕ್ಕೆ ಈ ಪ್ರತಿಕ್ರಿಯೆ ನೀಡಿದೆ.
ಟ್ರಂಪ್ ಅವರ ಮೊದಲ ಅವಧಿಯಲ್ಲಿ, ಇರಾನ್‌ನೊಂದಿಗಿನ ಸಂಬಂಧಗಳು ತುಂಬಾ ಕಳಪೆಯಾಗಿತ್ತು. ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2018 ರಲ್ಲಿ ಯುಎಸ್ ಪರಮಾಣು ಒಪ್ಪಂದದಿಂದ ಹಿಂದೆ ಸರಿಯಿತು. ಟೆಹ್ರಾನ್ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು. ಹಲವು ವರ್ಷಗಳಿಂದ ಪರೋಕ್ಷ ಮಾತುಕತೆಗಳು ವಿಫಲವಾಗಿವೆ. ಈ ಕ್ರಮದಲ್ಲಿ ಟ್ರಂಪ್ ಅವರು ಇತ್ತೀಚೆಗೆ ಮತ್ತೊಮ್ಮೆ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳಲು ತಮ್ಮ ಸಿದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:

https://infomindz.in/coffeege-visha/
Prev Post

ಪನ್ನೀರ್ ಬಳಸುವಾಗ ಎಚ್ಚರಿಕೆ : ಅಸುರಕ್ಷಿತ ಆಹಾರ ಎಂದ ಆರೋಗ್ಯ ಇಲಾಖೆ

Next Post

ಡಾ.ಜಿ.ಪರಮೇಶ್ವರ ಶೀಘ್ರದಲ್ಲಿಯೇ ಮುಖ್ಯಮಂತ್ರಿ: ಮೈಲಾರ ದೇವರ ಗೊರವಯ್ಯ ಭವಿಷ್ಯ

post-bars

Leave a Comment

Related post