ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯಶಸ್ವಿ: ವ್ಯಕ್ತಿಗೆ ಹಂದಿ ಯಕೃತ್ತ್ ಅಳವಡಿಕೆ
ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿತು ಮತ್ತು ಆ ವ್ಯಕ್ತಿಗೆ ಹಂದಿ ಯಕೃತ್ತನ್ನು ನೀಡಲಾಯಿತು. ಮನುಷ್ಯನಿಗೆ ಅಳವಡಿಸಲಾದ ಲಿವರ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ವಿಶ್ವದಲ್ಲಿಯೇ ಹಂದಿ ಯಕೃತ್ತನ್ನು ಮನುಷ್ಯನಿಗೆ ಕಸಿ ಮಾಡಿರುವುದು ಇದೇ ಮೊದಲು. ಚೀನಾದ ವೈದ್ಯರು ವೈದ್ಯಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ.

ನವದೆಹಲಿ: ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿತು ಮತ್ತು ಆ ವ್ಯಕ್ತಿಗೆ ಹಂದಿ ಯಕೃತ್ತನ್ನು ನೀಡಲಾಯಿತು. ಮನುಷ್ಯನಿಗೆ ಅಳವಡಿಸಲಾದ ಲಿವರ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ವಿಶ್ವದಲ್ಲಿಯೇ ಹಂದಿ ಯಕೃತ್ತನ್ನು ಮನುಷ್ಯನಿಗೆ ಕಸಿ ಮಾಡಿರುವುದು ಇದೇ ಮೊದಲು. ಚೀನಾದ ವೈದ್ಯರು ವೈದ್ಯಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ.
ಅಮೆರಿಕದಲ್ಲಿ ಈ ಹಿಂದೆ ಹಂದಿಗಳ ಹೃದಯ ಮತ್ತು ಮೂತ್ರಪಿಂಡಗಳನ್ನು ಮನುಷ್ಯರಿಗೆ ಕಸಿ ಮಾಡಲಾಗಿತ್ತು, ಆದರೆ ಇದೇ ಮೊದಲ ಬಾರಿಗೆ ಯಕೃತ್ತನ್ನು ಕಸಿ ಮಾಡಲಾಗಿದೆ.
ಈ ಸಾಧನೆಯನ್ನು ಚೀನಾದ ವೈದ್ಯರು ಸಾಧಿಸಿದ್ದಾರೆ. ಈ ಪ್ರಯೋಗವನ್ನು ಮೆದುಳು ನಿಷ್ಕ್ರಿಯಗೊಂಡ ರೋಗಿಯ ಮೇಲೆ ನಡೆಸಲಾಯಿತು.
ಯಕೃತ್ತನ್ನು ದಾನ ಮಾಡಿದ ಹಂದಿ ಸಾಮಾನ್ಯ ಹಂದಿಯಾಗಿರಲಿಲ್ಲ. ಅದಕ್ಕೆ ಮೊದಲೇ ಕೆಲವು ಆನುವಂಶಿಕ ಬದಲಾವಣೆಗಳನ್ನು ಮಾಡಲಾಗಿತ್ತು. ನಂತರ ಅದರಿಂದ ಲಿವರ್ ತೆಗೆದು ಮೆದುಳು ಮೃತ ವ್ಯಕ್ತಿಗೆ ಜೋಡಿಸಲಾಯಿತು. ಹತ್ತು ದಿನಗಳ ಮೇಲ್ವಿಚಾರಣೆಯ ನಂತರ, ಯಕೃತ್ತು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ಘೋಷಿಸಿದರು.
ಇದನ್ನು ಓದಿ: