Back To Top

 ಪತ್ನಿಯನ್ನು ತುಂಡರಿಸಿ ಸೂಟ್ ಕೇಸ್ ಗೆ ತುಂಬಿದ ಭೂಪ

ಪತ್ನಿಯನ್ನು ತುಂಡರಿಸಿ ಸೂಟ್ ಕೇಸ್ ಗೆ ತುಂಬಿದ ಭೂಪ

ಬೆಂಗಳೂರು: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು(Wife) ಕೊಂದು ಬಳಿಕ ಆಕೆ ದೇಹವನ್ನು ತುಂಡರಿಸಿ ಸೂಟ್ ಕೇಸ್ ಗೆ ತುಂಬಿರುವ ಘೋರ ಭಯಾನಕ ಘಟನೆ ಬೆಂಗಳೂರಿನ(Bengaluru) ಹುಳಿಮಾವು ಸಮೀಪದ ದೊಡ್ಡ ಕನ್ನಹಳ್ಳಿಯ ಮನೆಯೊಂದರಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಆರೋಪಿ ಪತಿ ರಾಕೇಶ್ ಎಂಬಾತ ಪತ್ನಿ ಗೌರಿ ಅನಿಲ್ ಸಾಂಬೆಕರ್(32) ಕೊಂದು ಬಳಿಕ ಮೃತದೇಹವನ್ನು ತುಂಡರಿಸಿ ಸೂಟ್ ಕೇಸ್ನಲ್ಲಿ ತುಂಬಿಟ್ಟಿದ್ದಾನೆ. ಬಳಿಕ ಈ ವಿಚಾರವನ್ನು ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾನೆ.
ಮಹಾರಾಷ್ಟ್ರ ಪೊಲೀಸರ ಮಾಹಿತಿ ಆಧರಿಸಿ ಬೆಂಗಳೂರಿನ ಹುಳಿಮಾವು ಪೊಲೀಸರು ಮನೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ರಾಕೇಶ್ ಕ್ರೌರ್ಯದ ಸುದ್ದಿ ಕೇಳಿ ಅಕ್ಕಪಕ್ಕದ ಜನ ಬೆಚ್ಚಿಬಿದ್ದಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿನ ದೊಡ್ಡಕಮ್ಮನಹಳ್ಳಿ ಮನೆಯಲ್ಲಿ ವಾಸವಿದ್ದರು.
ಮಹಾರಾಷ್ಟ್ರ ಮೂಲದ ರಾಕೇಶ್ ಹಾಗೂ ಗೌರಿ ಅನಿಲ್ ಸಾಂಬೆಕರ್ ದಂಪತಿ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ವರ್ಕ್ ಫ್ರಂ ಹೋಂ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆದ್ರೆ, ಏಕೆ ಕೊಲೆ ಮಾಡಿ ಈ ಕೃತ್ಯ ಎಸಗಿದ್ದಾನೆ ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿದಲ್ಲ. ಇದೀಗ ಹುಳಿಮಾವು ದೊಡ್ಡಕಮ್ಮನಹಳ್ಳಿಯ ಮನೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Prev Post

ಎಪ್ರಿಲ್ 1 ರಿಂದ ಹಾಲಿನ ದರ ಏರಿಕೆ

Next Post

ATM, UPI ಬಳಕೆದಾರರಿಗೆ ಏಪ್ರಿಲ್ 1 ರಿಂದ ಹೊಸ ನಿಯಮ

post-bars

Leave a Comment

Related post