Back To Top

 ಮಲತಂದೆಯ ಖಾಸಗಿ ಅಂಗ ಕತ್ತರಿಸಿದ ಯುವತಿ..!

ಮಲತಂದೆಯ ಖಾಸಗಿ ಅಂಗ ಕತ್ತರಿಸಿದ ಯುವತಿ..!

ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ ಮಲತಂದೆಗೆ ಕಣ್ಣು ಮುಚ್ಚುವಂತೆ ಯುವತಿ ಮನವೊಲಿಸಿದ್ದಾಳೆ. ಆತನ ಕಣ್ಣುಗಳಿಗೆ ಬಟ್ಟೆ ಕಟ್ಟಿದ ಆಕೆ ಚಾಕುವಿನಿಂದ ದಾಳಿ ಮಾಡಿ ಜನನಾಂಗವನ್ನೇ ಕತ್ತರಿಸಿದ್ದಾಳೆ.

ಮಹಾರಾಷ್ಟ್ರ: ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ ಮಲತಂದೆಗೆ ಕಣ್ಣು ಮುಚ್ಚುವಂತೆ ಯುವತಿ ಮನವೊಲಿಸಿದ್ದಾಳೆ. ಆತನ ಕಣ್ಣುಗಳಿಗೆ ಬಟ್ಟೆ ಕಟ್ಟಿದ ಆಕೆ ಚಾಕುವಿನಿಂದ ದಾಳಿ ಮಾಡಿ ಜನನಾಂಗವನ್ನೇ ಕತ್ತರಿಸಿದ್ದಾಳೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಬೇಸತ್ತ 24 ವರ್ಷದ ಯುವತಿಯೊಬ್ಬಳು 56 ವರ್ಷದ ಮಲತಂದೆಯ ಖಾಸಗಿ ಅಂಗವನ್ನೇ ಕತ್ತರಿಸಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ನಲಸೋಪಾರದಲ್ಲಿ ಈ ಘಟನೆ ನಡೆದಿದೆ. ಎರಡು ವರ್ಷಗಳಿಗೂ ಹೆಚ್ಚು ಕಾಲ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಬೇಸತ್ತಿದ್ದ ಯುವತಿಯು ಮಲತಂದೆಯ ಮೇಲೆ ಸೋಮವಾರ ಚಾಕುವಿನಿಂದ ದಾಳಿ ಮಾಡುವ ಮೂಲಕ ಆತನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾಳೆ. ತುಲಿಂಜ್ ಪೊಲೀಸರ ಪ್ರಕಾರ, ಮಲತಂದೆ ಯುವತಿಯ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದಾಗ ಈ ದಾಳಿ ನಡೆದಿದೆ.

ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ ಮಲತಂದೆಗೆ ಕಣ್ಣು ಮುಚ್ಚುವಂತೆ ಯುವತಿ ಮನವೊಲಿಸಿದ್ದಾಳೆ. ಆತನ ಕಣ್ಣುಗಳಿಗೆ ಬಟ್ಟೆ ಕಟ್ಟಿದ ಆಕೆ ಚಾಕುವಿನಿಂದ ದಾಳಿ ಮಾಡಿ ಜನನಾಂಗವನ್ನೇ ಕತ್ತರಿಸಿದ್ದಾಳೆ. ನೋವಿನಿಂದ ಕಿರುಚುತ್ತಾ ಆತ ರಕ್ತದ ಕಲೆಗಳಿಂದ ತುಂಬಿದ ಬಟ್ಟೆಯೊಂದಿಗೆ ಮನೆಯಿಂದ ಹೊರಗೆ ಓಡಿದ್ದಾನೆ.
ಯುವತಿ ಆತನನ್ನು ರಸ್ತೆಯಲ್ಲಿಯೂ ಹಿಂಬಾಲಿಸಿ ಮತ್ತೊಮ್ಮೆ ಚಾಕುವಿನಿಂದ ಇರಿದಿದ್ದಾಳೆ. ಆಘಾತಗೊಂಡ ಸುತ್ತಮುತ್ತಲಿನವರು ಯುವತಿ ಚಾಕು ಹಿಡಿದು ನಡೆಯುತ್ತಿರುವ ದೃಶ್ಯವನ್ನು ತಮ್ಮ ಮೊಬೈನಲ್ಲಿ ಸೆರೆ ಹಿಡಿದಿದ್ದಾರೆ, ಸ್ಥಳೀಯರು ಕೂಡಲೇ ಪೊಲೀಸ್ ತುರ್ತು ಸಂಖ್ಯೆಗೆ ಕರೆ ಮಾಡಿದ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ರಸ್ತುತ ತುಲಿಂಜ್ ಪೊಲೀಸರು ಯುವತಿಯನ್ನು ವಶಕ್ಕೆ ತೆಗೆದುಕೊಂಡು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಮಲತಂದೆಯ ವಿರುದ್ಧ ಅತ್ಯಾಚಾರ ಪ್ರಕರಣ ಮತ್ತು ಯುವತಿಯ ವಿರುದ್ದ ಕೊಲೆ ಯತ್ನದ ಅಡಿಯಲ್ಲಿ ಕೇಸು ದಾಖಲಿಸುವ ಪ್ರಕ್ರಿಯೆಯಲ್ಲಿದ್ದೇವೆ ಅಂತಾ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಮಲತಂದೆ ಮೇಲೆ ಯುವತಿ ಚಾಕುವಿನಿಂದ ಅಟ್ಯಾಕ್‌ ಮಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಇದನ್ನು ಓದಿ:

https://infomindz.in/toilet-nalli-navajatha-shisugala-dead-body-patte/
Prev Post

ಮಚ್ಚು ಹಿಡಿದು ರೀಲ್ಸ್ : ರಜತ್ ಮತ್ತು ವಿನಯ್ ಗೆ ಷರತ್ತು ಬದ್ಧ…

Next Post

ರೈಲ್ವೆ ಇಲಾಖೆಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ

post-bars

Leave a Comment

Related post