ಎಪ್ರಿಲ್ 1 ರಿಂದ ಹಾಲಿನ ದರ ಏರಿಕೆ
ರಾಜ್ಯದ ಜನರಿಗೆ ಕಳೆದ ಕೆಲವು ತಿಂಗಳಿಂದ ದರ ಏರಿಕೆ ಬಿಸಿ ತಟ್ಟುತ್ತಲೇ ಇದೆ. ಅತ್ತ ಮೆಟ್ರೋ ದರ, ಬಸ್ ದರ ಹೀಗೆ ದರ ಏರಿಕೆ ಘೋಷಣೆ ಮಾಡಿ ಗಾಯದ ಮೇಲೆ ಬರೆ ಎರೆಯುತ್ತಲೇ ಇದೆ. ಇದೀಗ ಕೊನೆಗೂ ಇಂದು ಹಾಲಿನ ದರ ಏರಿಕೆ ಮಾಡಲಾಗಿದೆ.
ಬೆಂಗಳೂರು: ರಾಜ್ಯದ ಜನರಿಗೆ ಕಳೆದ ಕೆಲವು ತಿಂಗಳಿಂದ ದರ ಏರಿಕೆ ಬಿಸಿ ತಟ್ಟುತ್ತಲೇ ಇದೆ. ಅತ್ತ ಮೆಟ್ರೋ ದರ, ಬಸ್ ದರ ಹೀಗೆ ದರ ಏರಿಕೆ ಘೋಷಣೆ ಮಾಡಿ ಗಾಯದ ಮೇಲೆ ಬರೆ ಎರೆಯುತ್ತಲೇ ಇದೆ. ಇದೀಗ ಕೊನೆಗೂ ಇಂದು ಹಾಲಿನ ದರ ಏರಿಕೆ ಮಾಡಲಾಗಿದೆ.

ಈ ಮಧ್ಯೆ ಮತ್ತೆ ರಾಜ್ಯ ಸರ್ಕಾರ ಮತ್ತೊಂದು ಕರೆಂಟ್ ಶಾಕ್ ನೀಡಿದೆ. ಕಳೆದ ಕೆಲವು ತಿಂಗಳಿಂದ ವಿದ್ಯುತ್ ದರ ಏರಿಕೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇತ್ತು. ಇದೀಗ ಕೊನೆಗೂ ಅಧಿಕೃತವಾಗಿ ದರ ಪರಿಷ್ಕರಣೆ ಘೋಷಣೆಯಾಗಿದೆ.
ಇದೀಗ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಗುರುವಾರ (ಮಾ.27) ಅಧಿಕೃತ ಆದೇಶ ಹೊರಡಿಸಿದ್ದು, ಇನ್ನು ಈ ಪರಿಷ್ಕೃತ ವಿದ್ಯುತ್ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.
ಹಾಲಿನ ದರ ಏರಿಕೆಯಿಂದ ಶಾಕ್ ಆಗಿದ್ದ ಜನರಿಗೆ ಇದೀಗ ಕರೆಂಟ್ ಶಾಕ್‌ನ ಭೀತಿ ಶುರುವಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ವಿದ್ಯುತ್ ದರ ಏರಿಕೆ ಮಾಡಿದೆ. ಕೆಇಆರ್‌ಸಿ ಹೊರಡಿಸಿರುವ ಆದೇಶದ ಪ್ರಕಾರ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಲಾಗುವುದು ಎನ್ನಲಾಗಿದೆ. ಈ ವಿದ್ಯುತ್ ದರ ಏರಿಕೆಯು ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.
ಇದನ್ನು ಓದಿ: