Back To Top

 ಯೂಟ್ಯೂಬ್‌ ವಿಡಿಯೋ ನೋಡಿ ಹೊಟ್ಟೆ ಸೀಳಿದ ಯುವಕ ಗಂಭೀರ
March 21, 2025

ಯೂಟ್ಯೂಬ್‌ ವಿಡಿಯೋ ನೋಡಿ ಹೊಟ್ಟೆ ಸೀಳಿದ ಯುವಕ ಗಂಭೀರ

ಹೊಟ್ಟೆ ನೋವಿನಿಂದ ಬಳಲುತ್ತಿದ್ದ 32 ವರ್ಷದ ಯುವಕನೊಬ್ಬ ಯೂಟ್ಯೂಬ್‌ ವಿಡಿಯೋ ನೋಡಿಕೊಂಡು ತನ್ನದೇ ಹೊಟ್ಟೆಯನ್ನು ಸೀಳಿ ಶಸ್ತ್ರಚಿಕಿತ್ಸೆ ಮಾಡಿಕೊಂಡು ನಂತರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವಂತ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ಲಕ್ನೋ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ 32 ವರ್ಷದ ಯುವಕನೊಬ್ಬ ಯೂಟ್ಯೂಬ್‌ ವಿಡಿಯೋ ನೋಡಿಕೊಂಡು ತನ್ನದೇ ಹೊಟ್ಟೆಯನ್ನು ಸೀಳಿ ಶಸ್ತ್ರಚಿಕಿತ್ಸೆ ಮಾಡಿಕೊಂಡು ನಂತರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವಂತ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌ ಪದವೀಧರನಾದ ರಾಜಾ ಬಾಬು ಕಳೆದ ಕೆಲವು ತಿಂಗಳುಗಳಿಂದ ನಿರಂತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ತಾನು ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದುಕೊಂಡರೂ ಯಾವುದೇ ಪ್ರಯೋಜನವಾಗದ ಕಾರಣ ಕೊನೆಗೆ ತಾನೇ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಮುಂದಾಗಿದ್ದ. ಇದಕ್ಕಾಗಿ ಯೂಟ್ಯೂಬ್‌ ವಿಡಿಯೋಗಳನ್ನು ನೋಡಿ, ಬ್ಲೇಡ್‌, ಅನಸ್ತೇಶಿಯಾ ಚುಚ್ಚುಮದ್ದು, ಸೂಜಿ, ಪ್ಲಾಸ್ಟಿಕ್‌ ದಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಕೂಡಾ ಖರೀದಿಸಿದ್ದ.
ಬುಧವಾರ ರಾಜಾ ತನ್ನ ಹೊಟ್ಟೆಯನ್ನು ಸೀಳಿ ನಂತರ 11 ಹೊಲಿಗೆಗಳನ್ನು ಹಾಕಿಕೊಂಡಿದ್ದಾನೆ. ಆದರೆ ಬಳಿಕ ಆತನಿಗೆ ಹೊಟ್ಟೆ ನೋವು ಉಲ್ಬಣವಾಗಿದೆ. ಆತನ ಸ್ಥಿತಿ ತೀವ್ರವಾದಾಗ ಸಂಬಂಧಿಕರು ಆತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆತನಿಗೆ ಪ್ರಥಮ ಚಿಕಿತ್ಸೆ ನೀಡಿ, ಆಗ್ರಾದ ಎಸ್‌ಎನ್‌ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವೈದ್ಯರೊಬ್ಬರು, ಯುವಕ 15 ವರ್ಷಗಳ ಹಿಂದೆ ಅಪೆಂಡಿಸೈಟಿಸ್‌ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಇತ್ತೀಚೆಗೆ ಆತನಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ತನ್ನ ಹೊಟ್ಟೆಯನ್ನು ತಾನೇ ಏಳು ಇಂಚು ಕತ್ತರಿಸಿಕೊಂಡು, ನಂತರ 11 ಹೊಲಿಗೆಗಳನ್ನು ಹಾಕಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ರಾಜಾ ತನ್ನ ಹೊಟ್ಟೆಯನ್ನು ಕತ್ತರಿಸಿದ ಬಳಿಕ ನಿಖರವಾಗಿ ಏನು ಮಾಡಿದ್ದಾನೆ ಎಂಬುದು ತಿಳಿದು ಬಂದಿಲ್ಲ. ಆದರೆ ತನ್ನ ಹೊಟ್ಟೆಯಿಂದ ಏನನ್ನೋ ಹೊರತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ ಅದು ವಿಫಲವಾಗಿದೆ. ಆದರೆ ಇದರಿಂದ ಸೋಂಕು ಹೆಚ್ಚಾಗುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನು ಓದಿ:

https://infomindz.in/love-matter-pakisthana-bittu-barathakke-seema-haidar/
Prev Post

ವಿದ್ಯುತ್ ದರ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ

Next Post

ಅಮ್ಮನಿಗೆ ಬೈದ ಮಾವನ ಕೊಂದ ಪುತ್ರ: ಅಳಿಯನ ಕೈಯಲ್ಲೇ ಸಾವು ಕಂಡ ಪಂಚನಹಳ್ಳಿ…

post-bars

Leave a Comment

Related post