Back To Top

 ಫೇಸ್ಬುಕ್ ಮೆಸೇಜ್‌ ನಂಬಿದ ಮಹಿಳೆ 7 ಲಕ್ಷ ಕಳೆದುಕೊಂಡರು
March 21, 2025

ಫೇಸ್ಬುಕ್ ಮೆಸೇಜ್‌ ನಂಬಿದ ಮಹಿಳೆ 7 ಲಕ್ಷ ಕಳೆದುಕೊಂಡರು

ಫೇಸ್‌ಬುಕ್‌ ಖಾತೆಯೊಂದರಿಂದ ಬಂದ ಮೆಸೇಜ್‌ ನಂಬಿ ಮಹಿಳೆಯೊಬ್ಬರು 7.10 ಲಕ್ಷ ರೂ. ಕಳೆದುಕೊಂಡು ಮೋಸ ಹೋಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಫೇಸ್‌ಬುಕ್‌ ಖಾತೆಯೊಂದರಿಂದ ಬಂದ ಮೆಸೇಜ್‌ ನಂಬಿ ಮಹಿಳೆಯೊಬ್ಬರು 7.10 ಲಕ್ಷ ರೂ. ಕಳೆದುಕೊಂಡು ಮೋಸ ಹೋಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರೆಗೆ ಡಾ.ತುಷಾರ್‌ ಪಾಟೀಲ್‌ ಎನ್ನುವ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ಹಾಯ್‌ ಎನ್ನುವ ಮೆಸೇಜ್‌ ಬಂದಿದ್ದು, ತಾನು ಯು ಹೆಲ್ತ್‌ ಮಿಯಾಮಿ ಫ್ಲೋರಿಡಾದಲ್ಲಿ ನ್ಯೂರೋರಜಿಸ್ಟ್‌ ಆಗಿದ್ದೇನೆ.

ಮದುವೆ ಅಗಿ ವಿಚ್ಛೇದನವಾಗಿದ್ದು, ಒಂದು ಮಗುವಿದೆ ಎಂದು ತಿಳಿಸಿದ್ದ. ಬಳಿಕ ವಾಟ್ಸಾಪ್‌ ಸಂಖ್ಯೆ ಪಡೆದು ಅದಕ್ಕೆ ಮೆಸೇಜ್‌ ಮಾಡಿ, ನಿಮ್ಮ ಸ್ನೇಹಕ್ಕಾಗಿ ಗಿಫ್ಟ್‌ ಆಗಿ ಪ್ಲಾಟಿನಂ ವಾಚ್‌, ಡೈಮಂಡ್‌, ಲ್ಯಾಪ್‌ಟಾಪ್‌, ಐಫೋನ್‌, 90 ಸಾವಿರ ಯುಎಸ್‌ ಡಾಲರ್‌ ಹಾಗೂ ಬಂಗಾರ ಕಳುಹಿಸಿಕೊಡುತ್ತೇನೆ. ವಿಮಾನ ನಿಲ್ದಾಣದಿಂದ ಕರೆ ಬರಲಿದೆ ಎಂದು ತಿಳಿಸಿದ್ದಾನೆ.
ಅದರಂತೆ ಮರುದಿನ ಕರೆ ಬಂದಿದ್ದು, ಕರೆ ಮಾಡಿದವರು ಡಾ| ತುಷಾರ್‌ ಪಾಟೀಲ್‌ ಅವರಿಂದ ಗಿಫ್ಟ್‌ ಬಂದಿದೆ. ಸೆಕ್ಯೂರಿಟಿ ಡಿಪಾಸಿಟ್‌ ಹಾಗೂ ಲಾಂಡರಿಂಗ್‌ ಕ್ಲಿಯರೆನ್ಸ್‌ಗಾಗಿ ಹಣ ಕಳುಹಿಸುವಂತೆ ತಿಳಿಸಿದ್ದಾರೆ. ಇದನ್ನು ನಂಬಿ ವಿವಿಧ ಖಾತೆಗಳಿಗೆ 7.10 ಲಕ್ಷ ರೂ. ವರ್ಗಾಯಿಸಿದ್ದಾರೆ.
ಆದರೆ ಗಿಫ್ಟ್‌ ನೀಡದೆ ವಂಚನೆ ಮಾಡಿದ್ದಾರೆ ಎಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:

https://infomindz.in/love-matter-pakisthana-bittu-barathakke-seema-haidar/
Prev Post

ಸಾಹಸಿ ಬಾಹ್ಯಾಕಾಶ ವಿಜ್ಞಾನಿ ಸುನೀತಾ ವಿಲಿಯಮ್ಸ್

Next Post

ಹೊನ್ನವಳ್ಳಿ ಯಲ್ಲಿ ಹಾಡು ಹಗಲೇ ಮನೆ ಕಳ್ಳತನ ಬೆಚ್ಚಿಬಿದ್ದ ಗ್ರಾಮಸ್ಥರು

post-bars

Leave a Comment

Related post