Back To Top

 ಲವ್ ಮ್ಯಾಟರ್: ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ಗೆ ಹೆಣ್ಣುಮಗು ಜನನ

ಲವ್ ಮ್ಯಾಟರ್: ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ಗೆ ಹೆಣ್ಣುಮಗು ಜನನ

ಆನ್ಲೈನ್ ಗೇಮಿಂಗ್ ಆ್ಯಪ್ ಮೂಲಕ ಪರಿಚಯವಾದ ಪ್ರಿಯಕರನಿಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ನೋಯ್ಡಾ: ಆನ್ಲೈನ್ ಗೇಮಿಂಗ್ ಆ್ಯಪ್ ಮೂಲಕ ಪರಿಚಯವಾದ ಪ್ರಿಯಕರನಿಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿರುವ ಕೃಷ್ಣ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮಕೊಟ್ಟಿದ್ದಾಳೆ. ಸೀಮಾ ಹೈದರ್ ಆನ್ಲೈನ್ ಗೇಮಿಂಗ್ ಮೂಲಕ ಸಚಿನ್ ಎಂಬುವವರನ್ನು ಭೇಟಿಯಾಗಿದ್ದರು, ಬಳಿಕ ಅವರ ಸ್ನೇಹ ಪ್ರೀತಿಗೆ ಚಿಗುರಿತ್ತು.

ಹಹಹಹಹಹಹಹ

ಸೀಮಾಗೆ ಆಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು. ಪ್ರೀತಿಸಿದವನಿಗಾಗಿ ಸೀಮಾ ಗಂಡನನ್ನು ಬಿಟ್ಟು ಮಕ್ಕಳನ್ನು ಕರೆದುಕೊಂಡು ಭಾರತಕ್ಕೆ ಬಂದಿದು ಸಚಿನ್ ಮೀನಾರನ್ನು ಮದುವೆಯಾಗಿದ್ದಳು. ಕಳೆದ ವರ್ಷ ತಾನು ಗರ್ಭಿಣಿಯಾಗಿರುವ ಬಗ್ಗೆ ಸೀಮಾ ವಿಡಿಯೋ ಮೂಲಕ ಹೇಳಿಕೊಂಡಿದ್ದರು. ಇದು ಅವರಿಬ್ಬರ ಹೊಸ ಅಧ್ಯಾಯವೆಂದೇ ಹೇಳಬಹುದು. ಪ್ರಸ್ತುತ ಗ್ರೇಟರ್ ನೋಯ್ಡಾದ ರಬುಪುರದಲ್ಲಿ ವಾಸಿಸುತ್ತಿರುವ ಈ ದಂಪತಿ ಸಂತೋಷದ ಜೀವನ ನಡೆಸುತ್ತಿದ್ದಾರೆ.
ಒಂದು ಸಿನಿಮಾ ರೀತಿಯ ಪ್ರೇಮಕಥೆ ಇಬ್ಬರೂ ಆನ್ಲೈನ್ ಗೇಮ್ ಪಬ್ಜಿ ಆಡುವಾಗ ಪರಿಚಯವಾದರು. ಇಬ್ಬರು ಪರಸ್ಪರ ಪ್ರೀತಿಸಲು ಆರಮಭಿಸಿದರು. ಎಲ್ಲಾ ಅಡೆತಡೆಗಳನ್ನು ಧಿಕ್ಕರಿಸಿ, ಸೀಮಾ ಸಚಿನ್ ಜತೆ ಇರಲು ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ದಾಟಿ ನಾಲ್ಕು ಮಕ್ಕಳನ್ನು ಕರೆದುಕೊಂಡು ಬಂದಿದ್ದಳು.
ಆದರೆ ಅದು ಸುಲಭವಾಗಿರಲಿಲ್ಲ. 2023ರ ಜುಲೈನಲ್ಲಿ ಕಾನೂನು ಹೋರಾಟಗಳು ಮತ್ತು ಬಂಧನವನ್ನು ಎದುರಿಸಬೇಕಾಯಿತು. ಕೊನೆಗೂ ಪ್ರೀತಿ ಗೆದ್ದಿತ್ತು.

ಇದನ್ನು ಓದಿ:

https://infomindz.in/reels-nepadalli-ibbaru-yuvakara-hucchata/
Prev Post

ಅನೈತಿಕ ಸಂಬಂಧದ ಶಂಕೆ: ಪತ್ನಿಯನ್ನು ಹೊಡೆದುಕೊಂದ ಪತಿ

Next Post

ಕಿಪ್ಪಿ ಕೀರ್ತಿಯ ತ್ರೀಕೋನ ಲವ್ ಸ್ಟೋರಿ: ಹಾರ್ಟ್ ಬ್ರೇಕ್ ಗೆ ಕಿಪ್ಪಿ ಕಣ್ಣೀರು

post-bars

Leave a Comment

Related post