ರೀಲ್ಸ್ ನೆಪದಲ್ಲಿ ಇಬ್ಬರು ಯುವಕರ ಹುಚ್ಚಾಟ: ಬೆಚ್ಚಿದ ಖಾಕಿ ಪಡೆ
ಕಲಬುರಗಿ: ರೀಲ್ಸ್ ನೆಪದಲ್ಲಿ ಇಬ್ಬರು ಯುವಕರ ಹುಚ್ಚಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಕಲಬುರಗಿ ನಗರದ ಹುಮನಾಬಾದ್ ರಿಂಗ್ ರೋಡ್ ನಲ್ಲಿ ಯುವಕನನ್ನ ಕೊಲೆ ಮಾಡುತ್ತಿರುವ ರೀಲ್ಸ್ ವಿಡಿಯೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಸೋಮವಾರ ತಡರಾತ್ರಿ ಇಬ್ಬರು ಯುವಕರು ರೀಲ್ಸ್ ಮಾಡೋ ಭರದಲ್ಲಿ ಹುಚ್ಚಾಟ ಪ್ರದರ್ಶಿಸಿದ್ದಾರೆ. ಯುವಕನ ಮೇಲೆ ಮತ್ತೋರ್ವ ಯುವಕ ಕುಳಿತು ಸುತ್ತಿಗೆಯಿಂದ ಹೊಡೆಯುತ್ತಿರುವ ದೃಶ್ಯ ಸಾರ್ವಜನಿಕ ವಲಯದಲ್ಲಿ ಭಯ ಹುಟ್ಟಿಸುವ ರೀತಿ ಚಿತ್ರೀಕರಿಸಲಾಗಿದ್ದು, ರಾತೋರಾತ್ರಿ ಈ ರಿಲ್ಸ್ ವಿಡಿಯೋ ವೈರಲ್ ಆಗಿ ಕಲಬುರಗಿ ಜನ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ತಕ್ಷಣ ಸತ್ಯಾಸತ್ಯತೆ ತಿಳಿಯಲು ಮುಂದಾದ ಕಲಬುರಗಿ ಸಬ್ ಅರ್ಬನ್ ಠಾಣೆ ಪೊಲೀಸರು, ಇದು ಕೊಲೆಯಲ್ಲ.ಯುವಕರು ರಿಲ್ಸ್ ಮಾಡಿರುವದಾಗಿ ಪತ್ತೆ ಹಚ್ಚಿದ್ದಾರೆ. ಇನ್ನು ಇಬ್ಬರ ಯುವಕರ ಹುಡುಕಾಟಕ್ಕೆ ಸಬ್ ಅರ್ಬನ್ ಠಾಣೆ ಪೊಲೀಸರು ಮುಂದಾಗಿದ್ದಾರೆ.
ಇದನ್ನು ಓದಿ: