Back To Top

 ಲಾಲು ಪುತ್ರನಿಂದ ಪೊಲೀಸ್ ಅಧಿಕಾರಿಗೆ ಆವಾಜ್:ಡಾನ್ಸ್ ಮಾಡುವಂತೆ ಒತ್ತಾಯ, ಅಮಾನತು ಬೆದರಿಕೆ

ಲಾಲು ಪುತ್ರನಿಂದ ಪೊಲೀಸ್ ಅಧಿಕಾರಿಗೆ ಆವಾಜ್:ಡಾನ್ಸ್ ಮಾಡುವಂತೆ ಒತ್ತಾಯ, ಅಮಾನತು ಬೆದರಿಕೆ

ಪಾಟ್ನಾದಲ್ಲಿ ನಡೆದ ಹೋಳಿ ಸಂಭ್ರಮದ ವೇಳೆ ಲಾಲು ಪ್ರಸಾದ್ (Lalu Prasad) ಪುತ್ರ, ಆರ್ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ಪಾಟ್ನಾ: ಎಲ್ಲೆಡೆ ಹೋಳಿ ಸಂಭ್ರಮ. ಜನರು ಬಣ್ಣಗಳಲ್ಲಿ ಮಿಂದೇಳುತ್ತಿದ್ದಾರೆ. ಉತ್ತರಭಾರತದಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ. ಹೋಳಿ ಸಂಭ್ರಮದ ವೇಳೆ ಆರ್ಜೆಡಿ ಶಾಸಕ, ಲಾಲು ಪ್ರಸಾದ್ (Lalu Prasad) ಪುತ್ರ ತೇಜ್ ಪ್ರತಾಪ್ ಯಾದವ್ ಪೊಲೀಸ್ ಅಧಿಕಾರಿಗೆ ಅವಾಜ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಪಾಟ್ನಾದಲ್ಲಿ ನಡೆದ ಹೋಳಿ ಸಂಭ್ರಮದ ವೇಳೆ ಲಾಲು ಪ್ರಸಾದ್ (Lalu Prasad) ಪುತ್ರ, ಆರ್ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಈ ವೇಳೆ ತೇಜ್ ಪ್ರತಾಪ್ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಡ್ಯಾನ್ಸ್ ಮಾಡುವಂತೆ ಹೇಳಿದ್ದಾರೆ. ಡ್ಯಾನ್ಸ್ ಮಾಡಲು ಅಧಿಕಾರಿ ಹಿಂದೇಟು ಹಾಕಿದ್ದು, ಅಮಾನತು ಮಾಡಿಸುವುದಾಗಿ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ವೇದಿಕೆ ಮೇಲೆ ಸಹಚರನೊಂದಿಗೆ ಕುಳಿತುಕೊಂಡಿರುವ ಶಾಸಕ ತೇಜ್ ಪ್ರತಾಪ್ ಯಾದವ್ ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ, ನಾನು ಈಗ ಒಂದು ಹಾಡನ್ನು ಹಾಕಿಸುತ್ತೇನೆ. ನೀವು ಅದಕ್ಕೆ ಡ್ಯಾನ್ಸ್ ಮಾಡಬೇಕು. ಇಲ್ಲವಾದರೆ ನಿಮ್ಮನ್ನು ಸಸ್ಪೆಂಡ್ ಮಾಡಿಸುತ್ತೇನೆ ಎಂದು ಹೇಳುತ್ತಾರೆ. ಇದಾದ ಬಳಿಕ ಹಾಡನ್ನು ಪ್ಲೇ ಮಾಡಲಾಗಿದ್ದು, ಪೊಲೀಸ್ ಅಧಿಕಾರಿ ಡ್ಯಾನ್ಸ್ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿಡಿಕಾರಿರುವ ಎನ್ಡಿಎ ನಾಯಕರು ಇದು ಲಾಲು-ರಾಬ್ರಿ (Lalu-Rabri) ಆಡಳಿತವನ್ನು ನೆನಪಿಸುತ್ತದೆ ಎಂದು ಕಿಡಿಕಾರಿದ್ದಾರೆ. ಬಿಹಾರದಲ್ಲಿರುವುದು ನಿತೀಶ್ ಕುಮಾರ್ ಸರ್ಕಾರ. ಯಾವುದೋ ಜಂಗಲ್ ರಾಜ್ ಸರ್ಕಾರವಲ್ಲ. ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ಈ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ಎನ್ಡಿಎ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ:

https://infomindz.in/instagram-love-anaithika-sambanda-koleyalli-anthye/
Prev Post

“ಯಕ್ಷ ಕಲಾ ವರದೆ”

Next Post

BMTC ಬಸ್ ನಲ್ಲಿ ಕೈ ಚಳಕ ತೋರುತಿದ್ದ ಕಿಲಾಡಿ ಕಳ್ಳಿಯರನ್ನು ಹಿಡಿದ ಚಾಲಕಿ…

post-bars

Leave a Comment

Related post