Back To Top

 BMTC ಬಸ್ ನಲ್ಲಿ ಕೈ ಚಳಕ ತೋರುತಿದ್ದ ಕಿಲಾಡಿ ಕಳ್ಳಿಯರನ್ನು ಹಿಡಿದ ಚಾಲಕಿ ಕಂಡಕ್ಟರ್
March 16, 2025

BMTC ಬಸ್ ನಲ್ಲಿ ಕೈ ಚಳಕ ತೋರುತಿದ್ದ ಕಿಲಾಡಿ ಕಳ್ಳಿಯರನ್ನು ಹಿಡಿದ ಚಾಲಕಿ ಕಂಡಕ್ಟರ್

(BMTC) ಬಸ್ ಮಹಿಳಾ ಕಂಡಕ್ಟರ್ ಚಾಣಕ್ಷತನದಿಂದ ಕಿಲಾಡಿ ಕಳ್ಳಿಯರ ಗ್ಯಾಂಗ್ ಸಿಕ್ಕಿಬಿದ್ದಿದೆ. ಸೋಮವಾರ (ಮಾ. 10) ರಾತ್ರಿ 7.15 ಕ್ಕೆ ಮೆಜೆಸ್ಟಿಕ್ನಿಂದ ದೇವನಹಳ್ಳಿ ಬಳಿಯ ವಿಜಿಪುರಕ್ಕೆ ಹೋಗುತ್ತಿದ್ದ ಡಿಪೋ- 50ಕ್ಕೆ ಸೇರಿದ ಬಿಎಂಟಿಸಿ ಬಸ್ ಅನ್ನು ಆಂಧ್ರಪ್ರದೇಶದಿಂದ ಬಂದ ನಾಲ್ವರು ಮಹಿಳೆಯರು ಹತ್ತಿದ್ದಾರೆ.

ಬೆಂಗಳೂರು: (BMTC) ಬಸ್ ಮಹಿಳಾ ಕಂಡಕ್ಟರ್ ಚಾಣಕ್ಷತನದಿಂದ ಕಿಲಾಡಿ ಕಳ್ಳಿಯರ ಗ್ಯಾಂಗ್ ಸಿಕ್ಕಿಬಿದ್ದಿದೆ. ಸೋಮವಾರ (ಮಾ. 10) ರಾತ್ರಿ 7.15 ಕ್ಕೆ ಮೆಜೆಸ್ಟಿಕ್ನಿಂದ ದೇವನಹಳ್ಳಿ ಬಳಿಯ ವಿಜಿಪುರಕ್ಕೆ ಹೋಗುತ್ತಿದ್ದ ಡಿಪೋ- 50ಕ್ಕೆ ಸೇರಿದ ಬಿಎಂಟಿಸಿ ಬಸ್ ಅನ್ನು ಆಂಧ್ರಪ್ರದೇಶದಿಂದ ಬಂದ ನಾಲ್ವರು ಮಹಿಳೆಯರು ಹತ್ತಿದ್ದಾರೆ.
ಬಸ್ (BUS) ಪ್ರಯಾಣದ ವೇಳೆ ಪಕ್ಕದಲ್ಲಿದ್ದ ಮಹಿಳೆ ಬ್ಯಾಗ್ನಿಂದ ಓರ್ವ ಕಳ್ಳಿ ಮೊಬೈಲ್ ಕಳ್ಳತನ ಮಾಡುತ್ತಿದ್ದಳು. ಇದನ್ನು ನೋಡಿದ ಮಹಿಳಾ ಕಂಡಕ್ಟರ್ ಚಾಲಕ ಮುನಿರತ್ನ ಅವರಿಗೆ ವಿಚಾರ ತಿಳಿಸಿದ್ದಾರೆ.

ಬಸ್ ಡೋರ್ ಲಾಕ್ ಮಾಡಿ ಪೋಲಿಸರು ಬರುವರೆಗೂ ಬಸ್ ನಿಲ್ಲಿಸಿ ಎಂದು ಹೇಳಿದ್ದಾರೆ.
ಮಹಿಳಾ ಕಂಡಕ್ಟರ್ ಮಾತಿನಂತೆ ಚಾಲಕ ಡೋರ್ ಲಾಕ್ ಮಾಡಿ, ಪೊಲೀಸರು ಬರುವವರೆಗೂ ಬಸ್ ನಿಲ್ಲಿಸಿದ್ದಾರೆ. ಚಾಲಕ ಡೋರ್ ಲಾಕ್ ಮಾಡ್ತಿದ್ದಂತೆ ಕಳ್ಳಿಯರು ಮಗು ಅಳುತ್ತಿದೆ. ನಾವು ಹೋಗಬೇಕೆಂದು ನಾಟಕವಾಡಿ ಪರಾರಿಯಾಗಲು ಯತ್ನಿಸಿದ್ದಾರೆ.
ಆದರೆ ಚಾಲಕ ಮಂಜುನಾಥ್ ಡೋರ್ ತೆರೆಯಲಿಲ್ಲ. ಬಳಿಕ ಕದ್ದ ಮೊಬೈಲ್ ಮತ್ತು ಮಾಂಗಲ್ಯ ಸರವನ್ನು ಕಳ್ಳಿಯರು ಸೀಟ್ ಕೆಳಗೆ ಬಿಸಾಡಿದ್ದಾರೆ. ಪೋಲಿಸರು ಬಂದ ಮೇಲೆ ಮಹಿಳೆಯರ ಬ್ಯಾಗ್ ಚೆಕ್ ಮಾಡಿದಾಗ ಬ್ಯಾಗ್ ತುಂಬಾ ಬಂಗಾರ ಮತ್ತು ಸಾಕಷ್ಟು ಮೊಬೈಲ್ ಪೋನ್ ಪತ್ತೆಯಾಗಿವೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನು ಓದಿ:

https://infomindz.in/hindu-yuvathina-konda-muslim-yuvka/
Prev Post

ಲಾಲು ಪುತ್ರನಿಂದ ಪೊಲೀಸ್ ಅಧಿಕಾರಿಗೆ ಆವಾಜ್:ಡಾನ್ಸ್ ಮಾಡುವಂತೆ ಒತ್ತಾಯ, ಅಮಾನತು ಬೆದರಿಕೆ

Next Post

ನಿರೀಕ್ಷಿತ ಅಂಕ ಪಡೆಯದ ಮಕ್ಕಳನ್ನು ನೀರಿನ ಬಕೆಟ್ನಲ್ಲಿ ಮುಳುಗಿಸಿ ಕೊಂದ ಅಪ್ಪ ನೇಣಿಗೆ…

post-bars

Leave a Comment

Related post