Back To Top

 ಮುಸ್ಲಿಂ ಯುವಕನೊಂದಿಗೆ ಪ್ರೇಮ: ಹಿಂದೂ ಯುವತಿ ಕೊಲೆ

ಮುಸ್ಲಿಂ ಯುವಕನೊಂದಿಗೆ ಪ್ರೇಮ: ಹಿಂದೂ ಯುವತಿ ಕೊಲೆ

ಕೊಲೆಯಾದ ಯುವತಿಯನ್ನು ಸ್ವಾತಿ ರಮೇಶ್ ಬ್ಯಾಡಗಿ (22) ಎಂದು ತಿಳಿದುಬಂದಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಯಾಜ್ ನನ್ನು ಆರೆಸ್ಟ್ ಮಾಡಲಾಗಿದೆ.

ಹಾವೇರಿ: ಕಳೆದ ವರ್ಷ ಹುಬ್ಬಳ್ಳಿಯಲ್ಲಿ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠಗಳನ್ನು ಮುಸ್ಲಿಂ ಹಂತಕ ಫಯಾಜ್ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣ ಇಡೀ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಹಾವೇರಿಯಲ್ಲಿ ಅಂತದ್ದೇ ಘಟನೆ ಮರುಕಳಿಸಿದ್ದು, ಮುಸ್ಲಿಂ ಯುವಕನೊಬ್ಬ ಹಿಂದು ಯುವತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಲೆಯಾದ ಯುವತಿಯನ್ನು ಸ್ವಾತಿ ರಮೇಶ್ ಬ್ಯಾಡಗಿ (22) ಎಂದು ತಿಳಿದುಬಂದಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಯಾಜ್ ನನ್ನು ಆರೆಸ್ಟ್ ಮಾಡಲಾಗಿದೆ.

ಹತ್ಯೆ ಪ್ರಕರಣದಲ್ಲಿ ನಯಾಜ್ ಇರುವ ಅನುಮಾನ ವ್ಯಕ್ತವಾಗಿದೆ. ಮೃತ ಸ್ವಾತಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ನಿವಾಸಿಯಾಗಿದ್ದು, ಆರೋಪಿ ನಯಾಜ್ ನನ್ನು ಹಲಗೇರಿ ಠಾಣೆ ಪೋಲಿಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಾರ್ಚ್ 3ರಂದು ಸ್ವಾತಿ ರಮೇಶ್ ಬ್ಯಾಡಗಿ ಕಾಣೆಯಾಗಿದ್ದಳು. ಸ್ವಾತಿ ಪೋಷಕರು ಮಿಸ್ಸಿಂಗ್ ದೂರು ದಾಖಲಿಸಿದ್ದರು.
ಮಾರ್ಚ್ 6 ರಂದು ಸ್ವಾತಿಯ ಮೃತದೇಹ ಪತ್ತೆಯಾಗಿತ್ತು. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಪತ್ತೇಪೂರ ಗ್ರಾಮದ ತುಂಗಭದ್ರಾ ನದಿ ಬಳಿ ಶವ ಪತ್ತೆಯಾಗಿತ್ತು. ಬಳಿಕ ಪೋಸ್ಟ್ಮಾರ್ಟಂ ರಿಪೋರ್ಟ್ ನಲ್ಲಿ ಇದು ಆಕಸ್ಮಿಕ ಸಾವಲ್ಲ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.
ಇದೀಗ ಕುಟುಂಬಸ್ಥರು ಲವ್ ಜಿಹಾದ ನಿಂದ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಮೃತ ಸ್ವಾತಿ ಪೋಷಕರು ಆರೋಪಿಸುತ್ತಿದ್ದಾರೆ. ಪೋಷಕರ ಆರೋಪದ ಪ್ರಕಾರ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಮುಸ್ಲಿಂ ಯುವಕನೊಂದಿಗೆ ಪ್ರೀತಿ ಪ್ರೇಮದಲ್ಲಿ ಬಿದಿದ್ದಳು.ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿ ನಯಾಜ್ ಎನ್ನುವವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಗಾಗಿ ಪೋಷಕರು ಇದು ಲವ್ ಜಿಹಾದ್ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಫತ್ತೆಪುರ ಗ್ರಾಮದ ತುಂಗಭದ್ರಾ ನದಿ ಬಳಿ ಸ್ವಾತಿಯ ಶವ ಪತ್ತೆಯಾಗಿತ್ತು. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಪತ್ತೇಪೂರ ಗ್ರಾಮದಲ್ಲಿ ಶವ ಪತ್ತೆಯಾಗಿತ್ತು.

ಇದನ್ನು ಓದಿ:

https://infomindz.in/nadi-thiradali-shampoosoap-marata-niseda-punya-ksethra-swachathe-kapadalu-aranya-sachivara-suhane/
Prev Post

ಚಿನ್ನದ ರಾಣಿ ರನ್ಯಾರಾವ್ ಜಾಮೀನು ಅರ್ಜಿ ತಿರಸ್ಕಾರ

Next Post

ಮರ್ಯಾದಾ ಹತ್ಯೆ: ಅಣ್ಣ ಮತ್ತು ತಂದೆಯಿಂದ ಕೊಲೆಯಾದ ಮನೆ ಮಗಳು

post-bars

Leave a Comment

Related post