ರೀಲ್ಸ್ ಚಾಲೆಂಜ್ ಸ್ವೀಕರಿಸಿ ಡಿಯೋಡ್ರೆಂಟ್ ಮೂಸಿದ ಬಾಲಕಿ ಸಾವು
ಬ್ರೆಜಿಲ್: ಅಪಾಯಕಾರಿ ಚಾಲೆಂಜ್ ಸ್ವೀಕರಿಸಿ ಡಿಯೋಡ್ರೆಂಟ್ ಮೂಸಿದ ಬಾಲಕಿಯೊಬ್ಬಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ. ಕ್ರೋಮಿಂಗ್ ಎಂಬ ಹೆಸರಿನ ಅಪಾಯಕಾರಿ ಇಂಟರ್ನೆಟ್ ಸವಾಲಿನಲ್ಲಿ ಭಾಗವಹಿಸಿದ ನಂತರ ಬಾಲಕಿ ಜೀವ ಕಳೆದುಕೊಂಡಿದ್ದಾಳೆ ಎಂದು ವರದಿಯಾಗಿದೆ.

ಈಕೆ ರೀಲ್ಸ್ ಮಾಡುತ್ತಿದ್ದು ಕೇವಲ 11 ವರ್ಷ ವಯಸ್ಸಾಗಿತ್ತು. ಬ್ರೆಜಿಲ್ನ ಪೆರ್ನಾಂಬುಕೊದ ಬೊಮ್ ಜಾರ್ಡಿಮ್ ನಿವಾಸಿ ಬ್ರೆಂಡಾ ಸೋಫಿಯಾ ಮೆಲೊ ಡಿ ಸಂತಾನ ಸಾವನ್ನಪ್ಪಿದ ಬಾಲಕಿ ಮಾರ್ಚ್ 9 ರಂದು ಈಕೆ ಸಾವನ್ನಪ್ಪಿದ್ದಾಳೆ. ಈಕೆಯ ಕೃತ್ಯವನ್ನು ವೈರಲ್ ಸೋಶಿಯಲ್ ಮೀಡಿಯಾ ಟ್ರೆಂಡ್ ಎಂದು ಹೇಳಲಾಗಿದೆ.
ಬಾಲಕಿ ಬ್ರೆಂಡಾ ಟಿಕ್ ಟಾಕ್ನಲ್ಲಿ ನಡೆಯುತ್ತಿರುವ ಈ ಚಾಲೆಂಜ್ನಲ್ಲಿ ನಿರಂತರವಾಗಿ ಭಾಗವಹಿಸಿದ ನಂತರ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ.
ಈ ಚಾಲೆಂಜ್ನ ಭಾಗವಾಗಿ ಬಾಲಕಿ ನಿರಂತರವಾಗಿ ಈ ಡಿಯೋಡ್ರೆಂಟ್ನ ವಾಸನೆಯನ್ನು ಮೂಸಿದ್ದಾಳೆ. ಇದರ ಪರಿಣಾಮ ಆಕೆಗೆ ಆರೋಗ್ಯ ಸಮಸ್ಯೆ ಉಂಟಾಗಿ ನಂತರ ಹೃದಯಾಘಾತವಾಗಿದೆ. ಕೂಡಲೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು 40 ನಿಮಿಷಗಳ ಕಾಲ ಆಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರೂ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ.
ಏರೋಸಾಲ್ ಡಿಯೋಡರೆಂಟ್ ಅನ್ನು ಮೌಖಿಕವಾಗಿ ಉಸಿರಾಡಿದ್ದರಿಂದ ಆಕೆಯ ಸಾವು ಸಂಭವಿಸಿದೆ ಎಂದು ಅಲ್ಲಿನ ಅಧಿಕಾರಿಗಳು ವರದಿ ಮಾಡಿದ್ದಾರೆ. ಈ ಘಟನೆಯಿಂದಾಗಿ ಯುವ ಸಮೂಹ ಇಂಟರ್ನೆಟ್ನಲ್ಲಿ ಬರುವ ಅಪಾಯಕಾರಿ ಚಾಲೆಂಜ್ಗಳನ್ನು ಸ್ವೀಕರಿಸಿ ಜೀವಕ್ಕೆ ಅಪಾಯ ತಂದುಕೊಳ್ಳುವಂತಹ ಸವಾಲುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಮನವಿ ಮಾಡಲಾಗಿದೆ.
ಇದನ್ನು ಓದಿ: