ಯೂಟ್ಯೂಬ್ ನೋಡಿ ಡಯಟ್ ಮಾಡಿದ ಹುಡುಗಿ ಸಾವು
18ರ ಯುವತಿಯೋರ್ವಳು ಯೂಟ್ಯೂಬ್ #Youtube ನೋಡಿಕೊಂಡು ತೂಕ ಇಳಿಸುವ ಡಯಟ್ ಪ್ಲಾನ್ ರೂಪಿಸಿದ್ದು ಇದರಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಕಣ್ಣೂರು: ವಯಸ್ಸಿನ ಯುವಕ ಯುವತಿಯರಿಗೆ ಸೌಂದರ್ಯ ಹೆಚ್ಚಿಸುವ ವಿಚಿತ್ರ ಹುಚ್ಚಿಗೆ ಜಿಮ್, ಯೋಗ, ಚಟುವಟಿಕೆ ಎಂದು ಹಲವಾರು ಕಸರತ್ತು ಮಾಡುವುದು ಸರ್ವೇ ಸಾಮಾನ್ಯ. ಇದರಿಂದ ದೇಹದ ಆರೋಗ್ಯ ಹೆಚ್ಚುವ ಬದಲು ಹೃದಯಾಘಾತದಿಂದ ಜೀವ ಬಿಟ್ಟಿದೆ ಹೆಚ್ಚು. ಅಂತಹದ್ದೇ ಘಟನೆ #kerala #kannur ಕೇರಳದ ಕಣ್ಣೂರಿನಲ್ಲಿ ನಡೆದಿದೆ.
18ರ ಯುವತಿಯೋರ್ವಳು ಯೂಟ್ಯೂಬ್ #Youtube ನೋಡಿಕೊಂಡು ತೂಕ ಇಳಿಸುವ ಡಯಟ್ Diet ಪ್ಲಾನ್ ರೂಪಿಸಿದ್ದು ಇದರಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಕೂತುಪರಂ ಮೇರುವಂಬೈ ಮೂಲದ ಶ್ರೀನಂದ ಅವರು ಅನೋರೆಕ್ಸಿಯಾ ನರ್ವೋಸಾದಿಂದ ಮೃತಪಟ್ಟಿದ್ದಾರೆ. ಈಕೆ ಮಟ್ಟನ್ನೂರಿನ ಪಳಸ್ಸಿ ರಾಜಾ ಎನ್ಎಸ್ಎಸ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದರು.

ತೂಕ ಕಡಿಮೆ ಮಾಡಲು ಯೂಟ್ಯೂಬ್ ನೋಡುತ್ತಾ ಡಯಟ್ ಮಾಡುತ್ತಿದ್ದ ಶ್ರೀನಂದ, ಆಹಾರವನ್ನು ಸರಿಯಾಗಿ ಸೇವಿಸುತ್ತಿರಲಿಲ್ಲ. ಇದರಿಂದ ದಿನಕಳೆದಂತೆ ಆಕೆಯ ಆರೋಗ್ಯವು ಕ್ಷೀಣವಾಯಿತು.
ಇತ್ತೀಚೆಗೆ ಆರೋಗ್ಯ ಹದಗೆಟ್ಟ ಹಿನ್ನೆಲೆ ಶ್ರೀನಂದ ಅವರನ್ನು thalasseri ತಲಸ್ಸೆರಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆಯ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್‌ನ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಈ ಕುರಿತು ತಲಶ್ಶೇರಿಯ ವೈದ್ಯ ಡಾ.ನಾಗೇಶ್ ಪ್ರಭು ಅವರು ಪ್ರತಿಕ್ರಿಯಿಸಿ, ಶ್ರೀನಂದ ಅವರು ಅನೋರೆಕ್ಸಿಯಾ ನರ್ವೋಸಾದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: