ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಾಮುಕರು:‘ಓಂ’ ಟ್ಯಾಟೂ ಆ್ಯಸಿಡ್ ಹಾಕಿ ಸುಟ್ಟು ವಿಕೃತಿ
ಉತ್ತರ ಪ್ರದೇಶ: ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಕೈಲಿದ್ದ ಓಂ ಟ್ಯಾಟೂವನ್ನು ಆ್ಯಸಿಡ್ ಹಾಕಿ ಸುಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಾಲಕಿಯನ್ನು ಅಪಹರಿಸಿ ಎರಡು ತಿಂಗಳ ಕಾಲ ನಿರಂತರ ಅತ್ಯಾಚಾರವೆಸಗಲಾಗಿದ್ದು ಅಪರಾಧದಲ್ಲಿ ನಾಲ್ವರು ಪುರುಷರು ಭಾಗಿಯಾಗಿದ್ದಾರೆ ಮತ್ತು ಒಬ್ಬನನ್ನು ಬಂಧಿಸಲಾಗಿದೆ, ಇತರ ಮೂವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತೆಯ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಜನವರಿ 2 ರಂದು ಬಾಲಕಿ ಟೈಲರ್ ಮನೆಗೆ ಹೋಗುತ್ತಿದ್ದಾಗ ಅಪಹರಿಸಲಾಗಿತ್ತು.
ಹದಿನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯನ್ನು ಅಪಹರಿಸಿ ಎರಡು ತಿಂಗಳ ಕಾಲ ನಿರಂತರ ಅತ್ಯಾಚಾರವೆಸಗಲಾಗಿದೆ.
ಈ ಅಪರಾಧದಲ್ಲಿ ನಾಲ್ವರು ಪುರುಷರು ಭಾಗಿಯಾಗಿದ್ದಾರೆ ಮತ್ತು ಒಬ್ಬನನ್ನು ಬಂಧಿಸಲಾಗಿದೆ, ಇತರ ಮೂವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತೆಯ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಜನವರಿ 2 ರಂದು ಬಾಲಕಿ ಟೈಲರ್ ಮನೆಗೆ ಹೋಗುತ್ತಿದ್ದಾಗ ಅಪಹರಿಸಲಾಯಿತು.
ಆರೋಪಿಗಳಾದ ಸಲ್ಮಾನ್, ಜುಬೈರ್, ರಶೀದ್ ಮತ್ತು ಆರಿಫ್ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿ, ಅಮಲು ಪದಾರ್ಥ ನೀಡಿ ಪ್ರಜ್ಞಾಹೀನಗೊಳಿಸಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಕೋಣೆಯಲ್ಲಿ ಕೂಡಿ ಹಾಕಿ ಪದೇ ಪದೇ ಹಲ್ಲೆ ನಡೆಸಿದ್ದಾರೆ.
ಭಗತ್‌ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಸಂಜಯ್ ಕುಮಾರ್ ಪಾಂಚಲ್ ಮಾತನಾಡಿ, ಬಾಲಕಿಯನ್ನು ಬಂಧಿಸಿದಾಗ ಆಕೆಯ ಕುಟುಂಬ ಸದಸ್ಯರು ನೀಡಿದ ದೂರಿನ ಪ್ರಕಾರ ಕ್ರಮ ಕೈಗೊಂಡಿದ್ದಾರೆ.
ಒಬ್ಬ ಆರೋಪಿಯು ಆಕೆಯ ಕೈಯಲ್ಲಿದ್ದ ಓಂ ಹಚ್ಚೆಯನ್ನು ಆ್ಯಸಿಡ್‌ನಿಂದ ಸುಟ್ಟು, ಬಲವಂತವಾಗಿ ಮಾಂಸವನ್ನು ತಿನ್ನಿಸಿ, ಮತ್ತಷ್ಟು ಚಿತ್ರಹಿಂಸೆ ನೀಡಿದ್ದಾನೆ ಎಂದು ಹೇಳಿದ್ದಾರೆ. ಆದರೆ ತಪ್ಪಿಸಿಕೊಂಡ ಆಕೆ ಹೇಗೋ ಮಾರ್ಚ್ 2 ರಂದು ಆಕೆ ಮನೆಗೆ ಮರಳಿದ್ದಾಳೆ. ಆಕೆಯ ಕುಟುಂಬವು ತಕ್ಷಣ ಪೊಲೀಸ್ ದೂರು ದಾಖಲಿಸಿತು.
ಭಗತ್‌ಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.
ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಕುನ್ವರ್ ಆಕಾಶ್ ಸಿಂಗ್ ಘಟನೆಯನ್ನು ದೃಢಪಡಿಸಿದ್ದು, ಆರೋಪಿಗಳಲ್ಲಿ ಒಬ್ಬನಾದ ಸಲ್ಮಾನ್‌ನನ್ನು ಮಂಗಳವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಉಳಿದ ಶಂಕಿತರನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಏತನ್ಮಧ್ಯೆ, ಪ್ರಕರಣವನ್ನು ಹಿಂಪಡೆಯಲು ಬೆದರಿಕೆ ಮತ್ತು ಒತ್ತಡ ಹೇರಲಾಗುತ್ತಿದೆ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ.