Back To Top

 ಲಕ್ಕಿ ಚಾರ್ಮ್‌ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ- ಸಲ್ಮಾನ್‌ ಖಾನ್ ನಟನೆಯ ಸಿಕಂದರ್‌‌ ಚಿತ್ರದ ಟೀಸರ್‌ ಬಿಡುಗಡೆ
March 5, 2025

ಲಕ್ಕಿ ಚಾರ್ಮ್‌ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ- ಸಲ್ಮಾನ್‌ ಖಾನ್ ನಟನೆಯ ಸಿಕಂದರ್‌‌ ಚಿತ್ರದ ಟೀಸರ್‌ ಬಿಡುಗಡೆ

ಮುಂಬೈ: ಇಬ್ಬರು ಸೂಪರ್‌ ಸ್ಟಾರ್‌ಗಳು ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿರುವ, ಈಗಾಗಲೇ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ‘ಸಿಕಂದರ್‌’ ಬಾಲಿವುಡ್‌ ಸಿನಿಮಾದ ಟೀಸರ್‌ ಹೊರ ಬಿದ್ದಿದೆ.
ಸಲ್ಮಾನ್‌ ಖಾನ್‌ (Salman Khan)-ರಶ್ಮಿಕಾ ಮಂದಣ್ಣ(Rashmika Mandanna) ಅಭಿಮಾನಿಗಳ ಬಹು ದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. (Sikandar Teaser ) ಆ್ಯಕ್ಷನ್‌ ಪ್ಯಾಕ್ಡ್‌ ಟೀಸರ್‌ನಲ್ಲಿ ಸಲ್ಮಾನ್‌ ಮತ್ತೊಮ್ಮೆ ಮಿಂಚು ಹರಿಸಿದ್ದಾರೆ. ಸೂಪರ್‌ ಹಿಟ್‌ ಚಿತ್ರಗಳ ನಿರ್ದೇಶಕ, ಕಾಲಿವುಡ್‌ನ ಎ.ಆರ್‌.ಮುರುಗದಾಸ್‌ (A.R. Murugadoss) ಆ್ಯಕ್ಷನ್‌‌ ಕಟ್‌ ಹೇಳುತ್ತಿರುವ ಈ ಸಿನಿಮಾ ಇದೀಗ ಟೀಸರ್‌ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
ಸಾಜಿದ್‌ ನಾಡಿಯಾವಾಲ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಈ ವಿಶೇಷ ಟೀಸರ್‌ ಹೊರ ತರಲಾಗಿದೆ. ಈ ಹಿಂದೆ ಸಲ್ಮಾನ್‌ ಖಾನ್‌ ಅವರ ಜನ್ಮದಿನದ ಪ್ರಯುಕ್ತ ಅವರ ಪಾತ್ರವನ್ನು ಪರಿಚಯಿಸುವ ಟೀಸರ್‌ನಲ್ಲೇ ಬಿಡುಗಡೆ ಮಾಡಲಾಗಿತ್ತು. ಸಲ್ಮಾನ್‌ ಅವರ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದರು. ಇದೀಗ ರಿಲೀಸ್‌ ಆದ ಮತ್ತೊಂದು ಟೀಸರ್‌ ಇನ್ನಷ್ಟು ಗಮನ ಸೆಳೆಯುವಂತಿದೆ. ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಹಿಂದಿನ ಟೀಸರ್‌ನಲ್ಲಿ ರಶ್ಮಿಕಾ ಪಾತ್ರವನ್ನು ಪರಿಚಯಿಸಿರಲಿಲ್ಲ. ಇದರಿಂದ ಅವರ ಫ್ಯಾನ್ಸ್‌ ನಿರಾಸೆಗೊಳಗಾಗಿದ್ದರು. ಇದೀಗ ಅವರ ಪಾತ್ರದ ಸಣ್ಣ ಝಲಕ್‌ ಹೊರ ಬಿದ್ದಿದೆ.
ಸದ್ಯ ರಶ್ಮಿಕಾ ʼಛಾವಾʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ವಿಕ್ಕಿ ಕೌಶಲ್‌ ಜತೆಗೆ ಮೊದಲ ಬಾರಿಗೆ ಕಾಣಿಸಿಕೊಂಡ ಈ ಸಿನಿಮಾ ಈಗಾಗಲೇ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿ ರೂ. ಗಳಿಸಿದೆ. ಕಳೆದ ವರ್ಷ ತೆರೆಕಂಡ ರಶ್ಮಿಕಾ ಅಭಿನಯದ ʼಪುಷ್ಪ 2ʼ ಟಾಲಿವುಡ್‌ ಚಿತ್ರವೂ ಗಲ್ಲಾ ಪಟ್ಟಿಗೆ ದೋಚಿತ್ತು. ಹೀಗಾಗಿ ʼಸಿಕಂದರ್‌ʼ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
2025ರ ಈದ್‌ ವೇಳೆಗೆ ಈ ಚಿತ್ರ ತೆರೆ ಕಾಣಲಿದೆ. ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಕಾಜಲ್ ಅಗರ್ವಾಲ್, ಕನ್ನಡದ ಕಿಶೋರ್‌, ಸುನೀಲ್‌ ಶೆಟ್ಟಿ, ಪ್ರತೀಕ್‌ ಬಬ್ಬರ್‌, ಚೈತನ್ಯ ಚೌಧರಿ, ನವಾಬ್‌ ಶಾ ಮತ್ತಿತರರು ನಟಿಸಿದ್ದಾರೆ.
ಛಾವಾ, ಪುಷ್ಪಾ, ಅನಿಮಲ್ ನಲ್ಲಿ ಸಕ್ಸಸ್ ಕಂಡಿರುವ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಧೂಳೆಬ್ಬಿಸಲು ಸಿಕಂದರ್ ಮೂಲಕ ಎಂಟ್ರಿ ಆಗಲಿದ್ದಾರೆ.

Prev Post

ನಾಮದ ಚಿಲುಮೆಯಲ್ಲಿ ಅನುಮತಿಯಿಲ್ಲದೆ ಶೂಟಿಂಗ್ : ಚಿತ್ರೀಕರಣ ಬಂದ್

Next Post

ಬೆಂಕಿಗೆ ಆಹುತಿಯಾದ ಚಿರತೆ : ಕಾನೂನು ಕ್ರಮಕ್ಕೆ ಅರಣ್ಯ ಸಚಿವ ಸೂಚನೆ

post-bars

Leave a Comment

Related post