Back To Top

 ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ ಚೈತ್ರಾ ವಾಸುದೇವನ್
March 4, 2025

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ ಚೈತ್ರಾ ವಾಸುದೇವನ್

ಬಿಗ್ ಬಾಸ್’ ರಿಯಾಲಿಟಿ ಶೋ ಮಾಜಿ ಸ್ಪರ್ಧಿ, ನಿರೂಪಕಿ, ಇವೆಂಟ್ ಆರ್ಗನೈಸರ್ ಆಗಿರುವ ಚೈತ್ರಾ ವಾಸುದೇವನ್ ಅವರು ಭಾನುವಾರ (ಮಾ.2) ನೂತನ ಬಾಳಿಗೆ ಕಾಲಿಟ್ಟಿದ್ದಾರೆ.

ಬೆಂಗಳೂರು: ಖ್ಯಾತ ನಿರೂಪಕಿ, ‘ಬಿಗ್ ಬಾಸ್’ ಮಾಜಿ ಸ್ಪರ್ಧಿ, ಚೈತ್ರಾ ವಾಸುದೇವನ್ ಅವರು 2ನೇ ಬಾರಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಉದ್ಯಮಿ ಜಗದೀಪ್ ಎಂಬುವವರನ್ನು ಚೈತ್ರಾ ಪ್ರೀತಿಸಿ ಮದುವೆ ಆಗಿದ್ದಾರೆ. ಈ ಹಿಂದೆ ಸತ್ಯ ನಾಯ್ಡು ಎಂಬುವರ ಜೊತೆ ಮದುವೆ ಆಗಿ, ವಿಚ್ಛೇದನ ಪಡೆದುಕೊಂಡಿದ್ದ ಚೈತ್ರಾ, ಈಗ ಎರಡನೇ ಬಾರಿಗೆ ದಾಂಪತ್ಯ ಬದುಕು ಆರಂಭಿಸಿದ್ದಾರೆ.
ಬಿಗ್ ಬಾಸ್’ ರಿಯಾಲಿಟಿ ಶೋ ಮಾಜಿ ಸ್ಪರ್ಧಿ, ನಿರೂಪಕಿ, ಇವೆಂಟ್ ಆರ್ಗನೈಸರ್ ಆಗಿರುವ ಚೈತ್ರಾ ವಾಸುದೇವನ್ ಅವರು ಭಾನುವಾರ (ಮಾ.2) ನೂತನ ಬಾಳಿಗೆ ಕಾಲಿಟ್ಟಿದ್ದಾರೆ. ಜಗದೀಪ್ ಎಂಬುವವರ ಜೊತೆಗೆ ಚೈತ್ರಾ ವಾಸುದೇವನ್ ಅವರ ಮದುವೆಯು ಅದ್ದೂರಿಯಾಗಿ ನಡೆದಿದೆ. ಇದು ಚೈತ್ರಾ ಅವರ ಎರಡನೇ ಮದುವೆ ಆಗಿದ್ದು, ಬಹಳ ಕಲರ್‌ಫುಲ್ ಆಗಿ ಮದುವೆ ಸಮಾರಂಭ ನಡೆದಿದೆ.

ಜಗದೀಪ್ ಅವರು ಓರ್ವ ಉದ್ಯಮಿ ಆಗಿದ್ದು, ಕೆಲ ಸಮಯದ ಹಿಂದೆ ಯಾವುದೋ ಒಂದು ಕೆಲಸದ ವಿಚಾರವಾಗಿ ಇಬ್ಬರು ಕನೆಕ್ಟ್ ಆಗಿದ್ದರು. ಆನಂತರ ಇವರಿಬ್ಬರು ಒಂದೇ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವುದು ಎಂಬ ವಿಚಾರ ತಿಳಿಯಿತು. ಬಳಿಕ ಅವರಿಬ್ಬರ ನಡುವೆ ಫ್ರೆಂಡ್‌ಶಿಪ್ ಬೆಳೆದು, ಅದು ಪ್ರೀತಿಗೆ ತಿರುಗಿಕೊಂಡಿತ್ತು. ಆನಂತರ ಕುಟುಂಬದವರ ಒಪ್ಪಿಗೆ ಮೇರೆಗೆ ಈ ಜೋಡಿ ಮದುವೆ ಆಗುವ ನಿರ್ಧಾರ ಮಾಡಿತ್ತು. ಪ್ಯಾರಿಸ್‌ನ ಐಫೆಲ್‌ ಟವರ್‌ ಮುಂದೆ ರಿಂಗ್‌ ಸಿಂಪಲ್‌ ಆಗಿ ಚೈತ್ರಾ ಮತ್ತು ಜಗದೀಪ್‌ ಎಂಗೇಜ್‌ ಆಗಿದ್ದರು. ಇದೀಗ ಚೈತ್ರಾ ಮತ್ತು ಜಗದೀಪ್ ಹೊಸ ಜೀವನವನ್ನು ಆರಂಭಿಸಿದ್ದಾರೆ. ಇವರ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಅನ್ನು ಪ್ಯಾರೀಸ್‌ನಲ್ಲಿ ಮಾಡಿದ್ದು ವಿಶೇಷವಾಗಿದೆ.

2017ರಲ್ಲಿ ಚೈತ್ರಾ ವಾಸುದೇವನ್ ಅವರು ಮೊದಲ ಮದುವೆ ನಡೆದಿತ್ತು. ಆಗಷ್ಟೇ ಓದು ಮುಗಿಸಿದ್ದ ಚೈತ್ರಾಗೆ ಸತ್ಯ ನಾಯ್ಡು ಎಂಬುವವರ ಜೊತೆಗೆ ಮದುವೆ ಮಾಡಲಾಗಿತ್ತು ಮತ್ತು ಅದು ಅರೆಂಜ್ ಮ್ಯಾರೇಜ್ ಆಗಿತ್ತು. ಆದರೆ ಸಂಸಾರದಲ್ಲಿನ ಸಮಸ್ಯೆಗಳಿಂದಾಗಿ ಇಬ್ಬರು 2023ರಲ್ಲಿ ವಿಚ್ಛೇದನ ಪಡೆದುಕೊಂಡು ದೂರವಾಗಿದ್ದರು. “ಸಂಸಾರ ಉಳಿಸಿಕೊಳ್ಳಲು ತುಂಬಾ ಕಷ್ಟಪಟ್ಟೆ… ಜೀವನದಲ್ಲಿ ಆಕ್ಸಿಡೆಂಟ್‌ ಆಗುವುದು ಸಹಜ. ಆದರೆ ಅದನ್ನು ಮರೆತು ಜೀವನ ಸಾಗಿಸಬೇಕು..” ಎಂದು ಚೈತ್ರಾ ಒಮ್ಮೆ ಹೇಳಿಕೊಂಡಿದ್ದರು. ಸದ್ಯ ಚೈತ್ರಾ ವಾಸುದೇವನ್ ಅವರ ಬಾಳಲ್ಲಿ ಜಗದೀಪ್ ಅವರ ಪ್ರವೇಶವಾಗಿದೆ. ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ 8ಗಂಟೆಗೆ ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೆದಿದೆ.

ಇದನ್ನು ಓದಿ:

https://infomindz.in/dakshina-rajyagalige-ananyavagalu-biduvudilla-kendra-graha-sachiva-amith-shah-helike/
Prev Post

ಮಾದಕ ಚಟಕ್ಕೆ ಬಿದ್ದು ಮೂಗು ಕಳೆದುಕೊಂಡ ಯುವತಿ 15 ಸರ್ಜರಿ ಬಳಿಕ ನಾಯಿ…

Next Post

ʻಭಾರತ್‌ ಜೋಡೋʼದಲ್ಲಿ ಕಾಣಿಸಿಕೊಂಡ ಕಾರ್ಯಕರ್ತೆ ಶವ ಪತ್ತೆ

post-bars

Leave a Comment

Related post