Back To Top

 ಅರ್ಜಿ ಸಲ್ಲಿಸಿದವರಿಗೆ ಮಾರ್ಚ್ 22 ರಿಂದ ಕೆಇಎ ಪರೀಕ್ಷೆ
February 28, 2025

ಅರ್ಜಿ ಸಲ್ಲಿಸಿದವರಿಗೆ ಮಾರ್ಚ್ 22 ರಿಂದ ಕೆಇಎ ಪರೀಕ್ಷೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸ್ಪರ್ಧಾತ್ಮಕ ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಈ ಹಿಂದೆ ಆಹ್ವಾನ ಮಾಡಲಾಗಿತ್ತು. ಇದೀಗ ಈ ಹುದ್ದೆಗಳಿಗೆ ಸಂಬಂಧಿಸಿದಂತೆ
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳಿಗೆ ಯಾರು ಯಾರು ಅರ್ಜಿ ಸಲ್ಲಿಕೆ ಮಾಡಿರುವಿರೋ ಅವರಿಗೆಲ್ಲಾ ಮುಂದಿನ ತಿಂಗಳಿನಿಂದ ಅಂದರೆ ಮಾರ್ಚ್ 22 ರಿಂದ ಎಕ್ಸಾಂ ಇರುತ್ತದೆ. ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆಗಳನ್ನು ಮಾರ್ಚ್ 22, 23, 24 ಹಾಗೂ 25 ರಂದು ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಉದ್ಯೋಗ ಆಕಾಂಕ್ಷಿಗಳು ಈ ಇನ್ನಷ್ಟು ಶ್ರಮಪಟ್ಟು ಓದಿನ ಕಡೆ ಗಮನ ಹರಿಸಿದರೆ, ಕರ್ನಾಟಕ ಸರ್ಕಾರದಡಿ ಉದ್ಯೋಗ ಪಡೆಯುವಲ್ಲಿ ಯಶಸ್ಸು ಗಳಿಸಸಬಹುದು.
ಜೂನಿಯರ್ ಕೌನ್ಸಲರ್ ಆಪರೇಟರ್, ಕಂಪ್ಯೂಟರ್ ಆಪರೇಟರ್, ಸಹಾಯಕರು, ಕಿರಿಯ ಸಹಾಯಕರು, ಕಂಪ್ಯೂಟರ್ ಆಪರೇಟರ್, ಕಿರಿಯ ಕೌನ್ಸಲರ್ ಆಪರೇಟರ್, ಹಿರಿಯ ಪ್ರೋಗ್ರಾಮರ್, ಕಿರಿಯ ಪ್ರೋಗ್ರಾಮರ್, ಡಾಟಾ ಎಂಟ್ರಿ ಸಹಾಯಕ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಿರುವಂತ ಅಭ್ಯರ್ಥಿಗಳಿಗೆ ಪರೀಕ್ಷೆ ದಿನಾಂಕಗಳನ್ನು ಘೋಷಣೆ ಮಾಡಲಾಗಿದೆ.
ಹಿರಿಯ ಪ್ರೋಗ್ರಾಮರ್, ಕಿರಿಯ ಪ್ರೋಗ್ರಾಮರ್, ಕಂಪ್ಯೂಟರ್ ಆಪರೇಟರ್, ಜೂನಿಯರ್ ಕೌನ್ಸಲರ್ ಆಪರೇಟರ್ ಹುದ್ದೆಗಳಿಗೆ ಪತ್ರಿಕೆ-2 ಪ್ರಶ್ನೆ ಪತ್ರಿಕೆಗಳನ್ನು ಇಂಗ್ಲಿಷ್ನಲ್ಲಿ ಇರುತ್ತವೆ.
ಸಹಾಯಕರು, ಕಿರಿಯ ಸಹಾಯಕರು, ಕಂಪ್ಯೂಟರ್ ಆಪರೇಟರ್, ಕಿರಿಯ ಕೌನ್ಸಲರ್ ಆಪರೇಟರ್ ಈ ಉದ್ಯೋಗಗಳು ಗ್ರೂಪ್- ಸಿ ಹುದ್ದೆಗಳು ಆಗಿವೆ. ಪತ್ರಿಕೆ-1ರ ಪಠ್ಯ ಕ್ರಮವು ಮತ್ತು ಗರಿಷ್ಠ ಅಂಕಗಳು ಒಂದೇ ಇರುವುದರಿಂದ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು ಯಾವುದಾದ್ರೂ ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿ ಗೈರು ಹಾಜರಾದ ಪ್ರವೇಶ ಪತ್ರವನ್ನು (ಹಾಲ್ ಟಿಕೆಟ್) ಪ್ರಾಧಿಕಾರಕ್ಕೆ ಸಲ್ಲಿಸಿದ್ದಲ್ಲಿ ಅರ್ಜಿ ಸಲ್ಲಿಸಿದ ಉಳಿದ ಮೇಲ್ಕಂಡ ಹುದ್ದೆಗಳಿಗೆ ಪತ್ರಿಕೆ-1 ಅಂಕಗಳನ್ನು ಪರಿಗಣಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Prev Post

ಎಳನೀರಿನಿಂದ ವೈನ್‌ ತಯಾರಿ ಸಾಧಕ ಸೆಬಾಸ್ಟಿಯನ್‌ ಆಗಸ್ಟಿನ್‌!!!ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗ

Next Post

ಕಚೇರಿಯಲ್ಲೇ ಬೆಡ್ ರೂಂ ಮಾಡಿದ ಕಾರವಾರದ ಪ್ರವಾಸೋದ್ಯಮ ಅಧಿಕಾರಿ ಅಮಾನತು

post-bars

Leave a Comment

Related post