Back To Top

 ಶುಕ್ರವಾರದ ಹೊಸ ಸಿನಿಮಾಗಳು: ಸಿನಿಪ್ರಿಯರಿಗೆ ಸಾಲು ಸಿನಿಮಾಗಳ ರಸದೌತಣ
February 24, 2025

ಶುಕ್ರವಾರದ ಹೊಸ ಸಿನಿಮಾಗಳು: ಸಿನಿಪ್ರಿಯರಿಗೆ ಸಾಲು ಸಿನಿಮಾಗಳ ರಸದೌತಣ

ಚಿತ್ರರಂಗ: ಹೊಸ ಸಿನಿಮಾ ಬಿಡುಗಡೆಗೆ ಪ್ರತಿ ಶುಕ್ರವಾರ ಹೇಳಿ ಮಾಡಿಸಿದ ದಿನ. ಅಂತೆಯೇ ಈ ಶುಕ್ರವಾರವೂ ಸಹ ಹಲವು ಸಿನಿಮಾಗಳು ಚಿತ್ರಮಂದಿರದಲ್ಲಿ ತೆರೆ ಕಂಡಿದೆ. ಸಿನಿ ಪ್ರೀಯರು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ. ಇಂದೂ ಕೂಡ ಚಿತ್ರಮಂದಿರಗಳು ಸಿಂಗಾರಗೊಂಡಿದೆ. ಭರವಸೆ ಮೂಡಿಸಿರುವ, ನಿರೀಕ್ಷೆ ಹುಟ್ಟಿಸಿರುವ ಕೆಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ.
ಮೊನ್ನೆ ಅಷ್ಟೇ ಪೋಸ್ಟರ್ ಹಂಚಿ ಪ್ರಚಾರಕ್ಕೆ ಚಾಲನೆ ನೀಡಿದ ವಿಷ್ಣುಪ್ರಿಯ ಸಿನಿಮಾದ
ನಿರ್ಮಾಪಕರು ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಹಾಗೂ ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರುವ ‘ವಿಷ್ಣುಪ್ರಿಯ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಸರಳ ಪ್ರೇಮಕತೆಯ ಜೊತೆಗೆ ಆಕ್ಷನ್ ಅನ್ನು ಸಹ ಒಳಗೊಂಡಿರುವ ಈ ಸಿನಿಮಾವನ್ನು ವಿಕೆ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಕೆ. ಮಂಜು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ಮತ್ತು ಹಾಡುಗಳು ಗಮನ ಸೆಳೆದಿವೆ.
‘ಶಾನುಭೋಗರ ಮಗಳು’, ರಘು ಭಟ್, ಕಾವ್ಯಾ ಶೆಟ್ಟಿ, ವಿಜಯ್ ರಾಘವೇಂದ್ರ ನಟನೆಯ ‘ನಿಮಗೊಂದು ಸಿಹಿ ಸುದ್ದಿ’, ಅಂಜನ್ ನಾಗೇಂದ್ರ, ವಿನಯಾ ರೈ ಇನ್ನಿತರರು ನಟಿಸಿರುವ ‘ಎಲ್ಲೋ ಜೋಗಪ್ಪ ನಿನ್ ಅರಮನೆ’, ಸೋಮ ವಿಜಯ್, ತೇಜಸ್ವಿ ರೆಡ್ಡಿ ನಟನೆಯ ‘ನಂಗೂ ಲವ್ವಾಗಿದೆ’, ಯೂಟ್ಯೂಬ್ ಸ್ಟಾರ್ ಮಲ್ಲು ಜಮಖಂಡಿ ನಟನೆಯ ‘ವಿದ್ಯಾ ಗಣಪತಿ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ನವಮಿ’ ಕನ್ನಡ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ.
ತಮಿಳಿನ ‘ಡ್ರ್ಯಾಗನ್’ ಸಿನಿಮಾ ಸಹ ಬಹಳ ನಿರೀಕ್ಷೆ ಮೂಡಿಸಿದೆ. ಪ್ರದೀಪ್ ರಂಗನಾಥನ್, ಆಶಿಕಾ ರಂಗನಾಥನ್, ಕಾವ್ಯಾ ಲೋಹರ್ ನಟಿಸಿರುವ ಈ ಸಿನಿಮಾ ಟ್ರೈಲರ್ ನಿಂದ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಅಶ್ವತ್ಥ್ ಮಾರಿಮುತ್ತು, ಸಿನಿಮಾ ನಿರ್ಮಾಣ ಮಾಡಿರುವುದು ಕಲಾಪತಿ ಎಸ್ ಅಗೋರಂ. ಆಗಿದ್ದಾರೆ.
ತೆಲುಗಿನ ಹಾಸ್ಯ ನಟ ಧನರಾಜ್ ಹಾಗೂ ಸಮುದ್ರಕಣಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ರಾಮಮ್ ರಾಘವಂ’ ತೆಲುಗು ಸಿನಿಮಾ ಇಂದು ಬಿಡುಗಡೆ ಆಗುತ್ತಿವೆ. ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಅನ್ನು ಸ್ವತಃ ಧನರಾಜ್ ನಿರ್ದೇಶನ ಮಾಡಿದ್ದಾರೆ. ತೆಲುಗಿನ ಇನ್ನಿತರೆ ಸಿನಿಮಾಗಳಾದ ‘ಬಾಪು’, ‘ಡೆವಿಲ್ಸ್ ಚೇರ್’ ಸಹ ಇಂದು ಬಿಡುಗಡೆ ಆಗುತ್ತಿವೆ.
ಸ್ಟಾರ್ ನಟ ಧನುಶ್ ನಿರ್ದೇಶನ ಮಾಡಿರುವ ಯೂಥ್ಫುಲ್ ಲವ್ ಸ್ಟೋರಿ ‘ನಿಲವುಕು ಎನ್ಮೇಲ್ ಎನ್ನಡಿ ಕೋಪಂ’ ತಮಿಳು ಸಿನಿಮಾ ಇಂದು ಬಿಡುಗಡೆ ಆಗಿದೆ. ಕುಂಬಳಂಗಿ ನೈಟ್ಸ್ನ ಬಾಲನಟ ಮ್ಯಾಥಿವ್ ಥಾಮಸ್ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಹಲವು ಪ್ರತಿಭಾವಂತ ನಟ-ನಟಿಯರು ಸಿನಿಮಾದಲ್ಲಿದ್ದಾರೆ. ಸಿನಿಮಾ ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆ ಆಗಿದೆ.
ಒಟ್ಟಾರೆ ಸಿನಿಮಾ ಪ್ರೀಯರಿಗೆ ಈ ದಿನ ಮತ್ತು ಮುಂದಿನ ವಾರದ ತನಕ ಭರ್ಜರಿ ಸಿನಿಮಾಗಳು ಸಾಲು ಸಾಲಾಗಿ ಥಿಯೇಟರ್ನಲ್ಲಿ ಕಾದು ಕುಳಿತಿವೆ.

ವಿದ್ಯಾ ಗಣೇಶ ಸಿನಿಮಾ ವಿಮರ್ಶೆ

Prev Post

ಬಿಗ್ಬಾಸ್ ಧನರಾಜ್ ಮನೆಗೆ ರನ್ನರ್ ಅಪ್ ತ್ರಿವಿಕ್ರಮ್ ಭೇಟಿ: ಪುಲ್ ಖುಷಿಯಿಂದ ಪೋಸ್ಟ್…

Next Post

ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ ತೊಟ್ಟ ವಿದ್ಯಾ ಗಣೇಶ

post-bars

Leave a Comment

Related post