ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ ತೊಟ್ಟ ವಿದ್ಯಾ ಗಣೇಶ
ಶರಣ್ಯ ಕೋಲ್ಚಾರ್
ಆದರೆ ಸಿನಿಮಾ ಥಿಯೇಟರ್ ಗೆ ಹೋಗಿ ನೋಡಿದಾಗ ಇದೊಂದು ಫ್ಯಾಮಿಲಿ ಸೆಂಟಿಮೆಂಟ್, ಅದರಲ್ಲಿ ಒಂದು ಮುದ್ದಾದ ಲವ್ ಸ್ಟೋರಿ ಅದರಲ್ಲೂ ಸಮಾಜದಲ್ಲಿ ಹಿಂದುಳಿದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಡುವ ಸಾಮಾನ್ಯ ಮನಸ್ಕರ ಯೋಚನೆಗೆ ತಾಕುವಂತೆ ಈ ಸಿನಿಮಾ ಅದ್ಬುತವಾಗಿ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ನಿರ್ದೇಶಕ ಉಮೇಶ್ ಬೀದರ್ ಸಾರಥ್ಯದಲ್ಲಿ ಮೂಡಿ ಬಂದಿದ್ದು ಚೇತನ್ ನಿರ್ಮಾಪಕರಾಗಿದ್ದಾರೆ.
ಈ ಸಿನಿಮಾದಲ್ಲಿ ನಾಯಕ ನಟನಾಗಿ ಖ್ಯಾತ ಯೂಟ್ಯೂಬರ್ ಮಲ್ಲು ಜಮಖಂಡಿ, ನಾಯಕಿ ಸುರಕ್ಷಾ ಕೈರ ಅದ್ಧೂರಿಯಾಗಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ಕಾಕ್ರೋಚ್ ಸುಧಿ, ರಮೇಶ್ ಭಟ್, ಸುಚೆಂದ್ರ ಪ್ರಸಾದ್, ತಬಲಾ ನಾಣಿ ಅಭಿನಯಿಸಿದ್ದಾರೆ.
ಒಂದು ಮದುವೆ ಕಾರ್ಯಕ್ರಮದಲ್ಲಿ ಪೆಂಡಾಲ್ ಹಾಕೋ ಸೀನ್ ನಿಂದ ಸಿನಿಮಾ ತೆರೆದುಕೊಂಡಿದ್ದು ಪೆಂಡಾಲ್ ಕೂಡ ಸಿನಿಮಾದಲ್ಲಿ ಮಾತನಾಡುವಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಯಿಂದ ವಧುವಿನ ನಡತೆ ಬಗ್ಗೆ ಸಂಶಯಪಟ್ಟು ಮದುವೆ ಮುರಿಯುವ ಹಂತಕ್ಕೆ ಬಂದಾಗ ಪೆಂಡಾಲ್ ಕಟ್ಟುತಿದ್ದ ಸಿನಿಮಾದ ನಾಯಕ ದೊಡ್ಡವರಿಗೆ ಬುದ್ಧಿ ಹೇಳಿ ಮದುವೆ ಮುಂದುವರಿಯುವಂತೆ ಮಾಡುತ್ತಾನೆ.
ಆತನ ಉತ್ತಮ ಗುಣಕ್ಕೆ ಮನಸೋತು ಆ ಊರಿನ ಸ್ಕೂಲ್ ಮಾಸ್ಟರ್ ಮಗಳು ಪ್ರೀತಿಯಲ್ಲಿ ಬೀಳುತ್ತಾಳೆ ಮತ್ತು ತಂದೆ ಸ್ಕೂಲ್ ಮೇಷ್ಟ್ರು ಆಗಿದ್ದರಿಂದ ಊರಿನ ಬಡ ಮಕ್ಕಳಿಗೆ ಆಕೆಯೂ ಟ್ಯೂಷನ್ ಕೊಡುತ್ತಿದ್ದಳು.
ಪೆಂಡಲ್ ಹುಡುಗ ಮತ್ತು ಸಿಂಪಲ್ ಮುದ್ದು ಹುಡುಗಿಯ ಮಧುರ ಪ್ರೀತಿಗೆ ಮನೆಯ ಒಪ್ಪಿಗೆಯೂ ದೊರಕಿರುತ್ತದೆ.
ಸಿನಿಮಾ ಅಂದಾಕ್ಷಣ ಒಂದಷ್ಟು ಹೊಡೆದಾಟ, ಕಿತ್ತಾಟ ಮಾಮೂಲಿ ಹಾಗೆಯೇ ಇಲ್ಲೂ ಒಂದು ಪುಂಡರ ತಂಡ ಇವರನ್ನು ಕೆಣಕುತ್ತಲೇ ಇತ್ತು. ಊರಿನ ಮುಖ್ಯಸ್ಥ ಶಾಲಾ ಅನುದಾನವನ್ನೆಲ್ಲಾ ನುಂಗಿ ನೀರು ಕುಡಿದು ಸರ್ಕಾರಿ ಶಾಲಾ ಅಭಿವೃದ್ಧಿ ಶೂನ್ಯವಾಗುವುದನ್ನು ನಾಯಕಿ ನಾಯಕನಲ್ಲಿ ಪ್ರಸ್ತಾಪಿಸಿ ಬಿಒ ಆಫೀಸಿಗೆ ದೂರು ನೀಡುತ್ತಾಳೆ. ಆದರೆ ಆ ದೂರಿನ ಪರಿಣಾಮ ಮುಂದೇನಾಗುತ್ತದೆ.
ಸರ್ಕಾರಿ ಶಾಲೆ ಅಭಿವೃದ್ಧಿಗೆ ಆಕೆ ಮತ್ತು ಆಕೆಯ ತಂದೆ ಕಂಡ ಕನಸು ನನಸಾಯಿತೇ ಅಥವಾ ಖಳನಾಯಕರು ಮುಂದೆನಾದರೂ ಎಲ್ಲಾ ಪ್ರಶ್ನೆಗೂ ಸಿನಿಮಾ ಸೆಕೆಂಡ್ ಆಫ್ ನಿಂದ ಉತ್ತರ ಸಿಗುತ್ತದೆ.
ಸವಾಲ್ -ಜವಾಬ್ ಭಜನಾ ಸ್ಪರ್ಧೆ ಸಕ್ಕತ್ ಮನೋರಂಜನೆ ನೀಡುತ್ತದೆ. ನಾಯಕನ ಫೈಟಿಂಗ್ ಸೀನ್ ತುಂಬಾ ಅದ್ಭುತವಾಗಿದೆ. ರೊಮ್ಯಾಂಟಿಕ್ ಸೀನ್, ಮಧುರ ಗೀತೆಗಳು ಉತ್ತರ ಕರ್ನಾಟಕ ಭಾಷೆಯ ಸೊಗಡು ಕಿವಿ ಮುದಗೊಳಿಸುತ್ತದೆ.
ಕಾಮಿಡಿಯಂತೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತದೆ. ಪಂಚ್ ಡೈಲಾಗ್ ಜೊತೆಗೆ ಗ್ರಾಮೀಣ ಬದುಕಿನ ಚಿತ್ರಣವನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಶೋಕ ಗೀತೆ ಮತ್ತು ಕಥೆಯ ಮುಂದುವರಿದ ಭಾಗ ಪ್ರೇಕ್ಷಕನ ಕಣ್ಣುಗಳು ತುಂಬಿ ಬರುತ್ತದೆ.
ಸರ್ಕಾರಿ ಶಾಲೆ ಉಳಿವಿಗೆ ಮತ್ತು ಹೆಣ್ಣುಮಕ್ಕಳ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮನೋಜ್ಞ ಅಭಿನಯ ಮತ್ತು ಅರ್ಥಪೂರ್ಣ ಕಥೆಯೂ ಸಿನಿಮಾದಲ್ಲಿ ಪ್ರೇಕ್ಷಕರನ್ನು ಕೊನೆ ತನಕವೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.