Back To Top

 ಕುಂಭಮೇಳ ವೈರಲ್ ಗರ್ಲ್ ಮೊನಾಲೀಸಾ ದಿನದ ಗಳಿಕೆ 30 ಸಾವಿರಹೊಸ ಬ್ಯುಸಿನೆಸ್ ಆರಂಭಿಸಿದ ಮೊನಾಲಿಸಾ
February 24, 2025

ಕುಂಭಮೇಳ ವೈರಲ್ ಗರ್ಲ್ ಮೊನಾಲೀಸಾ ದಿನದ ಗಳಿಕೆ 30 ಸಾವಿರಹೊಸ ಬ್ಯುಸಿನೆಸ್ ಆರಂಭಿಸಿದ ಮೊನಾಲಿಸಾ

ಕುಂಭಮೇಳ: ಮಹೇಶ್ವರದ ಗುಡಿಸಲಿನ ಹುಡುಗಿ ಮೊನಾಲಿಸಾ!
ಮಧ್ಯ ಪ್ರದೇಶದ ಇಂದೋರ್ನ ಮಹೇಶ್ವರ ಅನ್ನೋ ಪುಟ್ಟ ಗ್ರಾಮದ ಹುಡುಗಿ ಮೊನಾಲಿಸಾ. ಸದ್ಯ, ತನ್ನ ಅಜ್ಜನೊಂದಿಗೆ ಊರಿನಲ್ಲೇ ಇರೋ ಮೊನಾಲಿಸಾಳನ್ನು ಡಿಜಿಟಲ್ ಕ್ರೇಜ್ ಸುಮ್ಮನೇ ಬಿಡುತ್ತಿಲ್ಲ. ತನ್ನನ್ನು ಅಪ್ಪ ಕುಂಭಮೇಳದಿಂದ ಕಳುಹಿಸಿದ್ದು ಏಕೆ ಅನ್ನೋ ಸಂಗತಿಯನ್ನೂ ಮೊನಾಲಿಸಾ ಹಂಚಿಕೊಂಡಿದ್ದಾಳೆ. ಅಷ್ಟೇ ಅಲ್ಲ, ತನ್ನ ಪುಟ್ಟ ಮನೆ ತೋರಿಸಿ ತನ್ನ ಸ್ಥಿತಿ ಎಂಥದ್ದು ಅನ್ನೋದನ್ನ ಮುಗ್ಧವಾಗಿ ನಗುತ್ತಲೇ ಹೇಳಿಕೊಂಡಿದ್ದಾಳೆ.ವೈರಲ್ ಗರ್ಲ್ ಮೊನಾಲಿಸಾ ಪ್ರತಿ ದಿನವೂ ₹30,000 ಗಳಿಸುತ್ತಿದ್ದಾಳಾ?
ಏನಿದು ಜೇನುಗಣ್ಣ ಚೆಲುವೆ ಮೊನಾಲಿಸಾ ಭೋಂಸ್ಲೆ ಹೊಸ ಬ್ಯುಸಿನೆಸ್?
ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ವೈರಲ್ ಆಗಿದ್ದಳು ಮೊನಾಲಿಸಾ. ಹೊಟ್ಟೆಪಾಡಿಗಾಗಿ ರುದ್ರಾಕ್ಷಿ ಮಾಲೆ ಮಾರೋಕೆ ಬೀದಿಗೆ ಬಂದ್ರೂ ಕಷ್ಟ ಆಗುತ್ತಿತ್ತು. ಮೊನಾಲಿಸಾ ಕ್ರೇಜ್ ಹೇಗಿತ್ತು ಅಂದ್ರೆ ಫ್ಯಾನ್ಸ್ ಮುತ್ತಿಕೊಳ್ಳುತ್ತಿದ್ದರು. ಸೆಲ್ಫಿಗಾಗಿ ಸುತ್ತುವರೆಯುತ್ತಿದ್ದರು. ಹಾಗಾಗಿಯೇ ಮೊನಾಲಿಸಾ ಅಪ್ಪ ಮಹಾಕುಂಭಮೇಳದ ಮಧ್ಯದಲ್ಲೇ ಊರಿಗೆ ಕಳುಹಿಸಿಬಿಟ್ಟರು.
ಮಹಾಕುಂಭಮೇಳದಲ್ಲಿ ದಿನಕ್ಕೆ ₹1000 ದಿಂದ ₹3000 ದುಡಿಯುತ್ತಿದ್ದಳು. ಆದ್ರೀಗ ಈಕೆಯ ರೇಂಜೇ ಚೇಂಜ್ ಆಗಿದೆ. ಹೊಸ ಬ್ಯುಸಿನೆಸ್ ಆರಂಭಿಸಿರೋ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ. ಅದ್ಯಾವ ಬಂಡವಾಳ ಅವಳನ್ನು ಜನಪ್ರಿಯಗೊಳಿಸಿತೋ? ಅದೇ ಬಂಡವಾಳದಿಂದಲೇ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾಳೆ.
ಮೊನಾಲಿಸಾ ಮಾಸಿಕ ಸಂಪಾದನೆ ₹10 ಲಕ್ಷವೇ?
ಮೊನಾಲಿಸಾ ಭೋಂಸ್ಲೆ 08 ಅನ್ನೋ ಯುಟ್ಯೂಬ್ ಚಾನಲ್ ಆರಂಭಿಸಿದ್ದಾಳೆ. ಇವಳ ಅದೃಷ್ಟವೋ? ಜೇನುಗಣ್ಣಿನ ಆಕರ್ಷಣೆಯೋ? ಈಕೆಯ ಪ್ರತೀ ವಿಡಿಯೋ ಮಿಲಿಯನ್ ವೀವ್ಸ್ ಪಡೆಯುತ್ತಿವೆ. ಇದುವರೆಗೂ ಕೇವಲ 9 ವಿಡಿಯೋ ವ್ಲಾಗ್ ಮಾಡಿರೋ ಮೊನಾಲಿಸಾ ಎಂಟೇ ದಿನಗಳಲ್ಲಿ ಸರಿ ಸುಮಾರು 3 ಲಕ್ಷ ಸಬ್ಸ್ಕ್ರೈಬರ್ಸ್ ಹೊಂದಿದ್ದಾಳೆ. ಸೋಷಿಯಲ್ ಬ್ಲೇಡ್ ಅನ್ನೋ ವೆಬ್ಸೈಟ್ ಈಕೆಯ ಯುಟ್ಯೂಬ್ ವಿಡಿಯೋ ಆದಾಯ ತಿಂಗಳಿಗೆ ₹10 ಲಕ್ಷ ದಾಟಲಿದೆ ಎಂದು ಅಂದಾಜಿಸುತ್ತಿದೆ. ಅಲ್ಲಿಗೆ ರುದ್ರಾಕ್ಷಿ ಮಾರುತ್ತಿದ್ದಾಗ ದಿನಕ್ಕೆ ₹1000 ದುಡಿಯುತ್ತಿದ್ದ ಮೊನಾಲಿಸಾ ಇದೀಗ ₹30,000 ದುಡಿಯೋ ರೇಂಜ್ಗೆ ಬಂದಿದ್ದಾಳೆ ಎನ್ನಲಾಗುತ್ತಿದೆ. ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯಾ ಅನ್ನೋ ಮಾತು ಇಲ್ಲೂ ಅನ್ವಯಿಸುತ್ತದೆ.

Prev Post

ಶಿವರಾತ್ರಿ ಹಬ್ಬಕ್ಕೆ ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ

Next Post

ಪರೀಕ್ಷೆಯಲ್ಲಿ ಕೆಪಿಎಸ್ಸಿ ಕನ್ನಡದ ಕಗ್ಗೊಲೆ: ಸಿಡಿದೆದ್ದ ಕರವೇ ನಾರಾಯಣಗೌಡ: ಫ್ರೀಡಂಪಾರ್ಕ್ ನಲ್ಲಿ ಬೃಹತ್…

post-bars

Leave a Comment

Related post