Back To Top

 ಬಿಗ್ಬಾಸ್ ಧನರಾಜ್ ಮನೆಗೆ ರನ್ನರ್ ಅಪ್ ತ್ರಿವಿಕ್ರಮ್ ಭೇಟಿ: ಪುಲ್ ಖುಷಿಯಿಂದ ಪೋಸ್ಟ್ ಹಂಚಿಕೊಂಡ ಕಂಟೆಸ್ಟೆಂಟ್
February 24, 2025

ಬಿಗ್ಬಾಸ್ ಧನರಾಜ್ ಮನೆಗೆ ರನ್ನರ್ ಅಪ್ ತ್ರಿವಿಕ್ರಮ್ ಭೇಟಿ: ಪುಲ್ ಖುಷಿಯಿಂದ ಪೋಸ್ಟ್ ಹಂಚಿಕೊಂಡ ಕಂಟೆಸ್ಟೆಂಟ್

ಪುತ್ತೂರು: ಕಂಟೆಸ್ಟಂಟ್‌ ಧನರಾಜ್ ಆಚಾರ್ ಮನೆಗೆ ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್, ದಿಢೀರ್‌ ಭೇಟಿ ಕೊಟ್ಟು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಮಂಗಳೂರಿಗೆ ತೆರಳಿದ್ದ ತ್ರಿವಿಕ್ರಮ್‌ ಅವರು ಪುತ್ತೂರಿನಲ್ಲಿರುವ ಧನರಾಜ್ ಮನೆಗೆ ಭೇಟಿ ಕೊಟ್ಟು ಸಮಯ ಕಳೆದುದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಹರಿಬಿಟ್ಟಿದ್ದಾರೆ.
ಧನರಾಜ್ ಆಚಾರ್ ಅವರದ್ದು ಬಹಳ ದೊಡ್ಡ ಕುಟುಂಬ. ಕಮಲಜ್ಜಿ ಕುಟುಂಬದ ಎಲ್ಲಾ ಸದಸ್ಯರ ಜೊತೆ ಕಾಲ ಕಳೆದ ತ್ರಿವಿಕ್ರಮ್ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ತ್ರಿವಿಕ್ರಮ್ ಕಂಡು ಕಮಲಜ್ಜಿ ಕುಟುಂಬದ ಸದಸ್ಯರು ಸಂತೋಷವಾಗಿದ್ದು, ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಫೋಟೋಗೆ ಸಖತ್ ಪೋಸ್‌ ಕೊಟ್ಟಿದ್ದಾರೆ.
ತ್ರಿವಿಕ್ರಮ್ ಆಗಮನದ ಬಗ್ಗೆ ಖುಷಿ ಹಂಚಿಕೊಂಡಿರುವ ಧನರಾಜ್ ಅವರು ನಮ್ಮ ಮನೆಯಲ್ಲಿ ಮಾಸ್ಟರ್ ತ್ರಿವಿಕ್ರಮ್. ಲವ್ ಯು ಮಾಸ್ಟರ್ ನೀವು ಬಂದಿದ್ದು ಖುಷಿ, ಖುಷಿ, ಖುಷಿ ಅಷ್ಟೇ. ಕಮಲಜ್ಜಿ ಕುಟುಂಬ ಮತ್ತು ವಿಕ್ಕಿ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಧನರಾಜ್ ಆಚಾರ್ ಪ್ರೀತಿಗೆ ಮಾರು ಹೋದ ತ್ರಿವಿಕ್ರಮ್ ಅವರು ಕೂಡ ಕಮಲಜ್ಜಿ ಕುಟುಂಬದ ಬಗ್ಗೆ ಮಧುರವಾದ ಮಾತುಗಳನ್ನ ಪೋಸ್ಟ್ ಮಾಡಿದ್ದಾರೆ. ಮನೆಯೇ ಮಂತ್ರಾಲಯ ಅಂತಾರೆ. ಆದರೆ ಈ ಮಂತ್ರಾಲಯದಲ್ಲಿ ಹಲವು ಮುಗ್ಧ ಮನಸಿನ ದೈವವನ್ನು ಕಂಡೆ. ಥ್ಯಾಂಕ್ಯು ಮಂಗಳೂರು ಹುಲಿ ಎಂದು ಧನರಾಜ್ ಆಚಾರ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಅಂತೂ ಕಂಟೆಸ್ಟೆಂಟ್ ಗಳು ಬಿಗ್ಬಾಸ್ ಮನೆಯೊಳಗೆ ಮಾತ್ರವಲ್ಲ, ಆಟದಿಂದ ಹೊರಬಂದರೂ ಗೆಳೆತನದ ಮಧುರ ಬಾಂಧವ್ಯ ಬೆಳೆಸಿಕೊಂಡು ಇದೀಗ ಸುದ್ದಿಯಾಗಿದ್ದಾರೆ.

WhatsApp Image 2025 02 21 at 5.20.40 PM
Prev Post

ಬೆಂಗಳೂರಿನ ಕಿಲಾಡಿ ಜೋಡಿಗಳಿಂದ ಮಹಾ ಮೋಸ:ಬರೋಬ್ಬರಿ 53 ಜನರಿಗೆ ಕೋಟಿ, ಕೋಟಿ ಪಂಗನಾಮ

Next Post

ಶುಕ್ರವಾರದ ಹೊಸ ಸಿನಿಮಾಗಳು: ಸಿನಿಪ್ರಿಯರಿಗೆ ಸಾಲು ಸಿನಿಮಾಗಳ ರಸದೌತಣ

post-bars

Leave a Comment

Related post