Back To Top

 ಚಾಂಪಿಯನ್ ಟ್ರೋಫಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಆಟಗಾರರಿಗೆ ಇಂಜುರಿ ಸಮಸ್ಯೆ: ಬೌಲರ್ ನ ಕೈ ಬಿಟ್ಟ ಭಾರತ
February 19, 2025

ಚಾಂಪಿಯನ್ ಟ್ರೋಫಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಆಟಗಾರರಿಗೆ ಇಂಜುರಿ ಸಮಸ್ಯೆ: ಬೌಲರ್ ನ ಕೈ ಬಿಟ್ಟ ಭಾರತ

ಐಸಿಸಿ ಕ್ರಿಕೆಟ್: ಇನ್ನೇನು ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಆದ್ರೆ, ಕಪ್ ಗೆಲ್ಲೋ ಕನಸು ಕಾಣ್ತಿರುವ ಟೀಮ್ ಗಳಿಗೆ ಮಾತ್ರ ಆತಂಕ ಹೆಚ್ಚಾಗುತ್ತಿದೆ. ಸ್ಟಾರ್ ಆಟಗಾರರ ಇಂಜುರಿ ಆಘಾತ ಪ್ರಮುಖ ತಂಡಗಳ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ. ಸ್ಟಾರ್ ಆಟಗಾರರೇ ಪಂದ್ಯದಿಂದ ಔಟ್ ಆಗಿರೋದು ನುಂಗಲಾರದ ತುತ್ತಾಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ 2 ದಿನಗಳಷ್ಟೇ ಬಾಕಿ ಉಳಿದಿದೆ. ಫೆ.19 ರಿಂದ ಶುರುವಾಗಲಿರುವ ಮಿನಿ ವಿಶ್ವಕಪ್ಪಿಗೆ ತಯಾರಿ ನಡೆಸ್ತಿರುವ ಟೀಮ್ ಗಳು, ತೆರೆ ಮರೆಯಲ್ಲೇ ಗೇಮ್ ಪ್ಲಾನ್ ರೂಪಿಸ್ತಿವೆ. ಕೆಲವೊಂದಿಷ್ಟು ತಂಡಗಳು, ದ್ವಿಪಕ್ಷೀಯ ಸರಣಿಗಳನ್ನಾಡುತ್ತಿದ್ದರೆ ನ್ಯೂಜಿಲೆಂಡ್, ಸೌತ್ ಆಫ್ರಿಕಾ, ಪಾಕ್, ತ್ರಿಕೋನ ಸರಣಿಯಲ್ಲಿ ಬ್ಯುಸಿಯಾಗಿವೆ.
ಆದ್ರೆ ಕಪ್ ಗೆಲ್ಲೋ ಕನಸು ಕಾಣ್ತಿರೋ ಪ್ರಮುಖ ತಂಡಗಳಿಗೆ ಮಾತ್ರ, ಆಟಗಾರರದ್ದೇ ಟೆನ್ಶನ್ ಆಗಿದೆ. ಇದಕ್ಕೆ ಕಾರಣ ಸ್ಟಾರ್ ಗಳ ಇಂಜುರಿ.
ಕೆಲ ಸ್ಟಾರ್ ಆಟಗಾರರು, ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನವೇ ಇಂಜುರಿಗೆ ತುತ್ತಾಗಿದ್ದಾರೆ. ಇದು ಸಹಜವಾಗೇ ತಂಡಗಳಿಗೆ ಭಾರೀ ಹಿನ್ನಡೆ ಉಂಟು ಮಾಡಿದೆ. ಇದರಿಂದ ಬ್ಯಾಲೆನ್ಸ್ ತಪ್ಪಿರೋ ಟೀಮ್ಸ್ ಕಥೆ, ಹಳಿ ತಪ್ಪಿದ ರೈಲಿನಂತಾಗಿದೆ. ಮ್ಯಾಚ್ ವಿನ್ನರ್ ಗಳೇ ಟೂರ್ನಿಯಿಂದ ಹೊರಬೀಳ್ತಿರುವ ತಂಡಗಳ ಸ್ಥಿತಿಯಂತು ಅಯೋಮಯವಾಗಿದೆ.
ಜಸ್ಪ್ರೀತ್ ಬೂಮ್ರಾ ಕೂಡ ಔಟ್
ಟೀಮ್ ಇಂಡಿಯಾ ಬೌಲಿಂಗ್ ಅಂದ್ರೆ, ನೆನಪಾಗೋದೆ ಜಸ್ಪ್ರೀತ್ ಬೂಮ್ರಾ. ಆದ್ರೀಗ ಇದೇ ಬೂಮ್ರಾ, ಚಾಂಪಿಯನ್ಸ್ ಟ್ರೋಪಿಯಿಂದಲೇ ಔಟ್ ಆಗಿದ್ದಾರೆ. ಲೋವರ್ ಬ್ಯಾಕ್ ಇಂಜುರಿಯಿಂದ ಸಂಪೂರ್ಣ ಗುಣಮುಖರಾಗದ ಕಾರಣಕ್ಕೆ ಕೊನೆ ಕ್ಷಣದಲ್ಲಿ ಕೈಬಿಟ್ಟಿದೆ. ಬಿಗ್ ಮ್ಯಾಚ್ ವಿನ್ನರ್ ಕಳೆದುಕೊಂಡಿರುವ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಅಯೋಮಯವಾಗಿದೆ. ಇದರ ಜತೆ ಟ್ರೋಫಿಗಾಗಿ ದುಬೈಗೆ ತೆರಳಿರುವ ವಿಕೆಟ್ ಕೀಪರ್ ರಿಷಬ್ ಪಂತ್ ಕೂಡ ಎಡಗಾಲಿನ ಮೊಣಕಾಲು ಗಾಯಕ್ಕೆ ಒಳಗಾಗಿದ್ದಾರೆ. ಇದು ತಂಡಕ್ಕೆ ಬಲವಾದ ಪೆಟ್ಟು ಬೀಳಲಿದೆ.
ಅದಲ್ಲದೇ ಐಸಿಸಿ ಟೂರ್ನಮೆಂಟಿನ ಹಾಟ್ ಫೇವರಿಟ್ ಅಂದ್ರೆ, ಆಸ್ಟ್ರೇಲಿಯಾ 2023ರ ಏಕದಿನ ವಿಶ್ವಕಪ್ ಗೆದ್ದಿದ್ದ ಆಸ್ಟ್ರೇಲಿಯಾ, 17 ವರ್ಷದ ಬಳಿಕ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ಸ್ ಆಗೋ ಕನಸು ಕಾಣ್ತಿದೆ. ಈಗ ಸಾಲು ಸಾಲು ಇಂಜುರಿ ಆಘಾತ ಆಸ್ಟ್ರೇಲಿಯನ್ಸ್ ಕನಸಿಗೂ ಮುಳ್ಳಾಗುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ಬೌಲಿಂಗ್ ಬಲವಾಗಿದ್ದ ಪ್ಯಾಟ್ ಕಮಿನ್ಸ್ ಆ್ಯಂಕಲ್ ಇಂಜುರಿಯಿಂದ ಟೂರ್ನಿಯಿಂದ ಔಟ್ ಆಗಿದ್ರೆ, ಹಿಪ್ ಇಂಜುರಿಯಿಂದ ಬಳಲುತ್ತಿರುವ ಜೋಶ್ ಹೇಜಲ್ವುಡ್, ಬ್ಯಾಕ್ ಇಂಜುರಿಯಿಂದ ತುತ್ತಾಗಿರುವ ಮಿಚೆಲ್ ಮಾರ್ಷ್ ರೂಲ್ಡ್ ಔಟ್ ಆಗಿದ್ದಾರೆ. ಇವರ ಜೊತೆ ಪೇಸ್ ಸೆನ್ಸೇಷನ್ ಮಿಚೆಲ್ ಸ್ಟಾರ್ಕ್ ಕೂಡ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್ ಏಕದಿನಕ್ಕೆ ಗುಡ್ ಬೈ ಹೇಳಿದ್ದಾರೆ.
ಟೀಮ್ ಇಂಡಿಯಾ, ಆಸ್ಟ್ರೇಲಿಯಾಗೆ ಮಾತ್ರವಲ್ಲ. ಚಾಂಪಿಯನ್ಸ್ ಟ್ರೋಫಿಯ ಅಂಡರ್ ಡಾಗ್ಸ್ ಆದ ಸೌತ್ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಕ್ಕೂ ಇಂಜುರಿ ಹೊಡೆತ ಬಿದ್ದಿದೆ. 2023ರ ಏಕದಿನ ವಿಶ್ವಕಪ್ ತಪ್ಪಿಸಿಕೊಂಡಿದ್ದ ಎನ್ರಿಚ್ ನೋಕಿಯಾ, ಈಗ ಬ್ಯಾಕ್ ಇಂಜುರಿ ಸಮಸ್ಯೆಗೆ ತುತ್ತಾಗಿದ್ದು, ಚಾಂಪಿಯನ್ಸ್ ಟ್ರೋಫಿ ಆಡೋ ಕನಸು ನುಚ್ಚು ನೂರಾಗಿದೆ. ಆಫ್ರಿಕಾದ ಯಂಗ್ ಗನ್ ಜೆರಾಲ್ಡ್ ಕೋಟ್ಜಿ, ಹ್ಯಾಮ್ ಸ್ಟ್ರಿಂಗ್ ಇಂಜುರಿಗೆ ತುತ್ತಾಗಿ ರೂಲ್ ಔಟ್ ಆಗಿದ್ದಾರೆ. ಇದು ಸೌತ್ ಆಫ್ರಿಕಾ ಪಾಲಿಗೆ ನುಂಗಲಾರದ ತುತ್ತಾಗಿದೆ.
ನ್ಯೂಜಿಲೆಂಡ್ನ ಲೂಕಿ ಫರ್ಗೂಸನ್, ರಚಿನ್ ರವೀಂದ್ರ ಕೂಡ ಇಂಜುರಿಯಿಂದ ಗುಣಮುಖರಾಗುತ್ತಿರುವ ಹೊತ್ತಿನಲ್ಲೇ ಯುವ ಬೌಲರ್ ಬೆನ್‌ ಸೀರ್ಸ್‌ ಟೂರ್ನಿಯಿಂದ ಔಟ್ ಆಗಿದ್ದಾರೆ. ಇವ್ರಷ್ಟೇ ಅಲ್ಲ. ಇಂಗ್ಲೆಂಡ್ನ ಯಂಗ್ ಆಲ್ರೌಂಡರ್ ಜೇಕಬ್ ಬೆಥಲ್, ಜೆಮ್ ಸ್ಮಿತ್ ಇಂಜುರಿಗಳು. ಈಗ ಹಾಟ್ ಫೇವರಿಟ್ ತಂಡಗಳ ಬಲವನ್ನ ಕುಗ್ಗಿಸಿವೆ. ಸಾಲು ಸಾಲು ಇಂಜುರಿಗಳಿಂದ ಬಡವಾಗಿರುವ ಟೀಮ್ಗಳು, ಈ ಇಂಜೂರಿ ನೋವಿನ ನಡುವೆ ಟೂರ್ನಿಯಲ್ಲಿ ಯಾರು ಯಾರು ಆಡಿ ಉತ್ತಮ ಪ್ರದರ್ಶನ ತೋರಿ ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

Prev Post

ವ್ಯಾಪಕ ಹಕ್ಕಿ ಜ್ವರ ಹಿನ್ನೆಲೆ: ಮೊಟ್ಟೆ ಈಗ ದುಬಾರಿ

Next Post

ಕಿಲಾಳಿಗೆ ಸೀಮಂತವಾಯ್ತು ಇನ್ನು ಬಾಣಂತಿ ಆರೈಕೆ

post-bars

Leave a Comment

Related post